ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೯.] ದ್ವಿತೀಯಸ್ಕಂಧವು. ೨೯೩ ತ್ಮರಿಂದ ಉಪಾಸ್ಯನಾದ ಭಗವಂತನು, ಮೊದಲು ಬ್ರಹ್ಮದೇವನಿಗೆ ಅಪ್ರಾ ಕೃತವಾದ ತನ್ನ ದಿವ್ಯಮಂಗಳವಿಗ್ರಹವನ್ನು ತೋರಿಸಿದನು. ಜೀವನಿಗಿಂತಲೂ ವಿಲಕ್ಷಣವಾದ ತನ್ನ ನಿಜಸ್ಥಿತಿಯನ್ನು ಬ್ರಹ್ಮನಿಗೆ ತಿಳಿಸಬೇಕೆಂದು ಆಗ ಭಗವಂತನು ತಾನಾಗಿಯೇ ಉಪದೇಶಿಸಿದ ವಿಷಯಗಳನ್ನೂ ಹೇಳುವೆನು ಕೇಳು. ಸರೂಭೂತಪ್ರಭುವಾಗಿಯೂ, ಧರ್ಮೋಪದೇಶಕನಾಗಿಯೂ, ಆದಿ ದೇವನಾಗಿಯೂ ಇರುವ ಚತುರ್ಮುಖನು, ಭಗವಂತನ ನಾಭಿಕಮಲದಿಂದ ಹುಟ್ಟಿದಮೇಲೆ, ಆಗ ತಾನಿದ್ದ ಸ್ಥಳವನ್ನು ಪರೀಕ್ಷಿಸಿ ನೋಡುವುದಕ್ಕಾಗಿ, ಮೊದಲು ಜಲದಲ್ಲಿ ಮುಳುಗಿ, ಏನನ್ನೂ ಕಾಣದೆ, ತಿರುಗಿ ತಾನಿದ್ದ ಸ್ಥಳಕ್ಕೆ ಬಂದು, ಅಲ್ಲಿ ಜಗತೃಷ್ಟಿಯನ್ನಾರಂಭಿಸುವುದು ಹೇಗೆಂದು ಯೋಚಿಸು ತಿದ್ದನು. ಹೀಗೆ ಆಲೋಚಿಸುತ್ತಿದ್ದ ಬ್ರಹ್ಮದೇವನಿಗೆ ಎಷ್ಟೆಷ್ಟು ವಿಧದಿಂದ ಚಿಂತಿಸಿದರೂ, ಸೃಷ್ಟಿ ವಿಷಯಕವಾದ ತಿಳುವಳಿಕೆಯು ಹುಟ್ಟದೆ ಹೋಯಿ ತು. ಇದರಿಂದ ಬ್ರಹ್ಮನು ಚಿಂತಾಕುಲನಾಗಿದ್ದ ಸಮಯದಲ್ಲಿ, ಒಮ್ಮೆ ಆ ಪ್ರಳಯಸಮುದ್ರಜಲಮಧ್ಯದಿಂದ ಎರಡಕ್ಷರಗಳುಳ್ಳ ಯಾವುದೋ ಒಂದು ವಾಕ್ಯವು ಎರಡಾವರ್ತಿ ಉಚ್ಚರಿಸಲ್ಪಟ್ಟಹಾಗೆ ಕೇಳಿಸಿತು. ರಾಜಾ! ಆ ಅಕ್ಷರ ದ್ವಯವೇ ಸಮಸ್ಯ ಯೋಗೀಶ್ವರರಿಗೂ ಧನರೂಪವು ! ಆ ಶಬ್ದದಲ್ಲಿ ಕಕಾರದಿಂದ ಮಕಾರದವರೆಗಿರುವ ಇಪ್ಪತೈದು ವರ್ಗಾಕ್ಷರಗಳಲ್ಲಿ ಹರಿನಾ ರನೆಯ ಅಕ್ಷರವಾದ ತಕಾರವೂ, ಇಪ್ಪತ್ತೊಂದನೆಯ ವರ್ಣವಾದ ಪ್ರಕಾರ ವೂ ಕಲೆತು ತಪ” ವೆಂಬ ಪದವು ಸಿದ್ಧಿಸಿತು. ಹೀಗೆ ತಪ!ತಪ!” ವೆಂದು ಎರಡಾವರ್ತಿ ಉಚ್ಚರಿಸಲ್ಪಟ್ಟ ವಾಕ್ಯವನ್ನು ಕೇಳಿ ಚತುರ್ಮುಖನು, ಆ ವಾ ಕ್ಯವು ಎಲ್ಲಿಂದ ಹೊರಟಿತೆಂಬುದನ್ನು ಪರೀಕ್ಷಿಸುವುದಕ್ಕಾಗಿ ನಾಲ್ಕು ದಿಕ್ಕುಗಳನ್ನೂ ತಿರುಗಿ ತಿರುಗಿ ನೋಡಿದನು. ಆದರೆ ಅಲ್ಲಿ ಸುತ್ತಲೂ ಮಹಾಭಯಂಕರವಾದ ಸಮುದ್ರವೊಂದಲ್ಲದೆ ಬೇರೊಂದೂ ಕಾಣಿಸಲಿಲ್ಲ. ಇದರಿಂದ ಬ್ರಹ್ಮನು ಮುಂದೆ ಮಾಡಬೇಕಾದ ಕಾಧ್ಯವೇನೂ ತೋರದೆ ತಿರುಗಿ ತನಗೆ ಜನ್ಮ ಸ್ಥಾನವಾದ ಅ ಕಮಲದಲ್ಲಿಯೇ ಸೇರಿ, ಸ್ವಲ್ಪ ಕಾಲದ ವರೆಗೆ ತನ್ನಲ್ಲಿ ತಾನೇ ಆಲೋಚಿಸುತ್ತಿದ್ದು, ತಪಸ್ಸನ್ನು ಮಾಡಬೇಕೆಂದು ನಿಶ್ಚಯಿಸಿಕೊಂಡನು. ಹೀಗೆ ನಿಶ್ಚಯಿಸಿಕೊಂಡು ನಿಶ್ಚಲಚಿತ್ತನಾಗಿ, ಜ್ಞಾ