ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೯೨ ಶ್ರೀಮದ್ಭಾಗವತವು [ಅಧ್ಯಾ. ೯. ಹೀಗೆ ಸಂಸಾರಬಂಧದಲ್ಲಿ ಸಿಕ್ಕಿದವನಿಗೂಕೂಡ ಮೋಕ್ಷಸಾಧನವಾದ ಜ್ಞಾ ನವೊಂದುಂಟು ! ಯಾವಾಗ ಜೀವನು, ತನಗೆ ಮಾಯಾಸಂಬಂಧದಿಂದುಂ ಟಾಗಿರುವ ಅಹಂಕಾರ ಮಮಕಾರಾದಿಗಳನ್ನು ಬಿಟ್ಟು, ಸಹಜವಾದ ತನ್ನ ಶುದ್ಧಸ್ವರೂಪವು ಕಾಲಕ್ಕೂ, ಪ್ರಕೃತಿಗೂ ಈಡಾದುದಲ್ಲವೆಂದೂ, ಪಾಪ ಸಂಬಂಧವಾಗಲಿ, ಹಸಿವು, ಬಾಯಾರಿಕೆ, ಮುಪ್ಪ, ಸಾವು, ದುಃಖ, ಮೊದಲಾದ ಕಷ್ಟಗಳಾಗಲಿ ಇಲ್ಲದೆ, ಅಷ್ಟಗುಣಗಳಿಗೂ ನೆಲೆಯಾದು ದೆಂದೂ, ತನ್ನ ಮಹಿಮೆಯನ್ನು ತಾನು ಚೆನ್ನಾಗಿ ನಿಶ್ಚಯಜ್ಞಾನದಿಂದ ತಿಳಿ ಯುವನೋ, ಆಗಲೇ, ಪ್ರಕೃತಿ, ಮತ್ತು ಕಾಲವೆಂಬಿವುಗಳ ನಿರ್ಬಂಥವನ್ನು ತಪ್ಪಿಸಿಕೊಂಡು, ಶಬ್ಬಾ ಡಿವಿಷಯಗಳಲ್ಲಿಯೂ ವಿಮುಖನಾಗಿ, ಭಗವ ದೃಕಿಯಿಂದುಂಟಾದ ಆನಂದಾತಿಶಯದಲ್ಲಿರುವನು. * (ಕಾಲದಿಂದಲೂ, ಪ್ರಕೃತಿಯಿಂದಲೂ ಬದ್ಧನಾಗದೆ, ಇವುಗಳಿಗೆ ತಾನೇ ನಿಯಾಮಕನಾಗಿ, ಸ ತ್ಯಕಾಮತ್ಯಾದಿಗುಣಗಳುಳ್ಳವನಾಗಿರುವ ಪರಮಾತ್ಮನ ಮಹಿಮೆಯನ್ನು ಯಾವಾಗ ತಿಳಿಯುವನೋ, ಆಗ ತಾನೂ ಕಾಲಪ್ರಕೃತಿಗಳನ್ನು ಮೀರಿ, ಶ ಬ್ಲಾದಿವಿಷಯಗಳಿಂದ ವಿಮುಖನಾಗುವನು). ಜೀವಾತ್ಮನಲ್ಲಿ ಪಾಪನಿ ವೃತ್ತಿ, ಮುಂತಾದ ಸ್ವಭಾವಗುಣಗಳು ತಲೆದೋರುವುದೇ ಮುಕ್ಯ ದಶೆ ಯಲ್ಲಿರುವ ಸ್ವರೂಪವು. ಈ ಸ್ಥಿತಿಯಲ್ಲಿ ಮಹಾನಂದಸ್ವರೂಪನಾದ ಪರಮಾತ್ಮನನ್ನು ಅನುಭವಿಸುವುದೂ, ಆ ಪರಮಾತ್ಮನಿಗೆ ಶರೀರದಂತಿ ರುವ ತನ್ನ ಸ್ವರೂಪವನ್ನು ಅನುಭವಿಸುವುದೂ, ಇವೆರಡೂ ಆ ಜೀವನಿಗೆ ಶಾದಿವಿಷಯಗಳಲ್ಲಿರುವ ಆಸೆಯನ್ನು ತಾನೇ ನೀಗಿಸಿಬಿಡುವುದು. ಮೋಕ್ಷ ದಶೆಯಲ್ಲಿ ಜೀವಾತ್ಮನು ಯಾವಸ್ಥಿತಿಯಲ್ಲಿರುವನೆಂಬುದನ್ನು ಇದುವರೆ ಗಿನ ವಿಷಯಗಳಿಂದ ತಿಳಿಸಿದೆನು. ಇನ್ನು ಮುಂದೆ ಜೀವನಂತೆಯೇ ಭಗವಂತನೂಕೂಡ ಲೋಕರೂಪಗಳಾದ ಅವಯವಗಳಿಂದ ಪರಿಮಿತ ವಾದ ಶರೀರವುಳ್ಳವನಾಗಿರುವಾಗ ಅವನನ್ನು ಮಾತ್ರ ಉಪಾಸನವನ್ನು ಮಾಡಿ ಮೋಕ್ಷವನ್ನು ಪಡೆಯುವುದು ಹೇಗೆ ಸಾಧ್ಯ” ವೆಂದು ನೀನು ಕೇಳಿ ದುದಕ್ಕೆ ಸಮಾಧಾನವನ್ನು ಹೇಳುವೆನು ಕೇಳು ವ್ರತನಿಷ್ಠರಾದ ಮಹಾ

  • ಇಲ್ಲಿ ಇದೂ ಒಂದು ಅಕ್ಷಾಂತರವುಂಟು.

= = =