ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೧೩ ಅಧ್ಯಾ, ೧೦.] ದ್ವಿತೀಯಸ್ಕಂಧವು. ನಡೆಸಬೇಕೆಂಬ ಉದ್ದೇಶದಿಂದಿರಲು, ಆತನಿಗೆ ಕಾರ್ಯಗಳನ್ನು ನಡೆಸುವುದಕ್ಕೆ ಬೇಕಾದ ಹಸ್ತಗಳು ಹುಟ್ಟಿದುವು. ಅದಕ್ಕೆ ಇಂದ್ರನು ಅಧಿಷ್ಠಾನದೇವತೆ ಯಾದನು ಅದರಿಂದಾಚೆಗೆ ಬ್ರಹ್ಮನಿಗೆ ಸಂಚರಿಸಬೇಕೆಂಬ ಆಶೆಯು ಹುಟ್ಟಿ ದುದರಿಂದ ಪಾದಗಳುಂಟಾದುವು. ಅದಕ್ಕೆ ಯಜ್ಞಸ್ವರೂಪನಾದ ವಿಷ್ಣುವು ಅಧಿದೇವತೆಯಾದವು. ಆಮೇಲೆ ಬ್ರಹ್ಮನಿಗೆ ಪ್ರಜೋತ್ಪಾದನದಲ್ಲಿಯೂ, ಸುಖಾನುಭವದಲ್ಲಿಯೂ ಆಶೆಯು ಹುಟ್ಟಿತು.ಒಡನೆಯೇ ಅವನಿಗೆ ಆ ಕಾರ್ಯ ಕುಪಯೋಗಪಡುವ ಉಪಸ್ಥ ಸ್ಥಾನದಲ್ಲಿ ಪುರುಷಲಿಂಗವು ಹುಟ್ಟಿತು. ಅದಕ್ಕೆ ಪ್ರಜಾಧಿಪತಿಯು ಅಧಿಷ್ಠಾನದೇವತೆಯಾದನು. ಆಮೇಲೆ ಬ್ರಹ್ಮನಿಗೆ ತಿಂದ ಪದಾರ್ಥಗಳಲ್ಲಿ ನಿಸ್ಸಾರವಾದ ಚರಟಗಳನ್ನು ದೇಹದಿಂದ ಹೊರಗೆ ಬಿಡಬೇ ಕೆಂಬ ಉದ್ದೇಶವು ಹುಟ್ಟಿತು. ಒಡನೆಯೇ ಅವನಿಗೆ ಗುದಸ್ಮಾನವು ಏರ್ಪ ತು, ಆ ಸ್ಥಾನದಲ್ಲಿ ಪಾಯುವೆಂಬ ಇಂದ್ರಿಯವು ಹುಟ್ಟಿತು. ಅದಕ್ಕೆ ಮಿತ್ರನು ಅಧಿದೇವತೆಯಾದನು.ಆಮೇಲೆ ಈದೇಹವನ್ನು ಬಿಟ್ಟು ಮತ್ತೊಂದು ದೇಹಕ್ಕೆ ಹೋಗಬೇಕೆಂದು ಬ್ರಹ್ಮನಿಗೆ ಇಚ್ಛೆಯುಂಟಾಗಲು, ಆತನ ಅಪನ ಸ್ಥಾನವಾದ ನಾಭಿಯಿಂದ ದೇವಮನುಷ್ಯಾದಿಗಳ ನಾಭಿಲ್ವಾರವುಂಟಾ ಯಿತು. ಆ ಬ್ರಹ್ಮನ ಸಮಷ್ಟಿರೂಪವಾದ ಅಪಾನವಾಯುವಿನಿಂದ ಸೃಷ್ಟಿ ರೂಪವಾದ ಅಪಾನವೂ, ಅದಕ್ಕೆ ಅಧಿದೇವತೆಯಾದ ಮೃತ್ಯುವೂ, ಪಾ ಣಾಪಾನಗಳೆಂಬ ಈ ಎರಡು ವಾಯುಗಳನ್ನೂ ಮುಖ್ಯಾಧಾರವಾಗಿ ಉಳ್ಳ ಮರಣವೂ ಉಂಟಾದುವು, ಆಮೇಲೆ ಆ ಬ್ರಹ್ಮನು ಅನ್ನ ಪಾನಗಳನ್ನು ಗ್ರಹಿ ಸಬೇಕೆಂದು ಇಚ್ಛಯಿಸಲು, ಅವುಗಳಿಗೆ ಆಶ್ರಯಗಳಾದ ಹೊಟ್ಟೆ, ಕರುಳು, ಜಲಮಾರ್ಗಗಳಾದ ನಾಡಿಗಳು,ಇವೆಲ್ಲವೂ ಉಂಟಾದುವು. ಈ ನಾಡಿಗಳಿಗೂ ಆಂತ್ರಗಳೆಂದು ಕರೆಯಲ್ಪಡುವ ಕರುಳುಗಳಿಗೂ, ಕ್ರಮವಾಗಿ ನದಿಗಳೂ, ಸ ಮುದ್ರಗಳೂ, ಅಧಿದೇವತೆಗಳಾದುವು. ಅದರಿಂದಾಚೆಗೆ ಆತ್ಮಸ್ವರೂಪವ ನ್ನು ಮರೆಸತಕ್ಕ ಗುಣವುಳ್ಳ ಪ್ರಕೃತಿಯ ಸ್ವಭಾವವನ್ನು ನಿರೂಪಿಸಬೇಕೆಂದು ತೋರಿ, ಮಾಯೆಯನ್ನು ಧ್ಯಾನಿಸಲು, ಅವನಲ್ಲಿ ಕಮಲದ ಆಕೃತಿಯುಳ್ಳ ಹೃದ ಯವೆಂಬ ಸ್ಥಾನವು ಹುಟ್ಟಿತು. ಅದರಲ್ಲಿ ಮನಸ್ಸೆಂಬ ಇಂದ್ರಿಯವೂ, ಆ ಇಂ ಪ್ರಿಯಕ್ಕೆ ಅಧಿದೇವತೆಯಾದ ಚಂದ್ರನೂ, ಆ ಮನಸ್ಸಿನಲ್ಲಿ ನಡೆಯಬೇಕಾದ