ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಲೆಲೆ ಶ್ರೀಮದ್ಭಾಗವತವು [ಅಧ್ಯಾ. ೮. ಗಿಯೇ ಸೃಷ್ಟಿಸಿದನೆಂಬ ಶ್ರುತಿಗೆ ವಿರೋಧವು ತೋರುವುದು. ಈ ವಿರೋ ಧಕ್ಕೆ ಪರಿಹಾರವೇನೆಂಬುದನ್ನೂ ತಿಳಿಸಬೇಕು. ಮತ್ತು ಅವಾಂತರಕಲ್ಪ ಕ್ಯೂ, ಮಹಾಕಲ್ಪಕ್ಕೂ ಇರುವ ಕಾಲಪ್ರಮಾಣದ ಭೇದವೇನು? ಭೂತ ಭವಿಷ್ಯದ್ವರ್ತಮಾನರೂಪವಾದ ಕಾಲವು, ಗ್ರಹಗಳ ಸಂಚಾರವನ್ನನುಸರಿಸಿ ಯಾವ ರೀತಿಯಾಗಿ ಎಣಿಸಲ್ಪಡುವುದು ? ಮನುಷ್ಯರ ಆಯುಃಪ್ರಮಾಣ ವೆಷ್ಟು? ದೇವತೆಗಳಿಗೂ, ಪಿತೃದೇವತೆಗಳಿಗೂ, ನಿರ್ಣಯಿಸಲ್ಪಟ್ಟ ಆಯುಃಕಾ ಲವೆಷ್ಟು? ಕಾಲದಲ್ಲಿ ನಿಮಿಷವೇ ಮೊದಲಾದ ಸೂಕ್ಷ್ಮ ವಿಭಾಗಗಳನ್ನೂ , ಸಂ ವತ್ಸರವೇ ಮೊದಲಾದ ದೊಡ್ಡ ವಿಭಾಗಗಳನ್ನೂ ನಿರ್ಣಯಿಸುವ ಕ್ರಮವು ಹೇಗೆ ? ಯಾವಯಾವ ಕರ್ಮಗಳಿಂದ ಯಾವಯಾವ ಲೋಕವು ಲಭಿಸು ವುದು ? ಕರ್ಮಗಳಲ್ಲಿರುವ ಭೇದವೆಷ್ಟು ? ಕರೆಗಳಿಂದ ಸುಲಭವಾಗಿ ಫಲಗ ಳನ್ನು ಕೈಗೂಡಿಸಿಕೊಳ್ಳುವುದಕ್ಕೆ ಯಾವಕ್ಷೆತ್ರವು ಉತ್ತಮವೆನಿಸುವುದು ? ಯಾವಯಾವ ಕರಗಳಿಗೆ ಯಾವಯಾವ ದೇವತೆಗಳಿಂದ ಫಲಪ್ರಾಪ್ತಿಯಾ ಗುವುದು ? ಸತ್ಯಾದಿಗುಣಗಳ ಪರಿಣಾಮಕ್ರಮವೇನು ? ಆ ಗುಣಗಳು ದೇವಮನುಷ್ಟಶರೀರಗಳಾಗಿ ಮಾರ್ಪಡುವ ರೀತಿಯನ್ನೂ, ಜೀವಾತ್ರ ಗಳು ದೇವಾದಿಶರೀರಗಳನ್ನು ಪಡೆಯುವುದಕ್ಕೆ ಕಾರಣವೇನೆಂಬುದನ್ನೂ ವಿಶದವಾಗಿ ತಿಳಿಸಬೇಕು. ಭೂಮಿ, ಪಾತಾಳ, ದಿಕ್ಕುಗಳು, ಆಕಾಶ, ಸೂರ ಚಂದ್ರಾದಿಗಳೂ, ಅಶ್ವಿನಿ ಮೊದಲಾದ ತಾರೆಗಳು, ಪಕ್ವತಗಳು, ನದಿಗಳು, ಸಮುದ್ರಗಳು, ದ್ವೀಪಗಳು, ಇವೆಲ್ಲವುಗಳ ಉತ್ಪತ್ತಿ ಕ್ರಮವೇನು ? ಇವುಗಳ ಲ್ಲಿರುವ ಪ್ರಾಣಿಗಳು ಹುಟ್ಟಿದ ರೀತಿಯನ್ನೂ ತಿಳಿಸಬೇಕು. ಬ್ರಹ್ಮಾಂಡದ ಮತ್ತು ಅದರ ಹೊರಗಿನ ಆವರಣದ ಅಳತೆಯೆಷ್ಟು ? ಇವುಗಳೆ ಳಗಿನ ಬೇರೆ ಬೇರೆ ವಸ್ತುಗಳ ಸ್ವರೂಪವೇನು ? ಮಹಾತ್ಮರಾದ ಭಗವದ್ಯ ಕ್ಯರ ಚರಿತ್ರವನ್ನೂ , ವರ್ಣಾಶ್ರಮಗಳ ಸ್ವಭಾವಭೇದವನ್ನೂ, ವಿವರಿಸ ಬೇಕು! ಮಹಾದ್ಭುತಗಳಾದ ಭಗವದವತಾರ ಚರಿತ್ರಗಳನ್ನೂ , ಯುಗಭೇದ ವನ್ನೂ, ಒಂದೊಂದು ಯುಗದ ಕಾಲಪ್ರಮಾಣವನ್ನೂ, ಆಯಾ ಯುಗಗ ಳಲ್ಲಿ ನಡೆಯುವ ಧರ್ಮಗಳನ್ನೂ , ವಿಶದವಾಗಿ ತಿಳಿಸಬೇಕು. ಮನುಷವರ್ಗ ಕ್ಕೆ ಸಾಮಾನ್ಯವಾದ ಧರ್ಮವಾವುದು ? ವರ್ಣಾಶ್ರಮಭೇದಗಳನ್ನು ಕುರಿ