ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೧,೦] ದ್ವಿತೀಯಸ್ಕಂಧವು, ace ವೆಂದು!ಹೆಸರು. ಅದರಿಂದಾಚೆಗೆ ಶ್ರೀಮನ್ನಾರಾಯಣಮೂರ್ತಿಯು ದುಷ್ಟ ರಡಗಿಸಿ ಲೋಕವನ್ನು ಕ್ಷೇಮದಿಂದ ನಿಲ್ಲಿಸಿದನು. ಇದಕ್ಕೆ ಸ್ಥಿತಿ ಅಥವಾ ಸ್ಥಾನವೆಂದು ಹೆಸರು. ಭಗವಂತನಾದ ನಾರಾಯಣನು ಪ್ರತಿಯುಗದಲ್ಲಿ ಯೂ, ಅವತಾರಗಳನ್ನೆತ್ತಿ ತನ್ನ ಭಕ್ತರನ್ನು ಪೋಷಿಸುವುದಕ್ಕೆ ಪೋಷಣವೆಂ ದು ಹೆಸರು. ಜೀವಾತ್ಮಗಳಿಗೆ ಜನ್ಮಾಂತರದಿಂದ ಅನುಸರಿಸಿ ಬರುತ್ತಿರುವ ಕರ್ಮವಾಸನೆಗಳೇ ಊತಿಯೆನಿಸುವುವು. ಭಗವದನುಗ್ರಹದಿಂದ ರಕ್ಷಣ ಕಾಲ್ಯದಲ್ಲಿ ನಿಯುಕ್ತರಾದ ಮಹಾತ್ಮರ ಧರ್ಮಗಳನ್ನು ವಿಸ್ತರಿಸಿ ವರ್ಣಿಸುವು ದೇ ಮನ್ವಂತರವೆನಿಸುವುದು. ಭಗವಂತನು ಆಯಾ ಅವತಾರಗಳಲ್ಲಿ ನಡೆಸಿದ ಅದ್ಭುತಕಾರಗಳನ್ನು ವರ್ಣಿಸುವುದೇ ಈಶಾಮಕಥನವೆಂದೆನಿಸುವುದು. ಈ ಜೀವಾತ್ಮಗಳು ಕರ್ಮರೂಪಗಳಾದ ಶಕ್ತಿಗಳೊಡಗೂಡಿ ಸೂಕ್ಷಪ್ರ ಕೃತಿಯಲ್ಲಿರುವುದೇ ನಿರೋಧವೆನಿಸುವುದು, ಜೀವಾತ್ಮನು ಭಗವದನುಗ್ರಹ ಕ್ಕೆ ಪಾತ್ರನಾದಮೇಲೆ, ದೇವಾದಿರೂಪಗಳನ್ನು ತ್ಯಜಿಸಿ, ಪಾಪಹತಿ ಮೊದ ಲಾದ ಅಷ್ಟಗುಣಗಳಿಂದ ಕೂಡಿದ ರೂಪವನ್ನು ಹೊಂದುವುದೇ ಮುಕ್ತಿ ಯೆನಿಸುವುದು. ಯಾವ ಪರಬ್ರಹ್ಮನಿಂದ ಪ್ರಪಂಚದ ಸೃಷ್ಟಿ, ಸ್ಥಿತಿ, ಸಂ ಹಾರಗಳು ನಡೆಯುವವೋ, ಯಾವನು ಪರಮಾತ್ಮನೆಂದು ಕರೆಯಲ್ಪಡುವ ನೋ ಅವನೇ ಆಶ್ರಯವೆನಿಸುವನು. ಈ ಪರಮಪುರುಷನೇ ಜೀವಾತ್ಮನಲ್ಲಿ ಒಳಹೊಕ್ಕು ಅವನಿಗೆ ನಿಯಾಮಕನಾಗಿರುವನು. ಇದರಿಂದಲೇ ಇವನು ಆ ಫ್ಯಾತ್ಮಿಕನೆಂದೂ, ಅಧಿದೈವಿಕನೆಂದೂ ಹೇಳಲ್ಪಡುವನು. ಈತನೇ ಪ್ರತ್ಯ ಕವೇ ಮೊದಲಾದ ಜ್ಞಾನಗಳಿಗೆ ಕಾರಣವೆನಿಸಿದ ಚಕ್ಷುರಾದೀಂದ್ರಿಯಗಳಿಗೆ ಅಭಿಮಾನಿದೇವತೆಗಳೆನಿಸಿಕೊಂಡ ಸೂರಾದಿದೇವತೆಗಳಲ್ಲಿಯ ಆಂತಯ್ಯಾ ಪಿಯಾಗಿ ವರಿಸುವನು. ಈತನೇ ಜೀವನಿಗಿಂತಲೂ, ಮತ್ತು ಜ್ಞಾನಕಾರಣಗ ಳಾದ ಇಂದ್ರಿಯಗಳಿಗಿಂತಲೂ ವಿಲಕ್ಷಣಗಳೆನಿಸಿಕೊಂಡ ಆ ಕಾಶಾದಿ ಭೂತಗ ಇಲ್ಲಿರುವ ಶಬ್ದಾದಿವಿಷಯಗಳಲ್ಲಿಯೂ, ಅಂತರ್ಗತನಾಗಿ ಆಧಿರ್ಭಾತಿಕನೆನಿಸಿ ಕೊಂಡಿರುವನು.ಆದುದರಿಂದ ಜ್ಞಾನಾಶ್ರಯನಾದ ಆತ್ಮವೂ,ಜ್ಞಾನಕಾರ ಣಗಳಾದ ಇಂದ್ರಿಯಗಳೂ, ಆ ಜ್ಞಾನಕ್ಕೆ ವಿಷಯವಾದ ಶಬ್ದಾದಿಗಳೂ, ವೆಲ್ಲವೂ ಭಗವದಾತ್ಮಕವೆಂದೇ ತಿಳಿ! ಎಲೈ ರಾಜೇಂದ್ರನೆ! ಕಣ್ಣು ಮೊಲಾದ