ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೧೦. ದ್ವಿತೀಯಸ್ಕಂಧವು ೩೧೯ ಅವನಿಗೆ ಕರ್ತೃತ್ವವಿಲ್ಲವೆಂದು ಹೇಳುವರು. ತನ್ನ ಸಂಕಲ್ಪ ಮಾತ್ರದಿಂದಲೇ ಸೃಷ್ಟಿಮೊದಲಾದ ಕಾರ್ಯಗಳನ್ನು ನಡೆಸುವನೆಂಬ ಭಾವದಿಂದ ಅವನನ್ನು ಕರ್ತನೆಂದೂ ಹೇಳುವರು. ಇದರಿಂದ ಕರ್ತೃತ್ಯಾಕರ್ತೃತ್ವಗಳೆರಡೂ, ಅವನಲ್ಲಿ ಹೊಂದುವುವು. ಆದುದರಿಂದ ಎಲ್ಯ ಪರೀಕ್ಷಿದ್ರಾಜನೆ ! ನೀನು ಹೇಳಿದ ವಿರೋಧವು ಪರಿಕೃತವಾಯಿತಷ್ಟೆ? ಪ್ರಪಂಚದಂತೆ ಕರ್ಮಸಂಬಂಧದಿಂ ದುಂಟಾಗುವ ಜನ್ಮಾದಿಗಳೆಂದೂ ಪರಮಾತ್ಮನಲ್ಲಿ ಸೇರಲಾರವು. ಆ ಭಗ ವಂತನ ಜನ್ಮಾದಿಗಳೂ, ವ್ಯಾಪಾರಗಳೂ,ಆವನ ಸಂಕಲ್ಪದಿಂದಲೂ, ಜ್ಞಾ ನದಿಂದಲೂ ನಡೆಯುವುದೇ ಹೊರತು ಬೇರೆ ಯಲ್ಲ! ಕರ್ಮಸಂಬಂಧದಿಂದುಂ ಟಾಗುವ ಕರ್ತೃತ್ವವು ತನಗಿಲ್ಲವೆಂಬುದನ್ನು ತೋರಿಸುವುದಕ್ಕಾಗಿಯೇ, ತನ್ನ ಸಂಕಲ್ಪದಿಂದ ದೇವಮನುಷ್ಯಾದಿಜನ್ಮಗಳನ್ನೂ, ಅವರ ವ್ಯಾಪಾರಗಳನ್ನೂ ತನ್ನಲ್ಲಿ ಆರೋಪಿಸಿಕೊಂಡು, ಅವತಾರಗಳನ್ನೆತಿ, ಅಮಾನುಷಕೃತ್ಯಗಳಿಂದ ತಾನೇ ಪರಮಪುರುಷನೆಂಬುದನ್ನು ತೋ: ಏಸುತ್ತಿರುವನು, ಓ ರಾಜೇಂದ್ರನೆ! ಬ್ರಹ್ಮನಿಗೆ ಸಂಬಂಧಪಟ್ಟ ಮಹಾಕವನ್ನೂ ಅವಾಂತರಕಲ್ಪವನ್ನೂ ಸಂಗ್ರಹಿಸಿ ನಿನಗೆ ಹೇಳಿರುವೆನು. ಮಹತ್ವದಿಂದ ಭೂಮಿಯವರೆಗಿರುವ ಪ್ರಾಕೃತಸೃಷ್ಟಿಗಳೂ, ಪೃಥಿವ್ಯಾವಿಕಾರಗಳಾದ ಸೃಷ್ಟಿಗಳೂ, ಮ ಹಾಕಲ್ಪದಲ್ಲಿಯೇ ಉa+ರಾಗುವುವು. ಒಂದೊಂದು ಮಹಾಕಲ್ಪದಲ್ಲಿಯೂ ಇದೇ ವಿಧವಾದ ಸೃಷ್ಟಿಯು ನಡೆಯುತ್ತಿರುವುದು. ಎಲೈ ಪರೀಕ್ಷಿದ್ರಾಜ ನೆ! ನೀನು ಕೇಳಿದ ಪ್ರಶ್ನೆಗಳಲ್ಲಿ ಕೆಲವಕ್ಕೆ ಮಾತ್ರ ಉತ್ತರವನ್ನು ಹೇಳಿರುವೆ ನು. ಸೂಲಸೂತಗಳೆಂಬ ಕಾಲಸುಮಾಣವನ್ನೂ , ಕಲ್ಪಲಕ್ಷಣಗಳನ್ನೂ, ಮನ್ವಂತರಾದಿಗಳನ್ನೂ, ಮುಂದಿನ ಸ್ಟಂಥದಲ್ಲಿ ವಿವರಿಸಿ ಹೇಳುವೆನು. ಅಲ್ಲಿ ಯೇ ಪದ್ಮ ಕಲ್ಪವನ್ನೂ ವಿಸ ಇಸಿ ತಿಳಿಸುವೆನು. ಅವೆಲ್ಲವನ್ನೂ ನೀವು ಸಾವ ಧಾನವಾಗಿ ಕೇಳಬೇಕು.” ಎಂದನು. ಹೀಗೆಂದು ಶುಕಮಹಾಮುನಿಯು ಪರೀ ಕ್ಷಿದ್ರಾಜನಿಗೆ ಹೇಳಿದ ವಿಷಯಗಳನ್ನು , ಸೂತಪೌರಾಣಿಕನು ಶೌನಕಾದಿಗಳಿಗೆ ತಿಳಿಸಲು, ಶೌನಕಮಹಾ ಮುನಿಯು ತಿರುಗಿ ಸತನನ್ನು ಕುರಿತು, "ಓಮಹಾ ತ್ಮಾ ! ಭಕೋತ್ತಮನಾಗಿಯೂ, ತತ್ವಜ್ಞನಾಗಿಯೂ ಇರುವ ವಿದುರನು ತನ್ನ ಬಂಧುವರ್ಗವೆಲ್ಲವನ್ನೂ ತೊರೆದು, ಪುಣ್ಯತೀರ್ಥಯಾತ್ರೆಗೆ ಹೊರಟನೆಂ