ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೦೨ ` ಶ್ರೀಮದ್ಭಾಗವತವು [ಅಧ್ಯಾ. ೯, ನಿತ್ಯವಾಗಿಯೂ, ಸ್ವಯಂಪ್ರಕಾಶವುಳ್ಳುದಾಗಿಯೂ ಇರುವುದು. ಅಚೇತನ ವಾದ ಪ್ರಕೃತಿತತ್ವವೆಂಬುದು ಸ್ಕೂಲವಾಗಿಯೂ, ಅನಿತ್ಯವಾಗಿಯೂ, ಜಡ ವಾಗಿಯೂ ಇರುವುದು. ಹೀಗೆ ಇವೆರಡಲ್ಲಿ ಕೇವಲ ವಿರುದ್ಧ ಸ್ವಭಾವಗಳಿರುವು ದರಿಂದಲೇ ಒಂದನ್ನೊಂದು ಹೊಂದಿಕೊಂಡಿರಲಾರವು. ಹೀಗೆ ಪರಸ್ಪರವಿರು ಸ್ವಭಾವವುಳ್ಳ ಚೇತನಾಚೇತನಗಳ ಸ್ವರೂಪವನ್ನು ತಿಳಿದೆಯಷ್ಟೆ. ಇನ್ನು ನಾನು ಆ ಚೇತನಾಚೇತನಗಳಲ್ಲಿ ಒಳಹೊಕ್ಕು ಅವುಗಳನ್ನು ಪೋಷಿಸುತ್ತ, ಅವುಗಳಲ್ಲಿರುವ ದೋಷಗಳನ್ನು ಮಾತ್ರ ಅಂಟಿಸಿಕೊಳ್ಳದೆ ಇರುವ ಕ್ರಮ ವನ್ನು ತಿಳಿಸುವೆನು ಕೇಳು, ಆಕಾಶ, ವಾಯು, ತೇಜಸ್ಸು, ಎಂಬ ಈ ಮಹಾ ಭೂತಗಳು ಗಡಿಗೆ ಮೊದಲಾದ ಇತರ ವಸ್ತುಗಳಲ್ಲಿ ಸೇರಿದ್ದಾಗಲೂ, ಆ ಫುಟಾದಿವಸ್ತುಗಳಿಗೆ ಅಕಸ್ಮಾತ್ತಾಗಿ ಸಂಭವಿಸ ಬಹುದಾದ ಅಪಾಯ ಗಳಿಗೂ, ಅದರಿಂದುಂಟಾಗುವ ವಿಕಾರಗಳಿಗೂ, ಹೇಗೆ ಈಡಾಗಲಾ ರವೋ, ಮತ್ತು ಆ ಬಗೆಯ ಆಶ್ರಯವಸ್ತುಗಳಿಗೆ ನಾಶವುಂಟಾದ ಮೇಲೆ ಅದರಸಂಬಂಧವೇ ತಮಗಿಲ್ಲದಂತೆ ಹೇಗೆ ಬೇಲ್ಪಟ್ಟು ಹೋಗುವುವೋ, ಹಾಗೆಯೇ ನಾನೂಕೂಡ ಚೇತನಾಚೇತನಗಳಲ್ಲಿ ಅಂತರಾಮಿಯಾಗಿದ್ದರೂ, ಅವುಗಳಲ್ಲಿ ನಡೆಯುವ ದೋಷಗಳಿಗಾಗಲಿ, ಬದಲಾವಣೆಗಳಿಗಾಗಲಿ, ಗುರಿ ಯಾಗಲಾರೆನು, ಮತ್ತು ಆಕಾಶವೇ ಮೊದಲಾದ ಆ ಮಹಾಭೂತಗಳು, ಗಡಿಗೆ ಮೊದಲಾದ ವಸ್ತುಗಳಲ್ಲಿ ಒಳಹೊಕ್ಕು, ಅಲ್ಲಿ ಮಾತ್ರವೇ ಇಲ್ಲದೆ ಹೊರ ಭಾಗವನ್ನೂ ಹ್ಯಾಗೆ ವ್ಯಾಪಿಸುತ್ತಿರುವುದೋ, ಹಾಗೆಯೇ ನಾನೂ ಚೇತನಾ ಚೇತನಗಳಲ್ಲಿ ಅಡಗಿರುವುದಲ್ಲದೆ, ಅವುಗಳ ಹೊರಭಾಗವನ್ನೂ ವ್ಯಾಪಿಸಿರು ವೆನು. ಮತ್ತು ಆಕಾಶವನ್ನಳೆಯುವುದು ಹೇಗೆ ಸಾಧ್ಯವಲ್ಲವೋ, ಹಾಗೆಯೇ ನನ್ನ ಪರಿಮಾಣವನ್ನು ಇಷ್ಟೊಂದು ನಿರ್ಣಯಿಸುವುದೂ ಸಾಧ್ಯವಲ್ಲ. ಹೀಗೆ ಅಪ್ರಮೇಯವಾದ ನನ್ನ ಸ್ವರೂಪವನ್ನೂ, ಸತ್ವಜ್ಞತ್ವ, ಸತ್ವಶಕ್ಕೆ ಮೊದಲಾದ ನನ್ನ ಸ್ವಭಾವವನ್ನೂ, ಚೇತನಾಚೇತನಗಳೆಂಬ ನನ್ನ ಶರೀರವ ನ್ಯೂ , ಅವುಗಳ ದೋಷಕ್ಕೆ ನಾನು ಭಾಗಿಯಾಗದೆ ಇರುವ ರೀತಿಯನ್ನೂ, ಲೋಕದ ಸೃಷ್ಟಿಸಿತಿಸಂಹಾರಗಳೆಂಬ ನನ್ನ ಲೀಲೆಗಳನ್ನೂ ನಿನಗೆ ತಿಳಿಸಿರು ವೆನು. ಇನ್ನು ಮುಂದೆ ಮತ್ತೊಂದು ವಿಷಯವನ್ನು ಹೇಳುವೆನು ಕೇಳು, ಪರ