ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತ ಮಾಹಾತ್ಮ ವು. ವೇನೆಂಬುದನ್ನು ನಾನು ಈಗಲೇ ಓದಿ ತಿಳಿದುಕೊಂಡೆನು ! ಇನ್ನೇಳು ಜನ್ಮ ಗಳವರೆಗೂ ನಿನಗೆ ಸಂತಾನವು ಲಭಿಸದು, ಇದಕ್ಕಾಗಿ ನೀನು ಚಿಂತಿಸ ಬೇಡ ! ಈ ಸಂತಾನದಿಂದ ಮನುಷ್ಯನಿಗೆ ಕಷ್ಟವೇ ಹೊರತು ಸುಖವಿ ಇವು. ದೂರದಲ್ಲಿ ಸಗರಚಕ್ರವರ್ತಿಯು ಅರುವತ್ತು ಸಾವಿರಮಂದಿ ಮಕ್ಕಳ ನ್ನು ಪಡೆದು ಯಾವ ಸುಖವನ್ನು ಹೊಂದಿದನು ? ಎಲೆ ಬ್ರಾಹ್ಮಣನೆ ! ಈ ಕುಟುಂಬದಾಸೆಯನ್ನು ಬಿಟ್ಟುಬಿಡು ! ಸನ್ಯಾಸದಲ್ಲಿ ಸತ್ವವಿಧದಲ್ಲಿಯೂ ಸುಖವುಂಟು” ಎಂದನು. ಆದ ಕಾಬ್ರಾಹ್ಮಣನು (ಎಲೈಯತೀಶ್ವರನೆ! ಈಗ ನನಗೆ ಈ ನಿನ್ನ ವಿವೇಕಬೋಧನೆಯೊಂದೂ ಮನಸ್ಸಿಗೆ ಹಿಡಿಯವು. ನಿನ್ನ ತಪೋಬಲಯಿಂದ ನನಗೆ ಸಂತಾನವನ್ನು ಕೊಡುವುದಾದರೆ ಕೊಡು. ಇಲ್ಲವಾದರೆ ನಿನ್ನ ಮುಂದೆಯೇ ನಾನು ಪ್ರಾಣವನ್ನು ಬಿಡುವೆನು. ಸಂ ತಾನಸುಖವನ್ನು ತೊರೆದು ಕೇವಲಶುಷ್ಕವಾದ ಸನ್ಯಾಸವನ್ನು ಪರಿಗ್ರ ಹಿಸುವುದರಿಂದ ಫಲವೇನು? ಪತ್ರ ಪಾತ್ರರೊಡಗೂಡಿ ಸಂಸಾರಸುಖವನ್ನು ಅನುಭವಿಸುವ ಗೃಹಸ್ಥಾಶ್ರಮವೇ ಸರೋತ್ತಮವಲ್ಲದೆ ಬೇರೆಯಲ್ಲ ಎಂದನು. ಹೀಗೆ ಆ ಬಾಹ್ಮಣನು ಹಟವಾದದಿಂದ ಹೇಳುವ ಮಾತನ್ನು ಕೇಳಿ ತಿರುಗಿ ಆ ಸನ್ಯಾಸಿಯು ಬ್ರಾಹ್ಮಣ ! ಬೇಡ ! ಈ ಹಟದಿಂದ ನೀನು ಬಹಳ ಕಷ್ಟಕ್ಕೆ ಗುರಿಯಾಗುವೆಯಲ್ಲದೆ ಬೇರೆಯಲ್ಲ. ನೀನು ನಿನ್ನ ಕರ್ಮಬಲವನ್ನು ಮೀರಿ ಸಂತಾನವನ್ನು ಪಡೆದರೂ, ಅದರಿಂದ ನೀವು ಬಹಳ ಅನರ್ಥಗಳಿಗೆ ಗುರಿಯಾಗುವೆಯೇ ಹೊರತು ಲೇಶಮಾತ್ರವೂ ಸುಖವಿರದು. ಇನ್ನು ನಿನ್ನ ಹಣೆಯ ಬರಹವಿದಂತಾಗಲಿ,” ಎಂದು ಹೇಳಿ, ಅವನ ಕೈಗೆ ಒಂದು ಫಲವ ನ್ನು ಮಂತ್ರಿಸಿ ಕೊಟ್ಟು, 'ಇದೊ! ಈ ಫಲವನ್ನು ನಿನ್ನ ಪತ್ನಿಗೆ ಕೊಟ್ಟು ಇದನ್ನು ಭಕ್ಷಿಸುವಂತೆ ಹೇಳು! ನೀವಿಬ್ಬರೂ ಒಂದು ವರುಷದವರೆಗೆ ಬಹಳ ನಿಯಮದಿಂದಿರಬೇಕು. ಅದರಿಂದಾಚೆಗೆ ಅತಿಶುದ್ಧನಾದ ಪುತ್ರನೊಬ್ಬನು ಹುಟ್ಟುವನು” ಎಂದು ಹೇಳಿ ತನ್ನ ಮಾರ್ಗವನ್ನು ಹಿಡಿದು ಹೊರಟುಹೋ ದನು. ಬ್ರಾಹ್ಮಣನೂ ಇತ್ತಲಾಗಿ ತನ್ನ ಮನೆಗೆ ಬಂದು ಹಣ್ಣನ್ನು ತನ್ನ ಪ ತ್ನಿಯಾದ ದುಂಧುಲಿಯ ಕೈಗೆ ಕೊಟ್ಟು, ಬೇರೆ ಕಾತ್ಯಾತುರದಿಂದ ತಾನು ಹೊರಗೆ ಹೋದನು.