ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಹಾತ್ಮವು. ದುಂಧುಲಿಯು ಕೇವಲ ವಕ್ರಬುದ್ಧಿಯುಳ್ಳವಳಾದುದರಿಂದ, ಆ ಹಣ್ಣ ನ್ನು ಕೈಗೆ ತೆಗೆದುಕೊಂಡಕೂಡಲೆ, ಅವಳಿಗೆ ಮನಸ್ಸಿನಲ್ಲಿ ವಿಚಿತ್ರವಾದ ಒಂ ದು ಚಿಂತೆಯು ಹುಟ್ಟಿತು. ಆ ಹಣ್ಣನ್ನು ಕೈಯಲ್ಲಿಟ್ಟುಕೊಂಡು ತನ್ನ ಸ ಖಿಯಮುಂದೆ ಕುಳಿತು ಅಳುವುದಕ್ಕಾರಂಭಿಸಿದಳು. ಅಯ್ಯೋ ! ಇದೇನು ? ಈ ಹಣ್ಣನ್ನು ತಿಂದರೆ ನನ್ನ ಗತಿಯೇನು? ಛೇ ! ನಾನೆಂದಿಗೂ ಇದನ್ನು ತಿನ್ನು ವವಳಲ್ಲ! ಇದನ್ನು ತಿಂದೊಡನೆ ಗರ್ಭವು ಬೆಳೆಯುವುದರಲ್ಲಿ ಸಂದೇಹವಿಲ್ಲ. ಗರ್ಭವು ಬೆಳೆಯುತ್ತ ಬಂದಹಾಗೆಲ್ಲಾ ಹೊಟ್ಟೆಯ ಉಬ್ಬಿಕೊಳ್ಳುವುದು. ಸರಿಯಾಗಿ ಅನ್ನ ವೂ ಸೇರುವುದಿಲ್ಲ. ಮೈಯಲ್ಲಿ ಶಕ್ತಿಯೂ ತಗ್ಗುವುದು. ಆ ಸ್ಥಿತಿಯಲ್ಲಿ ಮನೆಯ ಕೆಲಸಗಳು ಹೇಗೆ ನಡೆಯಬೇಕು? ಒಂದುವೇಳೆ ಕಳ್ಳಕಾ ಕರಾಗಲಿ, ಕೊಳ್ಳೆಹೊಡೆಯುವರಾಗಲಿ, ಈ ಗ್ರಾಮಕ್ಕೆ ನುಗ್ಗಿ ಬಿಟ್ಟರೆ ನಾನು ಹೊರಲಾರದ ಆ ಹೋಟೆಯನ್ನು ಹೊತ್ತು ಕೊಂಡು, ಹಣಕಾಸುಗಳನೂ ಸಾಗಿಸಿಕೊಂಡು ಓಡುವುದು ಹೇಗೆ? ಒಂದುವೇಳೆ ಗರ್ಭವು ಬೆಳೆದು ಹೊಟ್ಟೆ ಯಲ್ಲಿಯೇ ತಂಗಿಬಿಟ್ಟರೆ ಅದನ್ನು ಹೊರಗೆ ತೆಗೆಯುವುದು ಹೇಗೆ ? ಒಂದು ವೇಳೆ ಶಿಶುವು ಗರ್ಭಕೋಶದಲ್ಲಿ ಅಡ್ಡಲಾಗಿ ನಿಂತುಹೋದರೆ ಆಗ ನನಗೆ ಮರಣವಲ್ಲದೆ ಬೇರೆ ಗತಿಯೇನು ? ಆಥವಾ ಕ್ರಮಪ್ರಸವವಾದರೂ, ಇ ಷ್ಟು ಸುಕುಮಾರವಾದ ಮೈಯುಳ್ಳ ನಾನು, ಆ ಪ್ರಸವವೇದನೆಯನ್ನು ಹೇ ಗೆ ಸಹಿಸಲಿ : ಗರ್ಭಶ್ರಮದಿಂದ ಮನೆಯ ಕೆಲಸಗಳಲ್ಲಿ ನಾನು ಎಚ್ಚರತಪ್ಪಿ ರುವುದನ್ನು ನೋಡಿದಮಾತ್ರದಲ್ಲಿಯೇ, ನನ್ನ ನಾದಿನಿಯು ಮನೆಯ ಸತ್ವ ಸ್ವವನ್ನೂ ಸಾಗಿಸಿಬಿಡುವಳು. ಅಷ್ಟು ದೂರವೇಕೆ ? ಈ ಹಣ್ಣನ್ನು ತಿಂದ ಮೇಲೆ ಆ ಸನ್ಯಾಸಿಯು ಹೇಳಿದಂತೆ ಆಷ್ಟು ನಿಯಮಗಳನ್ನನುಸರಿಸುವುದಕ್ಕಾ ದರೂ ನನ್ನಿಂದ ಹೇಗೆ ಸಾಧ್ಯವು? ಇಷ್ಟು ಶ್ರಮಪಟ್ಟು ಒಂದುಮಗುವನ್ನು ಪಡೆದರೂ ಅದನ್ನು ಪೋಷಿಸುವುದಕ್ಕಾಗಿ ಎಷ್ಟೇ ಕಷ್ಟಪಡಬೇಕಾಗುವು ದು. ಇವೆಲ್ಲವನ್ನೂ ಯೋಚಿಸಿದರೆ ಹೆಂಗಸಾಗಿ ಹುಟ್ಟಿದವಳು ಬಂಜೆಯಾ ಗಿರುವುದೇ ಮೇಲೆಂದು ತೋರುವುದು ಅಥವಾ ವಿಧವೆಯಾಗಿದ್ದರೂ ಉತ್ತ ಮವೇ!” ಎಂದು ತನ್ನ ಮನಸ್ಸಿನಲ್ಲಿಯೇ ಕುತರ್ಕಗಳನ್ನು ಮಾಡಿಕೊಂಡು ಆ ಹಣ್ಣನ್ನು ಭಕ್ಷಿಸಿದಹಾಗೆಯೇ ಇದ್ದು ಬಿಟ್ಟಳು ! ಗಂಡನು ಮನೆಗೆ ಬಂದು ಕೇಳಿದಾಗ ತಾನು ಆ ಹಣ್ಣನ್ನು ಭಕ್ಷಿಸಿದುದಾಗಿಯೂ ಹೇಳಿಬಿಟ್ಟಳು.