ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೮.] ದ್ವಿತೀಯಸ್ಕಂಧವು. ಭಗವದ್ಭಕ್ತರೂಕೂಡ,ಬಹಳದಿನಗಳವರೆಗೆ ಸಂಸಾರಬಾಥೆಯಲ್ಲಿ ಸಿಕ್ಕಿ ನರಳಿ, ಆತನ ಕೃಪೆಯಿಂದ ಅದನ್ನು ತಪ್ಪಿಸಿಕೊಂಡು,ಅವನ ಪಾದಾರವಿಂದಗಳನ್ನು ಸೇರಿದಮೇಲೆ,ಅದನು ಬಿಟ್ಟು ಬರುವುದಕ್ಕೆ ಎಷ್ಟು ಮಾತ್ರವೂ ಇಷ್ಟಪಡಲಾ ರರು. ಇದಲ್ಲದೆ ಸಹಜವಾಗಿ ಭತಿಕದೋಷವಿಲ್ಲದ ಜೀವನಿಗೆ, ಆ ಭೂತಸೂ ಕ್ಷಗಳ ಸಂಯೋಗದಿಂದಲೇ ಈ ಶರೀರಸಂಬಂಧವುಂಟಾಗುವುದೆಂದು ಕೇಳಿ ದೆನು. ಜೀವನಿಗೆ ಈ ವಿಧವಾದ ದೇಹಸಂಬಂಧವುಂಟಾಗುವುದು ಬೇರೆಯಾ ವ ಕಾರಣವೂ ಇಲ್ಲದೆ ಸೈಜ್ಞೆಯಿಂದಲೇ ಸಂಭವಿಸುವುದೇ?ಅಥವಾ ಇದಕ್ಕೆ ಕಾರಣವೇನಾದರೂ ಉಂಟೆ? ಆವಿಷಯದಲ್ಲಿ ನಿನಗೆ ತಿಳಿದ ಸಂಗತಿಯನ್ನು ನನಗೂವಿವರಿಸಬೇಕು. ಸಮಸ್ತಲೋಕಗಳಸ್ಥಿತಿಗೂ ಕಾರಣವಾಗಿ ಆಲೋ ಕಸನ್ನಿವೇಶವನ್ನೇ ಆಕಾರವನ್ನಾಗಿ ಹೊಂದಿದ ಕಮಲವು, ಯಾವನ ನಾಭಿ ಯಿಂದ ಮೊದಲು ಹೊರಟಿತೋ, ಅಂತಹ ಪರಮಪುರುಷನ ಸ್ವರೂಪವು, ಬೇರೆಬೇರೆಯಾಗಿ ವಿಭಾಗಿಸಿ ಇಷ್ಟ ಎಂದು ನಿರ್ಣಯಿಸಬಹುದಾದ ಅವ ಯವವುಳ್ಳುದೆಂದೂ, ನಿಮ್ಮ ವಾಕ್ಯದಿಂದ ತೋರುವುದು. ಅಂತಹ ಜಗತ್ಸಾ ರಣನಾದ ಪುರುಷನು (ವಿರಾಟ್ಟುರುಷನು ಎಷ್ಟು ಪ್ರಮಾಣವುಳ್ಳವನು.?ಜಗ ರೂಪವಾದ ಪದ್ಯದಲ್ಲಿ ಹುಟ್ಟಿದ ಬ್ರಹ್ಮನು ಯಾವನ ಅನುಗ್ರಹದಿಂದ ಈ ಲೋಕವನ್ನು ಸೃಷ್ಟಿಸತಕ್ಕ ಶಕ್ತಿಯನ್ನು ಪಡೆದಿರುವನು ? ಮತ್ತು ಆ ಬ್ರಹ್ಮನು ಪರಮಪುರುಷನ ರೂಪವನ್ನು ಯಾವವಿರದಿಂದ ಕಂಡುಕೊಂಡ ನು? ಇದಲ್ಲದೆ ಹಿಂದೆ ನೀವು ಹೇಳಿದ ವಾಕ್ಯಗಳಿಂದ ಸರೈಶ್ವರನೂ ಕೂಡ ಸಂಸಾರದಲ್ಲಿರುವ ಜೀವನಂತೆ ಒಬ್ಬನಾಗಿ ಗೋಚರಿಸಿದನೆಂದು ಹೇಳಿದಹಾ ಗೆ ತೋರುವುದು. ಹಾಗಿದ್ದ ಪಕ್ಷದಲ್ಲಿ ಜೀವನಿಗಿಂತಲೂ ಪರಮಾತ್ಮನಲ್ಲಿರು ವ ವಿಶೇಷವೇನು? ಆ ಪರಮಪುರುಷನು, ಸೃಷ್ಟಿ ಸ್ಥಿತಿಸಂಹಾರಗಳಿಗೆ ಕಾರಣ ವಾದ ಮಾಯೆಯನ್ನು ಬಿಟ್ಟು,ಲೋಕವ್ಯಾಪಾರಗಳಲ್ಲಿಯೂ ವಿಮುಖನಾಗಿ ಸಮಸ್ತಗುಣಗಳಿಗೂ ಆಶ್ರಯನಾಗಿ ಯಾವಸ್ಥಳದಲ್ಲಿ ಶಯನಿಸುತ್ತಿರುವನು. ಪೂರೈಕಲ್ಪದಲ್ಲಿ ಅನಿರುದ್ಧನಿಂದ ಹುಟ್ಟಿದ ಚತುರ್ಮುಖನ ಅವಯವದಿಂದ ಲೇ ಸಮಸ್ತಲೋಕಪಾಲಕರಿಂದ ಕೂಡಿದ ಈ ಲೋಕಗಳೆಲ್ಲವೂ ನಿರ್ಮಿತ ವಾದುದೆಂದು ಹೇಳಿದರಷ್ಟೆ?ಇದರಿಂದ ಬ್ರಹ್ಮನು ಪೂರೈಕಲ್ಲಾನುಸಾರವಾ