ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು. ಕೊಟ್ಟು, ಜಾತಕರ್ಮಾದಿಸಂಸ್ಕಾರಗಳನ್ನೂ ನಡೆಸಿದನು. ಗೀತವಾದ್ಯಾದಿ ಮಂಗಳಧ್ಯಸಿಗಳೊಡನೆ ಬಹಳ ವೈಭವದಿಂದ ಶುಭಕಾಧ್ಯಗಳೆಲ್ಲವೂ ನಡೆಸಲ್ಪ ಟ್ಯುವು. ಆಮೇಲೆ ದುಂಧುಲಿಯು ತನ್ನ ಪತಿಯನ್ನು ಕುರಿತು ನಾಥಾ!ನನ್ನ ಎದೆಯಲ್ಲಿ ಸ್ವವಲ್ಲ! ನಾನು ಈ ಮಗುವನ್ನು ಹೇಗೆ ಪೋಷಿಸಲಿ? ಈಗಲೇ ನನ್ನ ತಂಗಿಯು ಪ್ರಸವಿಸಿ ಆತಿಶುವು ಮೃತವಾಯಿತು!ಅವಳಲ್ಲಿ ಬೇಕಾದಷ್ಟು ಸವಿರುವುದು. ಅವಳನ್ನು ಕರೆತಂದು ನಮ್ಮ ಮನೆಯಲ್ಲಿಟ್ಟುಕೊಂಡರೆ ಆ ವಳೇ ನಮ್ಮ ಮಗುವನ್ನು ಪೋಷಿಸುವಳು”ಎಂದಳು. ಆ ಬ್ರಾಹ್ಮಣನು ಆದ ನ್ಯೂ ನಂಬಿ, ಅದರಂತೆಯೇ ಒಪ್ಪಿಕೊಂಡನು ಆಮೇಲೆ ಆ ತಿಶುವಿಗೆ ದುಂಧು ಸರಿಯೆಂದು ನಾಮಕರಣವನ್ನೂ ಮಾಡಿದನು. ಇದು ಹೀಗಿರಲು ಮೂರು ತಿಂಗಳಾದಮೇಲೆ ಒತಲಾಗಿ ಆ ಹಣ್ಣನ್ನು ತಿನ್ನಿಸಿದ ಹಸುವಿನ ಗರ್ಭದಿಂದ ಅತ್ಯದ್ಭುತವಾದ ದಿವ್ಯರೂಪವುಳ್ಳ ಒಂದು ಗಂಡುಮಗುವು ಜನಿಸಿತು.ಆಗ್ರಾ ಹಾಸಿಗೆ ಕೊನೆಮೊದಲಿಲ್ಲದ ಆಶ್ಚದ್ಯವೂ, ಸಂತೋಷವೂ ಹುಟ್ಟಿತು. ಆ ತಿ ಶುವಿಗೂ ತನೇ ಜಾತಿಕರ್ಮಾದಿಸಂಸ್ಕಾರಗಳೆಲ್ಲವನ್ನೂ ನಡೆಸಿದನು. ಈ ಆ ಶ್ರನ್ಯವನ್ನು ನೋಡುವುದಕ್ಕಾಗಿ ಊರಿನ ಜನರೆಲ್ಲರೂ ಒಂದು ನೆರೆದರು ಅವ ರೆಲ್ಲರೂ ಆ ಮಗುವನ್ನು ನೋಡಿ ಒಬ್ಬರಿಗೊಬ್ಬರು. ('ಆಹಾ! ಈ ಬ್ರಾಹ್ಮಣ ನ ಭಾಗ್ಯವೇ ಭಾಗ್ಯವು ಬಹುಕಾಲದಿಂದ ಸಂತಾನವಿಲ್ಲದೆ ಕೊರಗುತಿದ್ದ ಈ ಬ್ರಾಹ್ಮಣಸಿಗೆ, ಹೆಂಡತಿಯಲ್ಲಿಯೂ ಪುತ್ರಸಂತಾನವಾದುದಲ್ಲದೆ, ಮನೆಯಲ್ಲಿ ಸಾಕಿದ ಧೇನುವೂಕೂಡ ದಿವ್ಯರೂಪವುಳ್ಳ ಪುತ್ರನನ್ನು ಪ್ರಸವಿಸಿ ಕೊಟ್ಟಿತ ಲ್ಲವೆ?” ಎಂದು ಒಬ್ಬೊಬ್ಬರೂ ಕೊಂಡಾಡುತಿದ್ದರು. ಇಷ್ಟಾದರೂ ಅದರ ರಹಸ್ಯವು ಮಾತ್ರ ಯಾರಿಗೂ ತಿಳಿಯಲಿಲ್ಲ. ಆಮೇಲೆ ಬ್ರಾಹ್ಮಣ ನು ಆ ತಿಶುವಿಗೆ ಗೋವಿನ ಕಿವಿಯಂತೆ ಕಿವಿಗಳಿರುವುದನ್ನು ನೋಡಿ, ಅದಕ್ಕೆ ಗೋಕರ್ಣನೆಂದೇಹೆಸರಿಟ್ಟನು. ಆ ತಿಶುಗಳಿಬ್ಬರೂ ಕ್ರಮಕ್ರಮವಾಗಿ ವೃದ್ಧಿ ಹೊಂದುತ್ತ ಬಂದರು. ಸಮವಯಸ್ಸುಳ್ಳವರಾಗಿ ಇಬ್ಬರೂ ಯೌವನವನ್ನು ಹೊಂದಿದರು. ಆದರೆ ಗೋಕರ್ಣನೆಂಬವನು ಕ್ರಮಕ್ರಮವಾಗಿ ಪಂಡಿತನೂ ಜ್ಞಾನಿಯೂ ಆಗುತ್ತ ಬಂದನು.ದುಂಧುಕಾರಿಯಾದರೋ ಕೇವಲ ಮೂಢ ನಾಗಿದ್ದು ಸ್ನಾನಶಚಾಚಾರಗಳೆಲ್ಲವನ್ನೂ ಬಿಟ್ಟನು. ಕಾಮಕ್ಕೂ