ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೧೦.] ದ್ವಿತೀಯಸ್ಕಂಧವು. ೩೦೫ ರ್ಷಿಯು ತಂದೆಯಾದ ಬ್ರಹ್ಮನಿಗೆ ನಮಸ್ಕರಿಸಿ, ಆತನಿಗೆ ಪರಿಚರ್ಯಗಳನ್ನು ಮಾಡುತ್ತ, ಭಕ್ತಿಪೂರ್ವಕವಾದ ತನ್ನ ಸೇವೆಯಿಂದ ಅವನನ್ನು ಸಂತೋಷ ಪಡಿಸಿ, ವಿನಯದಿಂದ ಅವನ ಮುಂದೆ ನಿಂತು, ಈಗ ನೀನು ನನ್ನನ್ನು ಪ್ರಶ್ನೆ ಮಾಡಿದಂತೆಯೇ ವಿಷ್ಣುವಿನ ಮಾಯಾಪ್ರಕಾರವನ್ನು (ಆಶ್ಚರ್ಯಶಕ್ತಿ ಯನ್ನು ) ಕುರಿತು ವಿವರಿಸಬೇಕೆಂದು ಪ್ರಾರ್ಥಿಸಿ ಕೇಳಿದನು. ಅಗ ಬ್ರಹ್ಮ ದೇವನು ನಾರದನಲ್ಲಿ ಪ್ರಸನ್ನ ನಾಗಿ, ಹಿಂದ ತನಗೆ ಶ್ರೀಮನ್ನಾರಾಯಣನು ಉಪದೇಶಿಸಿದ ವಿಷಯಗಳೆಲ್ಲವನ್ನೂ ವಿವರಿಸಿ ತಿಳಿಸಿದನು. ಇದನ್ನು ಕೇಳಿ ನಾರದನು ಪರಮಸಂತೋಷಭರಿತನಾಗಿ ಲೋಕಸಂಚಾರಕ್ಕಾಗಿ ಹೊರಟ ನು. ಹೀಗೆ ಬಹುಕಾಲವು ಕಳೆದಮೇಲೆ ಒಮ್ಮೆ ನಾರದನು ಸರಸ್ವತೀ ನದೀತೀ ರದಲ್ಲಿ ಚಿಂತಾಕ್ರಾಂತನಾಗಿ ಕುಳಿತಿದ್ದ ಮಹಾತೇಜಸ್ವಿಯವಾದ ವ್ಯಾಸಮಹ ರ್ಷಿಯಬಳಿಗೆ ಬಂದು ಅವನನ್ನು ಸಂಧಿಸಿದರು. ಮತ್ತು ಆ ವ್ಯಾಸಮಹಾಮು ಸಿಯ ಪ್ರಾರನೆಯಮೇಲೆ, ತನಗೆ ಹಿಂದೆ ತನ್ನ ತಂದೆಯಾದ ಬ್ರಹ್ಮನು ಉಪ ದೇತಿಸಿದ ರೀತಿಯಲ್ಲಿಯೇ ಭಾಗವತಪುರಾಣವನ್ನು ತಿಳಿಸಿದನು. ಎಲೈ ಪರೀಕ್ಷೆ ದ್ರಾಜನೆ ! ನನ್ನ ತಂದೆಯಾದ ವ್ಯಾಸಮುನಿಯಕೂಡ ತನಗೆ ನಾರದಸಿಂ ದ ಉಪದೇಶಿಸಲ್ಪಟ್ಟ ವಿಷಯಗಳೆಲ್ಲವನ್ನೂ ಸೇರಿಸಿ, ದಶಲಕ್ಷಣ ಪೂರ್ಣವಾದ ಭಾಗವತವೆಂಬ ಗ್ರಂಥವನ್ನು ರಚಿಸಿದನು. ಎಲೈ ರಾಜೇಂದ್ರನೆ ! ನೀವು ವಿ ರಾಟ್ಟುರುಷನಿಂದ ಈ ಪ್ರಪಂಚವೆಲ್ಲವೂ ಹೇಗೆ ಹುಟ್ಟಿತೆಂದು ಕೇಳಿದೆಯಷ್ಟೆ? ಆ ವೃತ್ತಾಂತವೆಲ್ಲವನ್ನೂ ವಿವರವಾಗಿ ನಿನಗೆ ತಿಳಿಸಿ, ಮುಂದೆ ನೀನು ಕೇಳಿದ ಬೇರೆಬೇರೆ ಪ್ರಶ್ನೆಗಳಿಗೂ ಕ್ರಮವಾಗಿ ಉತ್ತರವನ್ನು ಹೇಳುವೆನು ಕೇಳು.” ಎಂದು ಹೇಳಿ ಶುಕಮುನಿಯೂ, ತಿರುಗಿ ಮತ್ತೆ ಕೆಲವು ವಿಷಯಗಳನ್ನು ತಿಳಿಸು ವುದಕ್ಕೆ ತೊಡಗಿದನು. ಇಲ್ಲಿಗೆ ಒಂಭತ್ತನೆಯ ಅಧ್ಯಾಯವು. ( ಶುಕಮುನಿಯು ಪರೀಕ್ಷಿದ್ರಾಜನಿಗೆ ಸೃಷ್ಣಾದಿಕ್ರಮ) +ವನ್ನೂ, ಜೀವಾತ್ಮ ಪರಮಾತ್ಮಸ್ವರೂಪವನ್ನೂ ( ಇತರ ವಿಷಯಗಳನ್ನೂ ತಿಳಿಸಿದುದು, ) ಶುಕಮುನಿಯು ತಿರುಗಿ ಪರೀಕ್ಷಿದ್ರಾಜನನ್ನು ಕುರಿತು ಎಲೈ ರಾ ಜೇಂದ್ರನೆ! ನನ್ನ ತಂದೆಯಾದ ವ್ಯಾಸಮುನಿಯು ಭಾಗವತವನ್ನು ರಚಿಸಿದ ಮೇಲೆ ಅದನ್ನು ನನಗೆ ಉಪದೇಶಿಸಿದನೆಂದು ನಾನು ಮೊದಲೇ ನಿನಗೆ ಹೇ