ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೯೩ ಶ್ರೀಮದ್ಭಾಗವತವು [ಅಧ್ಯಾ. ೯. ನುಗ್ರಹಿಸುವುದಕ್ಕಾಗಿಯೇ ಇದಿರುನೋಡುತ್ತಿರುವನು ! ತನ್ನ ಕಟಾಕ್ಷಗಳಿಂ ದಲೇ ಸುಧಾರಸವನ್ನು ಸುರಿಸುತ್ತಿರುವನು! ಯಾವಾಗ ನೋಡಿದರೂ ಅವನ ಮುಖದಲ್ಲಿ ನಿರ್ಮಲವಾದ ಮಂದಹಾಸವೇ ವಿನುಗುತ್ತಿರುವದು! ರಕ್ತಾಂತ ಲೋಚನಗಳಿಂದ ಶೋಭಿಸುತ್ತಿರುವನು! ಆತನ ತಲೆಯಲ್ಲಿ ಜಾಜ್ವಲ್ಯಮಾನ ವಾದ ಕೀರೀಟವು ಬೆಳಗುತ್ತಿರುವುದು! ಕಿವಿಯಲ್ಲಿರುವ ಕುಂಡಲಗಳು ತಮ್ಮ ಶಾಂತಿಸಮೂಹದಿಂದ ಅವನ ಗಂಡಸ್ಥಲವನ್ನು ಮತ್ತಷ್ಟು ಬೆಳಗುತ್ತಿ ರುವುವು ! ಆ ಮಹಾಪುರುಷನ ಶರೀರವು ಪೀತಾಂಬರದಿಂದಲೂ,ಚತುರ್ಭುಜ ಗಳಿಂದಲೂ ಶೋಭಿಸುತ್ತಿರುವುದು ! ಆತನ ವಕ್ಷಸ್ಥಲವು ಶ್ರೀಮಹಾಲಕ್ಷ್ಮಿ ಯಿಂದಲಂಕೃತವಾಗಿರುವುದು ! ಮತ್ತು ಆ ಪರಮಪುರುಷನು ಸತ್ವಲೋಕ ಪೂಜ್ಯವಾದ ತನ್ನ ಆಸನದಮೇಲೆ ಕುಳಿತು, ಇಸೃದು ತತ್ವಗಳಿಗೆ ಅಧಿ ಷ್ಟಾನದೇವತೆಗಳಾದ ಶಕ್ತಿಗಳಿಂದ ಪರಿವೃತನಾಗಿ, ಜ್ಞಾನ, ಶಕ್ತಿ,ಮೊದಲಾ ದ ಮಿತಿಯಿಲ್ಲದ ಕಲ್ಯಾಣಗುಣಗಳಿಂದಲೂ ಪರಿಪೂರ್ಣನಾಗಿ, ತನ್ನ ದಿವ್ಯಮ ಹಿಮೆಯಲ್ಲಿ ತಾನು ವಿಹರಿಸುತ್ತಿರುವನು.ಬ್ರಹ್ಮದೇವನುಈ ದಿವ್ಯರೂಪವನ್ನು ನೋಡಿನೋಡಿ ಅಪಾರವಾದ ಆನಂದಸಾಗರದಲ್ಲಿ ಮುಳುಗಿ ತೇಲುತ್ತಿದ್ದನು. ಆತನ ಕಣ್ಣುಗಳಲ್ಲಿ ಆನಂದಬಾಷ್ಪವು ಧಾರೆಧಾರೆಯಾಗಿ ಸುರಿಯತೊಡಗಿತು. ಅವನ ಸಾವಯವಗಳಲ್ಲಿಯೂ ರೋಮಾಂಚವು ಹುಟ್ಟಿತು. ಹೀಗೆಮಹಾ ನಂದಭರಿತನಾದಚತುರು ಖಬ್ರಹ್ಮನು, ಕೇವಲಭಕ್ತಿಮಾರ್ಗನಿಷ್ಠರಾದ ಪರ ಮಹಂಸರಿಗೆಮಾತ್ರ ಪಡೆಯ ಬಹುದಾದ ಆ ಭಗವಂತನ ಪಾದಾರವಿಂದಗಳ ನ್ನು ಹಿಡಿದು ನಮಸ್ಕರಿಸಿದನು. ಆಗ ಭಗವಂತನು ತನ್ನ ಅಜ್ಞಾಧೀನನಾಗಿ ಯೂ, ಸೃಷ್ಟಿ ಕಾವ್ಯದಲ್ಲಿ ಉದ್ಯುಕ್ತನಾಗಿಯೂ, ತನಗೆ ಪರಮಭಕ್ತನಾಗಿ ಯೂ ಇರುವ ಆಬ್ರಹ್ಮನನ್ನು ಕೈಹಿಡಿದು ಮೇಲಕ್ಕೆತ್ತಿ ಮಂದಹಾಸಪೂರ ಕವಾದ ಪ್ರಿಯವಾಕ್ಯದಿಂದ ಹೀಗೆಂದು ಹೇಳುವನು. (ಓ!ಚತುರು ಖಾ! ನೀ ನು ನನ್ನಿಂದುಪದೇಶಿಸಲ್ಪಟ್ಟ ವೇದಗಳೆಲ್ಲವನ್ನೂ ಹೃದಯದಲ್ಲಿ ಧರಿಸಿರುವೆ. ಈಗ ನೀನು ಜಗತ್ತನ್ನು ಸೃಷ್ಟಿಸಬೇಕೆಂದು ಉದ್ಯುಕ್ತನಾಗಿ, ಬಹುಕಾಲ ದಿಂದ ಇದುವರೆಗೆ ನನ್ನನ್ನು ಕುರಿತು ತಪಸ್ಸು ಮಾಡಿದುದಕ್ಕಾಗಿ, ನಾನು ಬಹಳ ಸಂತೋಷಿಸಿದೆನು. ಮುಖ್ಯವಾಗಿ ನೀನು ನಿಷ್ಕಲ್ಮಷವಾದ ಭಕ್ತಿ