ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೧೬ ಶ್ರೀಮದ್ಭಾಗವತವು [ಅಧ್ಯಾ ೧೦. ಮಪುರುಷನ ಸ್ವರೂಪವೆಂದು ಹೇಳುವುದು ಯುಕ್ತವೆ? ಎಂದು ನೀನುಶಂಕಿಸ ಬೇಡ! ಆ ಬ್ರಹದೇವನಲ್ಲಿಯೂ ಪರಮಪುರುಷನೇ ಅಂತರಾಮಿಯಾಗಿದ್ದು ಇದನ್ನು ಸೃಷ್ಟಿಸುವನು. ಅವನು ಈ ಜಗತ್ತೆಲ್ಲವನ್ನೂ ಶರೀರವಾಗಿ ಹೊಂ ದಿದವನಾದುದರಿಂದ ಸಮಸ್ತವೂ ಭಗವತೃರೂಪವು. ಆ ವಸ್ತುಗಳಿಗೆ ವಾಚಕಗಳಾದ ಶಬ್ಬಗಳೂ ಅವನಲ್ಲದೆ ಬೇರೆಯಲ್ಲ. ಅವನು ಬ್ರಹ್ಮನನ್ನೇ ತ ನಗೆ ಶರೀರವನ್ನಾಗಿ ಹೊಂದಿ, ದೇವಮನುಷ್ಯಾದಿಗಳೆಂಬ ನಾಮರೂಪಭೇದ ಗಳನ್ನೂ , ಅವುಗಳ ವ್ಯಾಪಾರಗಳನ್ನೂ ನಡೆಸುತ್ತಿರುವನು. ಜೀವನಂತೆ ಕ ರ್ಮಾಥೀನನಲ್ಲದೆಯೇ ಕಾರಗಳನ್ನು ನಡೆಸುವನು. ಈ ಜಗತ್ತನ್ನು ಸೃಷ್ಟಿ ಸುವುದಕ್ಕೆ ಬೇರೊಬ್ಬರ ಸಹಾಯವನ್ನೂ ಅಪೇಕ್ಷಿಸುವವನಲ್ಲ. ಅವನ ಮನ ಸೃಂಕಲ್ಪದಿಂದಲೇ ಜಗವ್ಯಾಪಾರಗಳೆಲ್ಲವೂ ನಡೆದುಹೋಗುವುವು. ಆ ಭಗವಂತನು ದೇವಾದಿರೂಪಗಳನ್ನೂ,ಆಯಾ ನಾಮಗಳನ್ನೂ ,ಅವರವರ ಕೃ ತ್ಯಗಳನ್ನೂ ಬೇರೆಬೇರೆಯಾಗಿ ಉಂಟುಮಾಡಿದ ರೀತಿಯನ್ನು ಹೇಳುವೆನು ಕೇಳು, ಪ್ರಜಾಧಿಪತಿಗಳು, ದೇವತೆಗಳು, ಋಷಿಗಳು,ಪಿತೃದೇವತೆಗಳು,ಸಿದ್ದ ರು, ಚಾರಣರು, ಗಂಧರು, ವಿದ್ಯಾಧರರು. ಆಸುರರು, ಗುಹಕರು, ಕಿನ್ನ ರರು, ಅಪ್ಪರಸ್ಸುಗಳು, ಯಕ್ಷರು, ರಾಕ್ಷಸರು, ಕಿಂಪುರುಷರು, ಭೂತಪ್ರೇತ ಪಿಶಾಚಾದಿಗಳು, ಯಾತುಧಾನರು, ಗ್ರಹಗಳು, ಮೃಗಪಕ್ಷಿಗಳು, ಪಶುಗಳು, ವೃಕ್ಷಗಳು, ಪರತಗಳು, ಸರೀಸೃಪಗಳು, (ಸರ್ಪಗಳು) ಇವೆಲ್ಲವನ್ನೂ ಬೇರೆ ಬೇರೆಯಾಗಿ ಸೃಷ್ಟಿಸಿ,ಅವಕ್ಕೆ ಬೇರೆಬೇರೆನ ಮಗಳನ್ನೂ, ವ್ಯಾಪಾರಗಳನ್ನೂ ಕಲ್ಪಿಸಿರುವನು ಇದಲ್ಲದೆ ಸ್ಥಾವರಜಂಗಮಗಳೆಂಬ ಎರಡು ವರ್ಗಗಳನ್ನೂ, ಜರಾಯುಜ, ಅಂಡಜ, ಸೈದಜ, ಉಪ್ಪಿಜ್ಞಗಳೆ೦ಗ ನಾಲ್ಕು ವರ್ಗಗಳನ್ನೂ, ಜಲದಲ್ಲಿಯೂ, ಸ್ಥಲದಲ್ಲಿಯೂ, ಆಕಾಶದಲ್ಲಿಯೂ ವರ್ತಿಸುವ ಸಮಸ್ತವನ್ನು ಗಳನ್ನೂ ಸೃಷ್ಟಿಸಿರುವನು. ಆದರೆ ಈಸಮಸ್ತವಸ್ತುಗಳನ್ನ ಒಂದೇವಿಧ ವಾಗಿ ಸೃಷ್ಟಿಸದೆ ಬೇರೆಬೇರೆ ಇನ್ನೊಂದು ವಿಧದಿಂದ ಸೃಷ್ಟಿಸಿದುದೇ ಕೆ” ಎಂದು ಕೇಳುವೆಯಾ? ರಾಜೇಂದ್ರಾ! ಜೀವನ (ಕ್ಷೇತ್ರಜ್ಞನ) ಪುಣ್ಯಪಾ ಪರೂಪವಾದ ಕಠ್ಯಗಳೂ, ಉತ್ತಮಮಧ್ಯಮಾಧಮಭೇದದಿಂದ ನಾನಾ ರೂಪವಾಗಿರುವುವು. ಇದಕ್ಕಾಗಿ ಸೃಷ್ಟಿಯೂ ಅದೇತರದಲ್ಲಿ ಬೇರ್ಪಟ್ಟಿತೇ