ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧ ಅಧ್ಯಾ. ೯.] ದ್ವಿತೀಯಸ್ಕಂಥವು. ಶುಕಮುನಿಯು ಪರೀಕ್ಷಿದ್ರಾಜನ ಪ್ರಶ್ನೆಗಳಿಗೆ ಕ್ರಮ | .. 1 ವಾಗಿ ಉತ್ತರವನ್ನು ಹೇಳಿದುದು, ಹೀಗೆ ಪ್ರಶ್ನೆ ಮಾಡಿದ ಪರೀಕ್ಷಿದ್ರಾಜನನ್ನು ಕುರಿತು ಶುಕಮುನಿಯು 'ಎಲೈ ರಾಜೇಂದ್ರನೆ! ಜ್ಞಾನಸ್ವರೂಪನಾಗಿಯೂ, ದೇಹಾದಿರೂಪದಿಂದಿರು ವ ಪ್ರಕೃತಿಗಿಂತಲೂ ವಿಲಕ್ಷಣನಾಗಿಯೂ ಇರುವ ಜೀವನಿಗೆ, ಶಬ್ದಾದಿವಿಷ ಯಗಳನ್ನು ಅನುಭವಿಸತಕ್ಕ ಭೋಕ್ತ್ವ ವೆಂಬ ಸಂಬಂಧವು, ಆ ಪರಮಪುರು ಮನ ಮಾಯಾಬಲದಿಂದ ಹೊರತು ಬೇರೆ ಯಾವವಿಧದಿಂದಲೂ ಸಂಭವಿಸಿದು ದಲ್ಲ! ಕನಸನ್ನು ಕಾಣುವವನು ಆ ಕಾಲದಲ್ಲಿ ನಿದ್ರೆಯಿಂದ ನಿಶ್ಲೇಷ್ಯನಾಗಿ, ಸತ್ತಹಾಗೆ ಬಿದ್ದಿರುವಾಗಲೂ, ಬೇರೆಬೇರೆ ವಸ್ತುಗಳನ್ನು ತಾನು ಅನು ಭವಿಸಿದಹಾಗೆ ಭ್ರಮೆಗೊಳ್ಳುವುದು ಆ ಭಗವಂತನ ಮಾಯೆಯಿಂದಲ್ಲವೆ ? ಹಾಗೆಯೇ ಇದೂ ಕಾರಣಾಂತರದಿಂದ ಸಂಭವಿಸಲಾರದು! ಜೀವಾತ್ಮರಿಗೆ ಅವರವರ ಪುಣ್ಯಪಾಪಗಳಿಗೆ ತಕ್ಕಂತೆ, ಆಯಾಕಾಲಗಳಲ್ಲಿ ಅನುಭವಿಸತಕ್ಕು ದಾದ ದೇವ ಮನುಷ್ಯಾದಿಶರೀರಗಳನ್ನು ಪರಮಪುರುಷನು, ತನ್ನ ಮಾಯೆ ಯಿಂದ ಸೃಷ್ಟಿಸಿ, ಅವರವರಿಗೆ ಕೊಡುವನು. ಅವನ ಮಾಯೆಯಿಂದಲ್ಲದೆ ಬೇರೆ ಯಾವ ಕಾರಣದಿಂದಲೂ ಈ ಕಾರವು ನಡೆಯಲಾರದು. ಆದುದರಿಂದ ಜೀವಾತ್ಮನು ಸಹಜವಾಗಿ ಜ್ಞಾನಸ್ವರೂಪನಾಗಿದ್ದರೂ, ಆ ಸ್ವರೂಪವುಮಾ ಯೆಯ ಕಾರಗಳಾದ ದೇಹಾಟಗಳಿಂದ ಮರೆಸಲ್ಪಡುವುದು. ಆದುದರಿಂದ ಭ ಗವನ್ನಾಯೆಯೇ ಜೀವನ ದೇಹಾರಂಭಕ್ಕೆ ಕಾರಣವು. ಭಗವನ್ಮಾಯೆಯು ಪ್ರಕೃತಿಯು ) ಆಶ್ರಕರಗಳಾದ ಅನೇಕರೀತಿಗಳಿಂದ ಪರಿಣಾಮಹೊಂದುವ ಸ್ವಭಾವವುಳ್ಳುದು. ಇದರ ಕಾರದಿಂದ ಮರೆಸಲ್ಪಟ್ಟ ಸಹಜಸ್ವರೂಪವುಳ್ಳ ಜೀವನು, ಮೇಲೆ ಕಾಣುತ್ತಿರುವ ದೇವಾದ್ಯಾಕಾರಗಳನ್ನೇ ಆತ್ಮನಲ್ಲಿ ಆರೋ ಪಿಸಿಕೊಂಡು,ಬಹುರೂಪಗಳನ್ನು ಹೊಂದುತ್ತಿರುವಂತೆ ಕಾಣುವನು. ಜೀವನು ವಾಸ್ತವದಲ್ಲಿ ಪ್ರಕೃತಿಗಿಂತಲೂ ವಿಲಕ್ಷಣವಾಗಿದ್ದರೂ, ಮಾಯೆಯ ಗುಣ ಗಳಾದ ಸತ್ವರಜಸ್ತಮಸ್ಸುಗಳ ಕಾಠ್ಯಗಳೆನಿಸಿಕೊಂಡ ಶಬ್ದಾದಿವಿಷಯಗಳಲ್ಲಿ ಆಸಕ್ತನಾಗಿ, ದೇಹಾತ್ಮ ವಿವೇಚನೆಯಿಲ್ಲದೆ ನಾನು, ನನ್ನದು” ಎಂಬ ಆ ಹಂಕಾರ ಮಮಕಾರಗಳಲ್ಲಿ ಸಿಕ್ಕಿ ಬಿದ್ದು ಸಂಸಾರಾಸಕ್ತನಾಗಿರುವನು.