ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೧೦.) ದ್ವಿತೀಯಸ್ಕಂಧವು ೩೧೧ ಗಿಟ್ಟುಕೊಂಡು, ಅದನ್ನೇ ಅನುಸರಿಸಿ ತಮ್ಮ ವ್ಯಾಪಾರಗಳನ್ನು ನಡೆಸುವುವು. ಆ ಪ್ರಾಣವಾಯುವು ಶಾಂತವಾದರೆ ಇಂದ್ರಿಯಗಳೆಲ್ಲವೂ ಶಾಂತವಾಗು ವುವು. ದೇವಮನುಷ್ಯಾದಿಶರೀರಗಳಲ್ಲಿ ಸೇರತಕ್ಕ ಈ ವ್ಯಷ್ಟಿಪ್ರಾಣಗಳೂ ಕೋಡ, ಚತರ್ಮುಖನ ಶರೀರದಲ್ಲಿ ತಮಗೆ ಕಾರಣಭೂತವಾಗಿದ್ದ ಪ್ರಾಣನ ಸ್ವಭಾವವನ್ನೇ ಅನುಸರಿಸುತ್ತ, ಅದರಂತೆಯೇ ಓಜಸ್ಸು, ಸಹಸ್ಸು, ಬಲ ವೆಂಬ ಮೂರುಶಕ್ತಿಗಳನ್ನೂ ಹೊಂದಿ,ಪ್ರಾಣ, ಅಪಾನ ಮುಂತಾದ,ವ್ಯಾಪಾ ರಗಳನ್ನು ನಡೆಸುವುವು.ಹೀಗೆ ಚತುರಖನಶರೀರದೊಳಗೆ ಪ್ರಾಣವಾಯುವು ತನ್ನ ಶಕ್ತಿಯನ್ನು ತೋರಿಸುತ್ತಿದ್ದುದರಿಂದ ಅವನ ಹೃದಯದಲ್ಲಿರುವ ಜಠ ರಾಗ್ನಿಯು ಜ್ವಲಿಸತೊಡಗಿತು. ಈ ಜಠರಾಗ್ನಿ ಯ ಉರಿಯಿಂದ ಹಸಿವು ಬಾ ಯಾರಿಕೆ ಮುಂತಾದುವು ಹುಟ್ಟಿದುವು. ಇದರಿಂದ ಅನ್ನ ಪಾನಗಳಲ್ಲಿ ಆಶೆ ಯು ಹುಟ್ಟಿತು, ಆಮೇಲೆ ಆ ಚತುರ್ಮುಖನಿಗೆ ಈ ಅನ್ನ ಪಾನಾಭಿಲಾಷೆ ಯನ್ನು ತೀರಿಸಿಕೊಳ್ಳುವುದಕ್ಕಾಗಿ,ವ್ಯಷ್ಟಿಶರೀರಕ್ಕೆ ತಕ್ಕ ಮುಖವು ಏರ್ಪಟ್ಟಿ, ತು. ಆಮುಖವುಂಟಾದಕೂಡಲೆ ಅದರಲ್ಲಿಅಣ್ಣಾಲಗೆ(ತಾಲು)ಯುಂಟಾಯಿತು ಆದರಿಂದ ರಸನೇಂದ್ರಿಯವು ಜನಿಸಿತು.ಅದರಿಂದ ಆ ಇಂದ್ರಿಯಕ್ಕೆ ಅಭಿಮಾ ನಿದೇವತೆಯಾದ ವರುಣನು ಹುಟ್ಟಿದನು. ಅದರಮೇಲೆ ರಸನೆಂದ್ರಿಯಗಳಿಗೆ ಅನುಭವಯೋಗ್ಯಗಳಾದ ಉಪ್ಪ,ಹುಳಿ, ಮುಂತಾದ ಷಡ್ರಸಗಳೂ ಹುಟ್ಟಿ ದುವು. ಆಮೇಲೆ ಆ ಚತುರ್ಮುಖನಿಗೆ ಬಾಯಿಂದ ಮಾತಾಡಬೇಕೆಂಬ ಅಭಿ ಲಾಷೆಯು ಹುಟ್ಟಲು, ಆತನ ಮುಖದಿಂದ ವಾಗಿಂದ್ರಿಯವೂ, ಅದಕ್ಕೆ ಆಥಿ ಜ್ಞಾನದೇವತೆಯಾದ ವ ಯೂ, ಇವೆರಡೂ ಉದ್ಭವಿಸಿದುವು. ಅವೆರಡ ರಿಂದ ಇಂದ್ರಿಯವ್ಯಾಪಾರವಾದ ವಾಕ್ಯವು ಹೊರಟಿತು.ಅದರಿಂದಾಚೆಗೆ ಆ ಬ್ರಹ್ಮನ ಕಂಠದಲ್ಲಿ ಬಹುಕಾಲದವರೆಗೆ ವಾಯುವು ತಡೆದುನಿಂತುಹೋ ಯಿತು. ಹೀಗೆ ವಾಯುವು ಹೊರಗೆ ಬರುವುದಕ್ಕೆ ದಾರಿಯಿಲ್ಲದುದರಿಂದ ಅದು ಕಂಠಸ್ಥಾನದಲ್ಲಿಯೇ ನಿಂತು, ಬಲಾತ್ಕಾರದಿಂದ ಹೊರಗೆ ಬರಲು ಪ್ರಯತ್ನಿಸುತ್ತಿರುವಾಗ, ಅದಕ್ಕೆ ನಿರ್ಗಮನಮಾರ್ಗವಾಗಿ ಮೂಗಿನ ರಂಧಗ ಳುಂಟಾದುವು. ಆಗ ಬ್ರಹ್ಮನಿಗೆ ಗಂಧವನ್ನು ಆಫಾಣಿಸಬೇಕೆಂಬ ಅಭಿ ಲಾಷೆಯು ಹುಟ್ಟಿದುದರಿಂದ, ಕೂಡಲೇಘಾಣೇಂದ್ರಿಯವೂ, ಆದಕ್ಕೆ ಅಭಿ