ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. f.) ದ್ವಿತೀಯಸ್ಕಂಧವು. ೩೦೩ ಮಾತ್ಮನ ಸ್ವರೂಪವನ್ನು ತಿಳಿಯಲಪೇಕ್ಷೆಯುಳ್ಳವನು ಪರಸ್ಪರವಿಲಕ್ಷಣ ಸ್ವಭಾವವುಳ್ಳ ಚೇತನಾಚೇತನಗಳೆರಡಕ್ಕೂ ಅಂತರಾತ್ಮನಾದ ಆ ಪರಮಾ ತನ, ಸ್ವರೂಪವೊಂದೇ ಕಾಠ್ಯಕಾರಣರೂಪದಿಂದ ಬದಲಾಯಿಸುತ್ತಿರುವು ದೆಂದೂ, ಆದುಹೊರತು ಬೇರೆಯಾವುದೂ ಇಲ್ಲವೆಂದೂ, ಮೊದಲು ತನ್ನ ಮನಸ್ಸಿಗೆ ನಿರ್ಧರವಾಗಿ ತಿಳಿದುಕೊಳ್ಳಬೇಕು. ಇದೇ ಮುಖ್ಯವಾಗಿ ತಿಳಿದು ಕೊಳ್ಳಬೇಕಾದ ವಿಷಯವು. ಈ ಜ್ಞಾನವುಂಟಾದಮೇಲೆ ತಿಳಿದುಕೊಳ್ಳಬೇ ಕಾದ ವಿಷಯವು. ಮತ್ತೊಂದೂ ಇಲ್ಲವು. ನನ್ನನ್ನು ತಿಳಿಯುವುದರಿಂದ ಎಲ್ಲವ ನ್ಯೂ ತಿಳಿದಂತೆಯೇ ಆಗುವುದು.ಇದಲ್ಲದೆ ನನ್ನ ಸ್ವರೂಪವುವಿಕಾರ ಹೊಂದದೆ ಯಾವಾಗಲೂ ಒಂದೇ ವಿಧವಾಗಿರುವುದರಿಂದ, ಜೀವಪ್ರಕೃತಿಗಳೆರಡಕ್ಕಿಂತ ಲೂ ವಿಲಕ್ಷಣವೆನಿಸಿಕೊಂಡಿರುವುದು. ಜೀವಾತ್ಮನಿಗೂ, ನನಗೂ ಇರುವ ಮತ್ತೊಂದು ಮುಖ್ಯ ವ್ಯತ್ಯಾಸವನ್ನು ತಿಳಿಸುವೆನು ಕೇಳು. ನಾನು ಸಮಸ್ಯ ವಸ್ತುಗಳಲ್ಲಿಯೂ ವರ್ತಿಸತಕ್ಕವನು. ಜೀವಾತ್ಮನಾದರೆ ಅಣು ಮಾತ್ರವಾಗಿ ಏಕದೇಶದಲ್ಲಿ ಮಾತ್ರವೇ ಇರತಕ್ಕವನು. ಇದೇ ನಮ್ಮಿಬ್ಬರಿ ಗೂ ಇರುವ ಭೇದವು. ಅಚೇತನವಾದ ಪ್ರಕೃತಿಯು ನನ್ನಂತೆಯೇ ಎಲ್ಲಾ ಕಡೆಯಲ್ಲಿ ವರ್ತಿಸತಕ್ಕುದಾದರೂ ಕ್ಷಣಕ್ಷಣಕ್ಕೂ ವಿಕಾರಹೊಂದುತ್ತಿರುವು ದು, ಇದಕ್ಕೆ ಒಂದು ನಿದರ್ಶನವನ್ನು ಹೇಳುವೆನು ಕೇಳು. ಗಡಿಗೆಗೆ ಬೇಕಾ ದ ಮಣ್ಣು ಮೊದಲು ಮುದ್ದೆಯಾಗಿರುವುದು. ಆಮೇಲೆ ಫಟರೂಪವನ್ನು ಹೊಂದುವುದು ! ಕಾಲಕ್ರಮದಿಂದ ಒಡೆದು ಎರಡು ಹೋಳಾಗುವುದು! ಆ ಮೇಲೆ ಚೂರುಚೂರಾಗಿ ಒಡೆದು ಹೋಗುವುದು ! ಕೊನೆಗೆ ಧೂಳಾಗಿ ಮ ಣ್ಣಿನಲ್ಲಿ ಸೇರಿಹೋಗುವುದು. ನನ್ನ ಸ್ವರೂಪಕ್ಕೆ ಇಂತಹ ವಿಕಾರವೊಂದೂ ಯಾವಕಾರಣದಿಂದಲೂ ಉಂಟಾಗಲಾರದು. ಆದುದರಿಂದ ಪ್ರಕೃತಿಗಿಂತ ಲೂ ನಾನು ವಿಲಕ್ಷಣನಾಗಿರುವೆನು. ಕುಮಾರಾ ! ನೀನು ಕೇಳಿದಂತೆ ನನ್ನ ಪರಾವರಸ್ವರೂಪಗಳೆರಡನ್ನೂ ನಿನಗೆ ತಿಳಿಸಿರುವೆನು. ಇನ್ನು ನೀನು ಲೋಕ ಸೃಷ್ಟಿಯನ್ನು ಮಾಡುವ ಕಾಲದಲ್ಲಿ, ಅದರಿಂದ ನಿನಗೆ ಅಹಂಕಾರ ಮಮ ಕಾರಗಳೆಂದೂ ಇಲ್ಲದಿರಬೇಕೆಂದು ಕೇಳಿಕೊಂಡೆಯಲ್ಲವೆ? ಅದಕ್ಕೊಂದುಪಾ ಯವನ್ನು ಹೇಳುವೆನು ಕೇಳು! ಚೇತನಾ ಚೇತನಗಳೆಲ್ಲವೂ ನನಗೆ ಶರೀರವಾಗಿ,