ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೦೦ ಶ್ರೀಮದ್ಭಾಗವತವು [ಅಧ್ಯಾ, ೯. ಷಿಸತಕ್ಕವನೆಂದೂ, ಪ್ರಪಂಚವೆಲ್ಲವೂ ನನ್ನ ಕೈಗೆ ವಶವಾಗಿರುವುದೆಂದೂ, ನನ್ನ ಸಾಮಥ್ಯಕ್ಕೆ ಮೇಲೆ ಸಾಮರವಿಲ್ಲವೆಂದೂನನಗೆ ಸಾವೇ ಇಲ್ಲವೆಂದೂ ನನ್ನ ಮನಸ್ಸಿನಲ್ಲಿ ಮಹತ್ತಾದ ಅಹಂಕಾರ ಮಮಕಾರಗಳು ಹುಟ್ಟುವುದಕ್ಕೆ ಪೂರ್ಣವಾದ ಅವಕಾಶವುಂಟು. ಈ ಗರ್ವವುಮಾತ್ರ ನನ್ನ ಮನಸ್ಸಿನಲ್ಲಿ ತಲೆದೋರದಂತೆ ಅನುಗ್ರಹಿಸಬೇಕು,” ಎಂದನು. ಹೀಗೆ ಬ್ರಹ್ಮದೇವನಿಂದ ಪ್ರಾರ್ಥಿತನಾದ ಭಗವಂತನು, ಅವನಲ್ಲಿ ಪ್ರಸನ್ನ ನಾಗಿ, ತನ್ನ ಪರಾವರಸ್ಪ ರೂಪಗಳೆರಡನ್ನೂ ಆತನಿಗೆ ತಿಳಿಸಲಾರಂಭಿಸಿದನು. “ಓ ಕುಮಾರಾ !ಮುಖ್ಯ ವಾಗಿ ತಿಳಿಯಬೇಕಾದ ಪರಸ್ವರೂಪದ ಜ್ಞಾನವನ್ನೂ ,ಅದಕ್ಕೆ ಅಂಗವಾಗಿ ತಿ ಳಿದುಕೊಳ್ಳಬೇಕಾದ ಚೇತನಾಚೇತನಸ್ವರೂಪದ ಜ್ಞಾನವನ್ನೂ, ಶಾಸ್ತ್ರಗ ಳನ್ನೂ, ಅದರಿಂದ ತಿಳಿಯಬಹುದಾದ ಜ್ಞಾನಯೋಗಾದಿಗಳನ್ನೂ, ಅವು ಗಳ ರಹಸ್ಯಮಂತ್ರಗಳನ್ನೂ ನಿನಗೆ ಕ್ರಮವಾಗಿ ತಿಳಿಸುವೆನು ಕೇಳು, ಈ ಜ್ಞಾನವನ್ನು ಪಡೆದಮೇಲೆ ನಿಧಿಯಂತೆ ಅದನ್ನು ನೀನು ಗೋಪ್ಯವಾಗಿ ಕಾಪಾಡುತ್ತ ಬರಬೇಕು. ಆತುರದಿಂದ ಬೇರೆಯಾರಿಗೂ ಉಪದೇಶಿ ಸಬಾರದು. ಆದರೆ ನಿನಗೆ ನಾನು ಹೇಳುವ ತತ್ವಗಳೆಲ್ಲವನ್ನೂ ತಿಳಿದು ಕೊ ಳ್ಳುವ ಶಕ್ತಿಯು ಇರಲಾರದೆಂಬ ಭಯವಯನ್ನು ಬಿಟ್ಟುಬಿಡು. ಅದನ್ನು ತಿಳಿ ದುಕೊಳ್ಳತಕ್ಕ ಶಕ್ತಿಯೂ,ನನ್ನ ಅನುಗ್ರಹದಿಂದಲೇ ನಿನಗೆಪ್ರಾಪ್ತವಾಗುವು ದು. ನಾನು ಯಾವಪರಿಮಾಣವುಳ್ಳವನೋ,ನನ್ನ ಸ್ವರೂಪವೂ, ನನ್ನ ಸ್ವಭಾವ ವೂ,ನನ್ನ ಗುಣಗಳೂ ಎಂತವುಗಳೊ, ನಾನು ನಡೆಸತಕ್ಕ ಸೃಷ್ಠಿಸ್ಥಿತಿಸಂ ಹಾರರೂಪಗಳಾದ ದಿವ್ಯಲೀಲೆಗಳು ಎಂತವುಗಳೊ,ನಾನು ಯಾವಾಗಯಾ ವಯಾವ ಕರ್ಮಗಳನ್ನು ನಡೆಸುವೆನೋ, ಅವೆಲ್ಲವೂ ನಿನಗೆ ಸ್ಪಷ್ಟವಾಗಿ ತಿಳಿ ಯುವುವು. ಚೇತನಾಚೇತನಗಳಿಗಿಂತಲೂ ವಿಲಕ್ಷಣವಾದ ಯಾವುದೊಂದು ಪರವಸ್ತು ವುಂಟೋ ಆ ವಸ್ತುವೇ ನಾನೆಂದು ತಿಳಿ!ಮತ್ತು ಆ ಚೇತನಾಚೇ ತನಗಳಲ್ಲಿ ಅಂತರ್ಗತನಾಗಿರತಕ್ಕವನೂ ನಾವಲ್ಲದೆ ಬೇರೆಯಲ್ಲ! ಸೃಷ್ಟಿಗೆ ಮೊದಲು ನಾಮರೂಪವಿಭಾಗಗಳಲ್ಲದೆ ಸಮಷ್ಟಿರೂಪದಿಂದಿದ್ದ ಪ್ರಕೃತಿಪ ರುಷರನ್ನು ಶರೀರವಾಗಿ ಧರಿಸಿದವನೂ ನಾನೇ ಹೊರತು ಬೇರೆಯಲ್ಲ ! ಸೃ ಷಿಕಾಲದಲ್ಲಿ ನಾಮರೂಪವಿಭಾಗಗಳಿಂದ ತೋರುವ ಪ್ರಕೃತಿಪುರುಷರನ್ನು