ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೦೬ ' ಶ್ರೀಮದ್ಭಾಗವತವು [ಅಧ್ಯಾ, ೧೦: ಳಿರುವೆನಷ್ಟೆ? ಆ ಪುರಾಣವನ್ನೇ ನಿನಗೆ ಕ್ರಮವಾಗಿ ಉಪದೇಶಿಸುತ್ತ ಬಂದ ಪಕ್ಷದಲ್ಲಿ ನೀನು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ತಾನಾಗಿಯೇ ಉತ್ತರ ವನ್ನು ಹೇಳಿದಂತಾಗುವುದು. ಮೊದಲು ಪುರಾಣದಲ್ಲಿರಬೇಕಾದ ಲಕ್ಷಣಗ ಳಾವುವೆಂಬುದನ್ನು ಹೇಳುವೆನು ಕೇಳು ! ಸೃಷ್ಟಿ, ಪ್ರತಿಸೃಷ್ಟಿ ಸ್ಯಾನ, ಪೋಷಣ, ಊತಿ, ಮನ್ವಂತರಗಳು, ಈಶಾನುಕಥನ, ನಿರೋಧ, ಮುಕ್ಕಿ ಆಶ್ರಯ; ಎಂಬಿವು ಹತ್ತೂ ಪುರಾಣಲಕ್ಷಣಗಳು. ಈ ಲಕ್ಷಣಗಳಿರುವು ದರಿಂದಲೇ ಈ ಭಾಗವತವು ಪುರಾಣವೆಂಬ ಹೆಸರನ್ನು ಹೊಂದಿರುವುದು. ಈ ಹತ್ತರಲ್ಲಿ ಕೊನೆಯದಾದ ಆಶ್ರಯವೆಂಬುದು ಒಂದೊಂದು ಪುರಾ ಣಕ್ಕೂ ಅತಿಮುಖ್ಯವಾದುದು. ಆಶ್ರಯವೆಂಬುದೇ ಪರಬ್ರಹ್ಮವು. ಈ ಪರ ಬ್ರಹ್ಮದ ಸ್ವರೂಪವು ಚೆನ್ನಾಗಿ ತಿಳಿಯಬೇಕೆಂಬುದಕ್ಕಾಗಿಯೇ ಪರಾಪರ ವಸ್ತುಗಳ ಸ್ವರೂಪವನ್ನು ಚೆನ್ನಾಗಿ ಕಂಡುಕೊಂಡಿರುವ ಮಹರ್ಷಿಗಳು ಸೃಷ್ಟಿ ಮೊದಲಾದ ಉಳಿದ ಒಂಭತ್ತು ಲಕ್ಷಣಗಳನ್ನೂ , ತಾವು ತಮ್ಮ ಗುರು ಪರಂಪರೆಯೆಂದ ತಿಳಿದಂತೆ ಆದಕ್ಕೆ ಸಾಧನವಾಗಿ ವರ್ಣಿಸುವರು. ಇದರಿಂದ ಹತ್ತನೆಯದಾದ ಆಶ್ರಯವೆಂಬ ಲಕ್ಷಣವನ್ನು ಚೆನ್ನಾಗಿ ತಿಳಿಯಪಡಿಸುವುದ ಕೈ ಹಿಂದಿನ ಲಕ್ಷಣಗಳೆಲ್ಲವೂ ಅಂಗಗಳಾಗಿರುವುದರಿಂದ, ಈ ಪ್ರಬಂಧವೆಲ್ಲಾ ಮುಖ್ಯವಾಗಿ ಪರಬ್ರಹ್ಮಸ್ವರೂಪವನ್ನು ವಿವರಿಸತಕ್ಕ ಒಂದೇ ಶಾಸ್ತ್ರರೂಪ ವಾಗಿರುವುದು. ಇದರಲ್ಲಿ ಬೇರೆಬೇರೆ ಅನೇF ರ್ಥಗಳು ವಿವರಿಸಲ್ಪಟ್ಟಿದ್ದ ರೂ, ಅವೆಲ್ಲವನ್ನೂ ಬೇರೆಬೇರೆ ಗ್ರಂಥಗಳೆಂದು ಶಂಕಿಸುವುದಕ್ಕೆ ಅವಕಾಶವಿ ಲ್ಲ. ರಾಜೇಂದ್ರಾ! ಹಿಂದೆ ಹೇಳಿದ ಹತ್ತು ವಿಧಲಕ್ಷಣಗಳನ್ನೂ ಬೇರೆ ಬೇರೆಯಾಗಿ ವಿವರಿಸಿ ಹೇಳುವೆನು ಕೇಳು.ಭೂಮಿ ಮೊದಲಾದ ಮಹಾ ಭೂತಗಳೆದು, ಅವುಗಳಿಗೆ ಅಸಾಧಾರಣಧರ್ಮವಾದ ಗಂಧಾದಿ ತನ್ಮಾತ್ರ ಗದು, ಜ್ಞಾನೇಂದ್ರಿಯಗಳೆದು, ಕರ್ಮೇಂದ್ರಿಯಗಳೆದು, ಬುದ್ಧಿಯೆಂ ದು ಹೇಳಲ್ಪಡುವ ಮಹತ್ವವೊಂದು. ಇವುಗಳ ಸೃಷ್ಟಿಯೇ ಸರ್ಗವೆಂದು ಹೇಳಲ್ಪಡುವುದು, ಅದರಿಂದಾಚೆಗೆ ಚತುರ್ಮುಖಬ್ರಹ್ಮನು ವಿರಾಟ್ಟುರುಷನ ನಾಭಿಯಿಂದ ಹುಟ್ಟಿ, ಸತ್ವರಜಸ್ತಮೋಗುಣಗಳ ವೈಷಮ್ಯದಿಂದ ರಜೋ ಗುಣದ ಪ್ರಾಧಾನ್ಯವನ್ನು ಹೊಂದಿ, ವ್ಯರೂಪವಾದ ದೇವ ಮನುಷ್ಯಾದಿ ಸೃಷ್ಟಿಯನ್ನು ನಡೆಸಿದನೆಂದು ಹೇಳಿದನ? ಆ ಭೂತಸೃಷ್ಟಿಗೇ ಪ್ರತಿಸರ್ಗ