ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

'೩೧೮ ಶ್ರೀಮದ್ಭಾಗವತವು [ಅಧ್ಯಾ. ೧೦. ಕಲ್ಲಾಂತರದಲ್ಲಿ ಕಾಲಾಗ್ನಿ ರುದ್ರಶರೀರವುಳ್ಳವನಾಗಿ,ತನ್ನಿಂದ ಸೃಷವಾದ ಈ ಸಮಸ್ತ ಜಗತ್ತನ್ನೂ ವಾಯುವು ಮೇಘುಪಟ್ಟಿಯನ್ನು ನಾಶಮಾಡುವಂ ತೆ ನಾಶಹೊಂದಿಸುವನು. ಹೀಗೆ ಜಗತ್ತಿನ ಸೃಷ್ಣಾದಿಗಳಿಗೆ ಕಾರಣನಾಗಿ ಜ್ಞಾನಶಕ್ತಿಬಲಾದಿಷಡ್ಗುಣಪರಿಪೂರ್ಣನಾದ ಭಗವಂತನ ಸ್ವರೂಪವನ್ನು ನಿನಗೆ ತಿಳಿಸಿದುದಾಯಿತು. ಬ್ರಹ್ಮಜ್ಞಾನಿಗಳು ಅವನನ್ನು ಕೇವಲ ಚಿದ ಚಿದ್ರೂಪವನ್ನಾಗಿ ಭಾವಿಸದೆ ಇವುಗಳಿಗಿಂತಲೂ ವಿಲಕ್ಷಣವನ್ನಾಗಿಯೇ ಭಾವಿಸುವರು. ಜೀವನಿಗೆ ಜ್ಞಾನಾಡಿಗುಣಗಳ ಪೂರ್ಣತೆಯಿಲ್ಲದುದರಿಂದ ಅವನ ಕಾರಗಳೆಲ್ಲವೂ ಕರಾಠೀನವಾಗಿರುವುವು. ಪರಮಾತ್ಮನ ಕಾಠ್ಯಗಳಾ ದರೋ ಆತನ ಸಂಕಲ್ಪ ಮಾತ್ರದಿಂದಲೇ ನಡೆಯುವುವು. ಆದರೆ ಆ ಭಗವಂ ತನೇ ಸೃಷ್ಟಿಕರ್ತನಾಗಿಯೂ, ಸೃಷ್ಟಿಸಲ್ಪಡತಕ್ಕವನಾಗಿಯೂ ಇರುವ ಸೆಂಬುದು ಹೇಗೆ ? ಮತ್ತು ಅವನೇ ಸೃಷ್ಟಿಕರ್ತನಾಗಿದ್ದರೂ ಆತ ನು ಕರ್ತನಲ್ಲವೆಂಬುದು ಹೇಗೆ? ಹೀಗೆ ಒಬ್ಬನಲ್ಲಿಯೇ ಪರಸ್ಪರವಿರುದ್ಧ ಗಳಿಗೆ ಅವಕಾಶವುಂಟಿ?” ಎಂದು ನೀನು ಆಕ್ಷೇಪಿಸಬಹುದು. ಅದಕ್ಕಸ ಮಾಧಾನವನ್ನು ಹೇಳುವೆನು ಕೇಳು! ಪರಮಾತ್ಮನು ಸೃಷ್ಣಾದಿಕಾರಿಗಳ ನ್ನು ನಡೆಸುವಾಗ, ಆಯಾ ಕಾಲದಲ್ಲಿ ಆಯಾಕಾರಗಳಿಗೆ ತಾನೂ ಭಾಗಿಯಾ ಗಿ ನಿಲ್ಲುವನು. ಆದರೆ ಅವನ ಸ್ವರೂಪವು ವಾಸ್ತವದಲ್ಲಿ ಈ ವಿಕಾರಗಳಿಗೆ! ಈಡಾದುದಲ್ಲ. ಹೇಗೆಂದರೆ, ಆತನು ಸೃಷ್ಟಿಸಿತಿಸಂಹಾರಗಳಿಗೆ ಈಡಾಗತ ಈ ಸಮಸ್ಯವಸ್ತುಗಳಲ್ಲಿಯೂ ಅಂತರಾತ್ಮನಾಗಿರುವುದರಿಂದ, ಅವುಗಳ ಮೂಲಕವಾಗಿ ಅವನಿಗೂ ಈ ಅವಸ್ಥೆಗಳುಂಟಾಗುವುವೆಂದು ಹೇಳುವುದೇ ಹೊರತು, ಇವೊಂದೂ ಅವನಿಗೆ ಸ್ವರೂಪದ್ಯವಲ್ಲ ಇನ್ನು ಅವನಿಗೆ ಕರ್ತೃ ತ್ವದ ಸಂಬಂಧವು ಹೇಗೆಂಬುದನ್ನು ತಿಳಿಸುವೆನುಕೇಳು.ಪ್ರಕೃತಿಸಂಬಂಧದಿಂ ದ ಜೀವಾತ್ಮನಲ್ಲಿ ಆರೋಪಿತವಾಗಿಯೂ, ಆ ಪ್ರಕೃತಿಯ ಪರಿಣಾಮದಿಂ ದುಂಟಾದ ಶರೀರೇಂದ್ರಿಯಗಳನ್ನು ಹೊಂದತಕ್ಕುದಾಗಿಯೂ ಇರುವ ಕರ್ತೃತ್ವವು ಪರಮಾತ್ಮನಲ್ಲಿ ಎಂದಿಗೂ ಸೇರಲಾರದು. ಇದ ರಿಂದಲೇ ಆತನು ಕರ್ತನಲ್ಲವೆಂದು ಸಿದ್ಧವಾಗುವುದು. ಜೀವನಂತೆ ಪ್ರಕೃತಿ ಸಂಬಂಧದಿಂದ ಬಂದ ಕರ್ತೃತ್ವವು ಆತನಿಗಿಲ್ಲವೆಂಬ ಅಭಿಪ್ರಾಯದಿಂದಲೇ