ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೧೪ ಶ್ರೀಮದ್ಭಾಗವತವು ಅಧ್ಯಾ, ೧೦. ಸಂಕಲ್ಪ, ಕಾಮ, ಮುಂತಾದುವುಗಳೂ ಉotಾದುವು. ಕೆಂಬ ಮಂದ ವಾದ ಚರ್ಮ,ಅದಕ್ಕೆ ಮೇಲಿನ ಸೂಕ್ಷಚರ್ಮ,ಮಾಂಸ,ರಕ್ತ, ಮೇದಸ್ಸು, ಅಸ್ಥಿಮಜ್ಜೆ, ಈಏಳುಧಾತುಗಳೂ ಭೂಮಿ, ನೀರು,ತೇಜಸ್ಸು,ಎಂಬ ಮೂರು ಭೂತಗಳಿಂದ ಏರ್ಪ್ಪಟ್ಟಿರುವುವು, ಆಕಾಶ, ನೀರು, ವಾಯು, ಈ ಮೂರು ಭೂತಗಳಿಂದ ಪ್ರಾಣಗಳು ಏರ್ಪ್ಪಟ್ಟುವು. ಶಬ್ದಾದಿಗುಣಗಳು ಅಹಂಕಾರ ದಿಂದ ಹುಟ್ಟಿದುವುಗಳು. ಇಂದ್ರಿಯಗಳು ಶಬ್ದಾಡಿಗುಣಗಳಿಂದ ಹುಟ್ಟಿ ದಂತವು. ಕಾಮ, ಸಂಕಲ್ಪ, ಮೊದಲಾದುವುಗಳಿಗೆ ಮನಸ್ಸೇ ಆಧಾರವಾ ಯಿತು. ಬುದ್ಧಿಯೆಂಬುದು ವಿಜ್ಞಾನ (ಮಹತ್ವ ಸ್ವರೂಪವೆನಿಸಿತು. ಎಲೈ ಪರೀಕ್ಷಿದ್ರಾಜನೆ ! ದೇವಮನುಷ್ಕಾದಿಚೇತನಾಚೇತನಗಳನ್ನು ತನ್ನೊಳಗೆ ಅಡಗಿಸಿಕೊಂಡುದಾಗಿಯೂ, ಹೊರಭಾಗದಲ್ಲಿ ಭೂಮಿ, ನೀರು, ತೇಜಸ್ಸು,ವಾ ಯು, ಆಕಾಶ, ಅಹಂಕಾರ,ಮಹತ್ತು, ಅವ್ಯಕಗಳೆಂಬಅಷ್ಟಾವರಣಗಳಿಂದಾ ಪ್ರವಾಗಿಯೂ ಇರುವ ಇದನ್ನು , ಭಗವಂತನ ಸ್ಕೂಲರೂಪವೆನ್ನುವರು. ಭಗ ವಂತನಿಗೆ ಈ ಸ್ಕೂಲರೂಪಕ್ಕಿಂತಲೂ ಅತಿಸೂಕ್ಷವಾದಬೇರೊಂದುರೂಪ ವುಂಟು. ಅದು ಕಣ್ಣು ಮೊದಲಾದ ಇಂದ್ರಿಯಗಳಿಗೆ ಗೋಚರಿಸತಕ್ಕುದಲ್ಲ. ಮತ್ತು ದೇವಮನುಷ್ಯಾದಿಗಳ ಬುದ್ದಿಗಾಗಲಿ, ವಾಕ್ಕುಗಳಿಗಾಗಲಿ ಗೋಚರಿಸಲಾರದು. ಅದಕ್ಕೆ ಉತ್ಪತಿಸ್ಥಿತಿ ವಿನಾಶಗಳೊಂದೂ ಇಲ್ಲವು. ಮತ್ತು ಕಾಲಪರಿಮಾಣಕ್ಕೆ ಒಳಪಡದೆ ನಿತ್ಯವಸ್ತುವೆನಿಸಿಕೊಂಡಿರುವುದು. ಇದೇ ಮುಕ್ತಾತ್ಮಸ್ವರೂಪವೆನಿಸುವುದು. (ಮುಕ್ತಾತ್ಮ ಸ್ವರೂಪವೆಂದರೆ, ಭಗವದನುಗ್ರಹಕ್ಕೆ ಪಾತ್ರನಾಗಿ, ಸಂಸಾರಸಂಬಂಧವಿಲ್ಲದೆ ದೇಹವನ್ನು ತ್ಯಜಿಸಿ, ಪ್ರಕೃತಿಮಂಡಲವನ್ನು ದಾಟಿ, ಪರಮಪದವನ್ನು ಸೇರಿದ ಜೀವಾತ್ಮಸ್ವರೂಪ ವು. ಇದನ್ನೇ ಭಗವಂತನ ಸೂಕ್ಷ ರೂಪವೆಂದು ಹೇಳುವರು. ಇದಕ್ಕೆ ಆ ಮೂರ್ತವೆಂದೂ ಪರವೆಂದೂ ಹೆಸರುಂಟು. ಮೊದಲು ಹೇಳಿದ ಸ್ಕೂಲ ರೂಪವನ್ನು ಮೂರ್ತವೆಂದೂ, ಆಪರವೆಂದೂ ಹೇಳುವರು. ಎಲೈ ರಾಜೇಂ ದ್ರನೆ! ಭಗವಂತನ ಈ ಪರಾವರಸ್ವರೂಪಗಳೆರಡನ್ನೂ ತಿಳಿದುಕೊಂಡೆಯ ಪೈ ( ಆದರೆ ಇವು ಭಗವದೂಪಗಳಾಗಿದ್ದ ಮೇಲೆ ಈ ಸ್ಕೂಲಸೂಕ್ಷ ರೂಪಗಳನ್ನೇ ಏಕೆ ಭಜಿಸಬಾರದು”? ಎಂದು ನಿನಗೆ ಶಂಕೆಯುಂಟಾಗಬಹು