ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೧೦ ಶ್ರೀಮದ್ಭಾಗವತವು [ಅಧ್ಯಾ. ೧೦ ಪ್ರನೆ ! ಇಲ್ಲಿ ಜ್ಞಾತೃವಾದ ಆತ್ಮನನ್ನು ಸೃಷ್ಟಿಸುವುದೆಂದರೆ ಆ ಜೀವಾತ್ಮ ಗಳಿಗೆ ದೇವಮನುಷ್ಟಾದಿಶರೀರಗಳನ್ನು ಸೇರಿಸಿಕೊಡುವುದೇ ಕೊರತು ಹೊಸ ದಾಗಿ ಜೀವವನ್ನು ಸೃಷ್ಟಿಸುವುದೆಂದೆಣಿಸಬೇಡ, ಮೇಲೆ ಹೇಳಿದಂತೆ ಕಾರಣ ದ್ರವ್ಯವನ್ನು ಜ್ಞಾತೃ ಜ್ಞಾನ ವಿಷಯಗಳೆಂಬ ಮೂರುವಿಧದಿಂದ ಸೃಷ್ಟಿ ಸಿದ ಕ್ರಮವನ್ನೂ ಹೇಳುವೆನು ಕೇಳು ! ಸೃಷ್ಟಿಯಲ್ಲಿ ಸಮಷ್ಟಿಯೆಂದೂ, ವ್ಯಷಿಯೆಂದೂ ಎರಡು ಮುಖ್ಯ ವಿಭಾಗಗಳುಂಟು. ಪ್ರಕೃತಿ, ಮಹತ್ತು, ಅಹಂಕಾರ, ಶಬ್ದ ತನ್ಮಾತ್ರ ಮೊದಲಾದ ತನ್ಮಾತ್ರಗಳು, ಆಕಾಶಾದಿ ಭೂತಗಳು, ಶಬ್ದಾದಿ ವಿಷಯಗಳು, ಇವೆಲ್ಲವನ್ನೂ ಸೃಷ್ಟಿಸಿದಮೇಲೆ ಆಕಾ ಶಾದಿಭೂತಗಳೆದು, ಮಹತ್ತು, ಆಹಂಕಾರಗಳೆಂಬಿವೆರಡು ತತ್ವಗಳು, ಇವು ಗಳನ್ನೂ ಸಪ್ತಿಕರಣರೀತಿಯಿಂದ ಒಂದಕ್ಕೊಂದನ್ನು ಸೇರಿಸಿ, ಅಂಡವನ್ನು ಸೃಷ್ಟಿಸಿ, ಅದರಲ್ಲಿ ಬ್ರಹ್ಮದೇವನನ್ನು ಪಡೆಯುವವರೆಗೆ ನಡೆದ ಸೃಷ್ಟಿಕಾ ರ್ಯಗಳೆಲ್ಲವೂ ಸಮಷ್ಟಿಸೃಷ್ಟಿಯೆನಿಸುವುದು, ಈ ಸಮಸೃಷ್ಟಿಯನ್ನು ಪರಮಪುರುಷನು ತಾನೇ ಸಾಕ್ಷಾತ್ತಾಗಿ ನಡೆಸುವನು. ಅದರಿಂದಾಚೆಗೆ ಆಪರ ಮಪುರುಷನು ಬ್ರಹ್ಮ ದೇವನಲ್ಲಿ ಅಂತರಾಮಿಯಾಗಿದ್ದು,ಅವನಮೂಲಕವಾಗಿ ನಡೆಸುವ ದೇವಮನುಷ್ಯಾರಿಸ್ಕೃಷಿಯನ್ನು ವ್ಯಷ್ಟಿಸೃಷ್ಟಿಯೆಂದು ಹೇಳುವ ರು, ಆಬ್ರಹ್ಮನಿಗೆ ಸಮಷ್ಟಿಪುರುಷನೆಂದೂ ಹೆಸರುಂಟು. ಈಚತುರುಖನು ಪ್ರಾಣವ್ಯಾಪಾರವನ್ನು ನಡೆಸುತ್ತಿರುವಾಗ (ಎಂದರೆ ಉಭ್ಯಾಸನಿಶ್ವಾಸಗ ಳನ್ನು ನಡೆಸುವಾಗ),ಅವನ ಶರೀರಾಂತರ್ಗತವಾಗಿಯೂ, ಆಕಾಶದ ಕಾರರೂ ಪವಾಗಿಯೂ ಇರುವ ಪ್ರಾಣವಾಯುವಿನಿಂದ,ಓಜಸ್ಸು,ಸಹಸ್ಸು, ಬಲವೆಂಬ ಮೂರುಧರ್ಮಗಳುಂಟಾದುವು. ಓಜಸ್ಸೆಂಬುದು ಪ್ರಯತ್ನ ವೆನಿಸಿಕೊಳ್ಳುವ ಪ್ರವೃತ್ತಿ ಸಾಮರ್ಥ್ಯವು. ಸಹಸ್ಸೆಂಬುದು ವೇಗಸಾಮರ್ಥ್ಯವು.ಬಲವೆಂಬುದು ಧಾರಣಾಸಾಮರ್ಥ್ಯವು, ಈ ಮೂರುಧರ್ಮಗಳೊಡಗೂಡಿ ಆ ಚತು ರ್ಮುಖನ ಶರೀರಾಂತರ್ಗತವಾಗಿದ್ದ ಬೇರೆ ಪ್ರಾಣದಿಂದ ಎಲ್ಲಾ ಪ್ರಾಣಿ ಗಳ ಜೀವಕ್ಕೆ ಹೇತುವಾಗಿಯೂ, ಪ್ರಧಾನವಾಗಿಯೂ ಇರುವ ಪ್ರಾಣಿಗ ಳುಂಟಾದುವು.ರಾಜಾ! ಲೋಕದಲ್ಲಿ ರಾಜಸೇವಕರು ರಾಜನನ್ನನುವರ್ತಿಸಿ ನಡೆ ಯುವಂತೆ, ಇಂದ್ರಿಯಗಳೆಲ್ಲವೂ ಈ ಪ್ರಾಣವನ್ನೇ ತಮಗೆ ಪ್ರಭುವನ್ನಾ