ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು. ಹೀಗೆ ಸನಕಾದಿಮುನಿಗಳು ನಾರದನಿಗೆ ಭಾಗವತಮಹಿಮೆಯನ್ನು ತಿಳಿಸು ತಿರುವಾಗ, ಆ ಸಭಾಮಧ್ಯದಲ್ಲಿ ಎಲ್ಲರಿಗೂ ಆಶ್ರವುಂಟಾಗುವಂತೆ ಒಂ ದು ವೈಚಿತ್ರವು ನಡೆಯಿತು. ಭಕ್ತಿಯು ಕೇವಲತರುಣವಯಸ್ಸುಳ್ಳ ತನ್ನ ಇಬ್ಬರು ಮಕ್ಕಳನ್ನೂ ಕರೆದುಕೊಂಡು, ಪರಮಸಂತೋಷಭರಿತಳಾಗಿ, ಗೋ ವಿಂದನಾಮೋಚ್ಛಾರಣವನ್ನು ಮಾಡುತ್ತ ಸಭಾಮಧ್ಯದಲ್ಲಿ ಬಂದು ನಿಂತಳು. ಎಲ್ಲರೂ ಆ ಮೂವರ ರೂಪಯೌವನಾದಿಗಳನ್ನು ನೋಡಿ ಆಶ್ಚರಭರಿತರಾ ದರು. ಅಷ್ಟೊಂದು ಜೀರ್ಣದಶೆಯಲ್ಲಿದ್ದ ಭಕ್ತಿಜ್ಞಾನವೈರಾಗ್ಯಗಳಿಗೆ ಹೀಗೆ ಯೌವನೋದಯವುಂಟಾಗುವುದಕ್ಕೆ ಕಾರಣವೇನೆಂದು ಮನಸ್ಸಿನಲ್ಲಿ ಚಿಂತಿ ಸುತಿದ್ದರು. ಆಗ ಮಷಿಕುಮಾರರು ಭಾಗವತ ಕಥಾಮಹಿಮೆಯೇ ಇದಕ್ಕೆ ಕಾರಣ” ವೆಂದು ಹೇಳಿ, ಅವರೆಲ್ಲರಿಗೂ ಸಂದೇಹನಿವೃತ್ತಿಯನ್ನುಂಟುಮಾ ಡಿದರು, ಆಮೇಲೆ ಭಕ್ತಿಯು ಋಷಿಕುಮಾರರಿಗೆ ನಮಸ್ಕರಿಸಿ (ಎಲೈ ಮ ಹಾತ್ಮರೇ! ಕಲಿದೋಷನಿಂದ ಜೀರ್ಣಳಾದ ನಾನು,ನಿಮ್ಮ ಅನುಗ್ರಹಬಲದಿಂ ದ ತಿರುಗಿ ಈ ವಿಧವಾದ ದೇಹಪುಷಿಯನ್ನು ಹೊಂದಿದೆನು. ಇನ್ನು ಮುಂ ದೆ ನನಗೆ ಸುಖವಾದ ನಿವಾಸಸ್ಥಾನವಾವುದು? ಈ ಕಲಿಕಾಲದಲ್ಲಿ ನನ್ನನ್ನು ಪುರಸ್ಕರಿಸುವವರಾರು?”ಎಂದಳು. ಅದಕ್ಕಾ ಋಷಿಕುಮಾರರುಎಲೆ ದೇವಿ! ನೀನು ಯಾವಾಗಲೂ ಪಿಷ್ಟಭಕ್ತರ ಮನಸ್ಸಿನಲ್ಲಿ ಸುಖವಾಗಿರಬಹುದು, ಅಲ್ಲಿ ನಿನ್ನನ್ನು ಕಲಿಯೋಷಗಳು ಕಣ್ಣೆತ್ತಿಯೂ ನೋಡಲಾರವು.” ಎಂದರು ಆದಮೊದಲು ಭಕ್ತಿಗೆ ಈ ಕಲಿಕಾಲದಲ್ಲಿ ವಿಷ್ಣು ಭಕ್ತರ ಮನಸ್ಸೇ ನಿರಪಾ ಯವಾದ ಸ್ಥಾನವಾಯಿತು.”ಎಂದು ಹೇಳಿ ಸನಕಾದಿಗಳು ತಿರುಗಿ ನಾರದನ ನ್ನು ಕುರಿತು, (ಎಲೈ ನಾರದಮುನೀಂದ್ರನೆ! ಇದೇ ಭಾಗವತದ ಮಹಿಮೆ ಯು, ಈ ಭಾಗವತವೆಂಬುದು ಸಾಕ್ಷಾತ್ಪರಬ್ರಹ್ಮ ಸ್ವರೂಪವಾದುದು. ಇದ ನ್ನು ಪಠನ ಮಾಡಿದವರೂ,ಕೇಳಿದವರೂ ಸಾಕ್ಷಾತ್ ಶ್ರೀಕೃಷ್ಣನ ಸಾಮ್ಯವ ನೈ ಹೊಂದುವರು.ಲೋಕದಲ್ಲಿ ಇದಕ್ಕೆ ಸ ಾನವಾದ ಧರ್ಮವು ಬೇರೊಂ ದೂ ಇಲ್ಲ. ಎಲೈ ಮಹರ್ಷಿಯೆ! ಈ ಸಪ್ತಾಹಶ್ರವಣದಿಂದ ಎಂತಹ ಮ ಹಾಪಾತಕಗಳಾದರೂ ನಿವಾರಣಹೊಂದುವುವು. ಬ್ರಹ್ಮ ಸ್ನಾಪಹಾರ ವ್ಯಭಿ ಚಾರಗಳೇ ಮೊದಲಾದ ಪಾಪಕಾರಗಳಿಂದುಂಟಾದ ಬ್ರಹ್ಮರಾಕ್ಷಸ ಪಿಶಾ