ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೪ ಶ್ರೀಮದ್ಭಾಗವತವು [ಅಧ್ಯಾ, f, ನೇಂದ್ರಿಯ ಕನ್ನೇಂದ್ರಿಯಗಳನ್ನು ನಿಗ್ರಹಿಸಿ,ಶ್ವಾಸವನ್ನು ತಡೆದು, ಅಮೋ ಫುಸಂಕಲ್ಪನಾಗಿ, ಸಮಸ್ತಲೋಕಗಳನ್ನೂ ತನಗೆ ಪ್ರಕಾಶಗೊಳಿಸುವಂತೆ ಮಾಡುವ ಶಕ್ತಿಯುಳ್ಳ ಆ ತಪಸ್ಸನ್ನು ಒಂದು ಸಹಸ್ರದೇವವರುಷಗಳವರೆಗೆ ನಡೆಸಿದನು.ಇದರಿಂದ ಪ್ರಸನ್ನನಾದ ನಾರಾಯಣನು,ಬ್ರಹ್ಮದೇವನಿಗೆ ಪ್ರತ್ಯ ಕ್ಷನಾಗಿ, ಅವನಿಗೆ ಮನುಷ್ಯಲೋಕವನ್ನೂ ತನಗೆ ನಿವಾಸಭೂತವಾದ ವೈ ಕಂಠ ಲೋಕವನ್ನೂ ತೋರಿಸಿದನು ! ರಾಜೇಂದ್ರಾ! ಆ ವೈಕುಂಠದ ಮಹಾ ವೈಭವವನ್ನು ಕೇಳಬೇಕೆ! ಅದಕ್ಕಿಂತಲೂ ಉತ್ತಮಸ್ಥಾನವು ಬೇರೊಂದಿಲ್ಲ ! ಅಲ್ಲಿ,ಅವಿದ್ಯೆ,ಕರ ವಾಸನೆ, ಪ್ರಕೃತಿಸಂಬಂಧ, ಮುಂತಾದ ದೋಷಗಳಾಗಲಿ, ಅಹಂಕಾರ ಮಮಕಾರಗಳಿಂದುಂಟಾಗುವ ಬುದ್ಧಿಮೋಹವಾಗಲಿ, ಎಷ್ಟು ಮಾತ್ರವೂ ಸಂಭವಿಸಲಾರದು. ತಮ್ಮನ್ನು ಶರೀರವಾಗಿ ಹೊಂದಿರುವ ಪರ ಮಾತ್ಮನನ್ನು ಅನುಭವಿಸುವ ನಿತ್ಯಮುಕ್ತರಿಗೆ ಅದೇ ವಾಸಸ್ಥಾನವಾಗಿದ್ದು ವುದು. ಅಲ್ಲಿ ಆಧ್ಯಾತ್ಮಿಕಾಹಿತಾಪತ್ರಯಗಳಾಗಲಿ, ಅಜ್ಞಾನವಾಗಲಿ, ಭ ಯವಾಗಲಿ, ರಜಸ್ತಮೋಗುಣಗಳಾಗಲಿ, ಇವುಗಳಿಂದ ಮಿಶ್ರವಾದ ಸತ್ವಗು ಣವಾಗಲಿ ಎಷ್ಟು ಮಾತ್ರವೂ ತಲೆದೋರದೆ, ಕೇವಲ ಸತ್ವಗುಣವೊಂ ದೇ ಇರುವುದರಿಂದ, ಆ ಸ್ಥಾನವು ಶುದ್ಧಸತ್ವಮಯವೆನಿಸುವುದು. ಅಲ್ಲಿರುವ ನಿತ್ಯಮುಕ್ತರನ್ನು ದೇವಾಸುರರೂಕೂಡ ಪೂಜಿಸುವರು. ಅಲ್ಲಿನವರೆಲ್ಲರೂ ಶ್ಯಾಮಲವರ್ಣವುಳ್ಳವರಾಗಿ, ಜಗತ್ತನ್ನು ಮೋಹಗೊಳಿಸುವಂತೆ ಪ್ರಕಾಶಿಸು ವರು. ಅವರೆಲ್ಲರೂ ತಾವರೆಯೆಸಳಿನಂತೆ ವಿಶಾಲವಾದ ಕಣ್ಣುಳ್ಳವರು. ಪೀ ತಾಂಬರದಿಂದ ಶೋಭಿಸುವ, ಮತ್ತು ಮನೋಹರವಾದ ಕಾಂತಿಯೊಡಗೂ ಡಿದ ಸುಕುಮಾರದೇಹವುಳ್ಳವರು. ಅವರೆಲ್ಲರೂ ಭಗವಂತನೊಡನೆ ಸ ಮನರೂಪವನ್ನು ಹೊಂದಿ, ನಾಲ್ಕು ಭುಜಗಳಿಂದಲೇ ಶೋಭಿಸುವರು. ಆ ತ್ಯುತ್ತಮಗಳಾದ ರತ್ನಾಭರಣಗಳಿಂದ ಭೂಷಿತರಾಗಿರುವರು. ಅವರ ದೇ ಹವು ಅತ್ಯುತ್ತಮವಾದ ಲಾವಣ್ಯದಿಂದ ಕೂಡಿ, ಹವಳದಂತೆಯೂ, ವೈ ದೂರದಂತೆಯೂ, ತಾವರೆಯ ದಂಟಿನಂತೆಯೂ, ಹೊಳೆಯುವ ಬಣ್ಣದಿಂ ದ ಪ್ರಕಾಶಿಸುವುದು. ಅಲ್ಲಿನವರೊಬ್ಬೊಬ್ಬರೂ ಜಾಜ್ವಲ್ಯಮಾನಗಳಾದ ಕಿರೀ ಟಗಳಿಂದಲೂ, ಮಕರಕುಂಡಲಗಳಿಂದಲೂ, ವನಮಾಲಿಕೆಗಳಿಂದಲೂ ಶೋ