ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೯೮ ಶ್ರೀಮದ್ಭಾಗವತವು [ಅಣ್ಣಾ. ೯. ನನ್ನ ಹೃದಯವೆಂದು ತಿಳಿ ! ನಾನೇ ತಪಸ್ಸರೂಪನು ! ತಪಸ್ಸಿನಿಂದಲೇ ನಾನೂ ನನ್ನನ್ನು ಈ ಪ್ರಪಂಚರೂಪವಾಗಿ ಮಾರ್ಪಡಿಸಿಕೊಳ್ಳುವೆನು! ತಪ ಸ್ಸಿನಿಂದಲೇ ಇವೆಲ್ಲವನ್ನೂ ಸಂಹರಿಸುವೆನು! ಈ ಪ್ರಪಂಚವನ್ನು ರಕ್ಷಿಸುತ್ತಿ ರುವುದೂ ತಪಸ್ಸಿನಿಂದಲೇ ಹೊರತು ಬೇರೆಯಲ್ಲ ! ನನ್ನಲ್ಲಿರುವ ಅಮಿತ ವೀರವೆಲ್ಲವೂ ತಪೋಮಯವೆಂದೇ ತಿಳಿ ! ತಪಃಪ್ರಭಾವವೆಂಬುದು ಹೀಗಿರು ವುದರಿಂದ ಇದನ್ನು ಹಿಡಿದೇ ನೀನು ಸೃಷ್ಟಿಕಾರ್ಯವನ್ನು ನೆರವೇರಿಸಬ ಹುದು.” ಎಂದನು. ಹೀಗೆ ಭಗವಂತನಿಂದ ಅನುಗ್ರಹಿಸಲ್ಪಟ್ಟ, ಬ್ರಹ್ಮದೇ ವನು, ತಾನು ತಿಳಿಯಬೇಕೆಂದುದ್ದೇಶಿಸಿದ ಎರಡು ವಿಷಯಗಳನ್ನು ಕುರಿತು ಶ್ರೀಮನ್ನಾರಾಯಣನಲ್ಲಿ ಹೀಗೆಂದು ವಿಜ್ಞಾಪಿಸುವನು. “ಎಲೈ ಭಗವಂ ತನೆ ! ನೀನು ಸಮಸ್ತಪ್ರಾಣಿಗಳ ಹೃದಯದಲ್ಲಿಯೂ ಅಂತರಾಮಿಯಾಗಿರ ತಕ್ಕವನು. ಇದರಿಂದ ಆಯಾಪ್ರಾಣಿಗಳ ಇಂದ್ರಿಯ ವ್ಯಾಪಾರಗಳೆಲ್ಲವನ್ನೂ ನೀನು ಪ್ರತ್ಯಕ್ಷದಲ್ಲಿ ಕಂಡುಕೊಳ್ಳಬಲ್ಲವನು. ಈ ವಿಧವಾದ ದಿವ್ಯಜ್ಞಾನ ದಿಂದ, ಆಯಾಭೂತಗಳು ಮನಸ್ಸಿನಲ್ಲಿ ಉದ್ದೇಶಿಸಿದ ಕಾರ್ಯಗಳೆಲ್ಲವೂ ನಿನಗೆ ಮೊದಲೇ ಚೆನ್ನಾಗಿ ತಿಳಿದುಹೋಗುವುದರಲ್ಲಿ ಸ್ವಲ್ಪ ಮಾತ್ರ ವೂ ಸಂದೇಹವಿಲ್ಲ. ಆದರೂ, ನಾಥಾ! ನನ್ನದೊಂದು ಪ್ರಾರ್ಥನೆಯುಂಟು! ಈ ನನ್ನ ಪ್ರಾರ್ಥನೆಯನ್ನು ಈಡೇರಿಸಿಕೊಡಬೇಕು ! ಕರ್ಮಸಂಬಂಧವಾದ ಪ್ರಾಕೃತದೇಹವಿಲ್ಲದೆ ನಿನ್ನ ಹವ್ಯಾತ್ಮಸ್ವರೂಪವನ್ನೂ , ನೀನು ಚೇತ ನಾಚೇತನವಸ್ತುಗಳನ್ನು ಶರೀರರೂಪವಾಗಿ ಹೊಂದಿ, ಅವುಗಳಲ್ಲಿ ಒಳ ಹೊಕ್ಕು, ಅಮಾವಸ್ತುಗಳ ಸ್ವರೂಪವೇ ನೀನೆಂಬಂತೆ ಕಾಣಿಸಿಕೊಳ್ಳುವ ನಿನ್ನ ಮತ್ತೊಂದು ರೂಪವನ್ನೂ, ಯಥಾಸ್ಥಿತವಾಗಿ ತಿಳಿದುಕೊಳ್ಳವಂತೆ ನನಗೆ ನೀನು ಶಕ್ತಿಯನ್ನ ನುಗ್ರಹಿಸಬೇಕು, ನಾನಾಬಗೆಯ ಅದ್ಭುತಶಕ್ತಿ ಯುಳ್ಳ, ಮತ್ತು ಸತ್ಯಸಂಕಲ್ಪ ನಾದ ನೀನು. ಇಪ್ಪತ್ತೈದು ತತ್ಯಗಳೆಂಬ ಶಕ್ತಿಗಳನ್ನು ಹಿಡಿದು, ನೀನೇ ನಿನ್ನನ್ನು ಪ್ರಪಂಚರೂಪವಾಗಿ ಕಾಣಿಸಿಕೊಳ್ಳು ವುದೂ, ಕೊನೆಗೆ ನೀನೇ ಅದನ್ನು ನಿನ್ನ ಆಶ್ಚರಶಕ್ತಿಯಿಂದ ಉಪಸಂ ಹಾರಮಾಡಿಕೊಳ್ಳುವುದೂ, ಈ ಉತ್ಪತ್ತಿ ವಿನಾಶಗಳನಡುವೆ ಅದನ್ನು ರಕ್ಷಿಸುತ್ತಿರುವುದೂ ಇವೆಲ್ಲವೂ ನಿನಗೆ ಲೀಲೆಗಳಾಗಿರುವುವಷ್ಟೆ ? ನಾಥಾ !