ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೦೮ ಶ್ರೀಮದ್ಭಾಗವತವು [ಅಧ್ಯಾ. ೧೦. ದ ಇಂದ್ರಿಯಗಳಿಲ್ಲದಪಕ್ಷದಲ್ಲಿ ನಾವು ಯಾವ ವಸ್ತುಗಳನ್ನೂ ಅರಿಯ ಲಾರೆವು. ಮತ್ತು ಇಂದ್ರಿಯಸಂಬಂಧಕ್ಕೆ ಅವಕಾಶವಿಲ್ಲದ ಸೂಕ್ಷವಸ್ತುಗ ಳನ್ನಾಗಲಿ, ಇಂದ್ರಿಯಸಂಬಂಧಕ್ಕೆ ಅವಕಾಶವನ್ನು ಕೊಡುವ ಯೋಗ್ಯತೆ ಯಿದ್ದರೂ ಕಣ್ಮರೆಯಾಗಿರುವುದರಿಂದ ಇಂದ್ರಿಯಗಳಿಗೆ ಗೋಚರಿಸದ ವ ಸ್ತುಗಳನ್ನಾಗಲಿ ನಾವು ತಿಳಿಯಲಾರೆವು. ಆದುದರಿಂದ ಮೇಲೆ ಹೇಳಿದ ಜ್ಞಾತೃ, ಜ್ಞಾನ, ಜೈಯಗಳೆಂಬ ಮೂರರಲ್ಲಿ ಯಾವುದೊಂದಿಲ್ಲದಿದ್ದ ರೂ, ಯಾವ ವಿಷಯವನ್ನೂ ಗ್ರಹಿಸಲು ಸಾಧ್ಯವಲ್ಲ. ಪರಮಪುರುಷನಾ ದರೋ ಇಂದ್ರಿಯಗಳ ಸಹಾಯದಿಂದ ಇತರ ವಸ್ತುಗಳನ್ನು ತಿಳಿಯುವಶಕ್ತಿ ಯುಳ್ಳ ಆತ್ಮನನ್ನೂ,ಅವನ ಜ್ಞಾನಕ್ಕೆ ಸಾಧನಗಳಾದ ಇಂದ್ರಿಯಗಳನ್ನೂ , ಆ ಇಂದ್ರಿಯಗಳಿಂದ ತಿಳಿಯಬಹುದಾದ ವಸ್ತುಗಳನ್ನೂ ಸಾಕ್ಷಾತ್ಕರಿಸಬಲ್ಲ ಶಕ್ತಿಯುಳ್ಳವನು. ಆತನು ಇಂದ್ರಿಯಗಳ ಸಹಾಯವಿಲ್ಲದೆಯೇ ಎಲ್ಲವನ್ನೂ ತಿಳಿಯಬಲ್ಲನು. ಆದುದರಿಂದ ಇಂದ್ರಿಯಸಂಬಂಧಕ್ಕೆ ಅವಕಾಶಕೊಡದ ಸೂಕ್ಷವಸ್ತುಗಳನ್ನಾಗಲಿ, ಮರೆಯಲ್ಲಿರುವ ವಸ್ತುಗಳನ್ನಾಗಲಿ ತಿಳಿಯಬ ಲ್ಲನು. ಆ ಪರಮಪುರುಷನೇ ಜಡಪ್ರಕೃತಿಗೆ ಆಧಾರವೆನಿಸಿಕೊಂಡ ಜೀವಾ ತ್ಮಕ್ಕೂ ಆಧಾರನೆನಿಸಿರುವನು. ಅಷ್ಟೇಕೆ? ಆತನು ತನಗೆ ತಾನೇ ಆಧಾರ ವೆನಿಸಿರುವನೇ ಹೊರತು, ಬೇರೆ ಆಧಾರವನ್ನು ಅಪೇಕ್ಷಿಸತಕ್ಕವನಲ್ಲ. ಆತನಿಗೆ ಆಧಾರವಾಗತಕ್ಕ ಬೇರೆವಸ್ತುವೂ ಇಲ್ಲ. ಎಲೈ ಪರೀಕ್ಷಿದ್ರಾಜನೆ ! ಹೀಗೆ ಸೃಷ್ಟಿ ಮೊದಲಾಗಿ ಹತ್ತು ಬಗೆಯ ಪುರಾಣಲಕ್ಷಣಗಳೆಲ್ಲವನ್ನೂ ನಿನಗೆ ತಿಳಿಸಿ ದೆನು. ಇನ್ನು ವಿರಾಟ್ಟುರುಷನಿಂದ ಈ ಲೋಕವು ಹೇಗೆ ಹುಟ್ಟಿತೆಂಬುದ ನ್ನು ತಿಳಿಸುವೆನು ಕೇಳು, ಮೊದಲು ವಿರಾಟ್ಟುರುಷನು ಬ್ರಹ್ಮಾಂಡವನ್ನು ಭೇದಿಸಿಕೊಂಡು ಬಂದು,ಚತುರ್ಮುಖರೂಪವುಳ್ಳ ಪುರುಷನನ್ನು ಪಡೆಯುವ ದಕ್ಕೆ ಮೊದಲು, ಶುದ್ಧನಾದ ತನಗೆ ವಾಸಮಾಡುವುದಕ್ಕೆ ಯೋಗ್ಯವಾದ ಪರಿಶುದ್ಧವಾದ ಸ್ಥಳವೊಂದನ್ನು ಕೋರಿ, ಅದಕ್ಕಾಗಿ ಮೊದಲು ಪವಿತ್ರ ವೆನಿಸಿದ ಜಲವನ್ನು ಸೃಷ್ಟಿಸಿದನು. ತಾನು ಸೃಷ್ಟಿಸಿದ ಆ ಜಲದ ಫಿಯೇ ಸಹಸ್ರಸಂವತ್ಸರಗಳವರೆಗೆ ವಾಸಮಾಡುತ್ತಿದ್ದನು. ಹೀಗೆ ನರ ಶಬ್ದ ವಾಚ್ಯನಾದ ತನ್ನಿಂದ ಸೃಷ್ಟಿಸಲ್ಪಟ್ಟ ಜಲರಾಶಿಯನ್ನೇ ತಾ