ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತ ಮಾಹಾತ್ಮವು. ಧಾದಿ ದುರ್ಗುಣಗಳೆಲ್ಲವೂ ಇವನಲ್ಲಿ ನೆಲೆಗೊಂಡುವು. ಕದಿಯುವುದು, ಇತ ರರಮನೆಗೆ ಬೆಂಕಿಯಿಡುವುದು, ಅರಿಯದ ಮಕ್ಕಳನ್ನು ಬಾವಿಗೆ ತಳ್ಳುವುದು, ಕಂಡಕಂಡವರೆಲ್ಲವರನ್ನೂ ಹಿಂಸಿಸುವುದು, ಅಂಗಹೀನರಾದ ಬಡಬಗ್ಗರನ್ನು ಹಾಸ್ಯಮಾಡುವು :ು, ಇವೇ ಮೊದಲಾದ ಕೊರಕೃತ್ಯಗಳೆಲ್ಲವನ್ನೂ ನಡೆಸು ತ ಬಂದನು. ಜಾರಕೃತ್ಯದಲ್ಲಿ ಬಿದ್ದು ಪಿತ್ರಾರ್ಜಿತವಾದ ಧನವೆಲ್ಲವನ್ನೂ ನಾಶಮಾಡಿಬಿಟ್ಟನು ದುರ್ಬಲರಾದ ತಂದೆತಾಯಿಗಳನ್ನು ಹೊಡೆದು ಬಡಿದು ಹಿಂಸಿಸಿ, ಮನೆಯಲ್ಲಿದ್ದ ಪಾತ್ರ ಪಧಾರ್ಥಗಳೆಲ್ಲವನ್ನೂ ಮಾರುತ್ತಿದ್ದನು. ಕೊನೆಗೆ ಆತ್ಮ ದೇವನು ಈ ಹಿಂಸೆಯನ್ನು ತಡೆಯಲಾರದೆ ಬೀದಿಬೀದಿಯಲ್ಲಿ ಅಳುವುದಕ್ಕೆ ತೊಡಗಿದನು. 2 (24ಯ್ಯೋ ! ಇಂತಹ ದುಷ್ಟುತ್ರನು ಹುಟ್ಟುವುದ ಕ್ಕಿಂತಲೂ, ನನ್ನ ಪತ್ನಿ ಯು ಮೊದಲಿನಂತೆ ಬಂಜೆಯಾಗಿದ್ದರೇ ಎಷ್ಟೊಮೇ ಲಾಗಿತ್ತು. ಆಯಾ ! ನನಗಿನ್ನೇನುಗತಿ ! ನಾನೆಲ್ಲಿಗೆ ಹೋಗಲಿ? ನನ್ನ ದುಃಖವ ನ್ನು ನೀಗಿಸುವವರಾರು? ಈ ಕಷ್ಟದಲ್ಲಿ ಬದುಕಿರುವುದಕ್ಕಿಂತಲೂ ಪ್ರಾಣವ ನ್ಯಾ ದರೂ ಬಿಡಬಹುದು!”ಎಂದು ಕೂಗಿಕೊಳ್ಳುತಿದ್ದನು. ಇದೇ ಸಮಯದ ಮಹಾಜ್ಞಾನಿಯಾದ ಗೋಕರ್ಣನೆಂಬ ಪುತ್ರನು ತಂದೆಯ ಬಳಿಗೆ ಬಂದು, ಅವನನ್ನು ಸಮಾಧಾನಪಡಿಸುತ್ತ ವಿರಕ್ತಿ ಮಾರ್ಗಗಳನ್ನು ಪದೇತಿಸಿ, 'ಜನಕಾ! ಈ ಸಂಸಾರವೆಂಬುದು ಕೇವಲದುಃಖರೂಪವಾಗಿ ಸುಖಭಾಂತಿಯನ್ನುಂಟು ಮಾಡುವುದೇಹೊರತು ಇದರಲ್ಲಿ ಏನೇನೂ ಸಾರವಿಲ್ಲವು. ನಿಸ್ಸಾರವಾದ ಈ ಸಂಸಾರದಲ್ಲಿ ಮಕ್ಕಳಾರಿಗೆ ? ಧನವಾರಿಗೆ ? ಒಬ್ಬರಿಗೊಬ್ಬರಿಗೆ ಏನೇನೂ ಸಂಬಂಧವಿಲ್ಲವು. ದೀಪದಲ್ಲಿ ಸ್ನೇಹ (ಎಣ್ಣೆ) ವಿರುವವರೆಗೂ ಅದು ಜ್ವಲಿಸು ವಂತೆ, ಮನುಷ್ಯನೂಕೂಡ ಇತರವಸ್ತುಗಳಲ್ಲಿ ಸ್ನೇಹವನ್ನು ತೋರಿಸಿದಷ್ಟೂ ದುಃಖಾಗ್ರಿ ಯಿಂದ ಬೇಯಬೇಕಾಗಿರುವುದು. ಆಯಾ! ಮುಖ್ಯವಾಗಿ ಒಂದು ವಿಷಯವನ್ನು ಹೇಳುವೆನು ಕೇಳು? ಮಹೇಂದ್ರನಿಗಾಗಲಿ, ಚಕ್ರವರ್ತಿಗಾಗಲಿ ದುಃಖವೆಂಬುದು ತಪ್ಪದು. ಏಕಾಂತವಾಸಿಯಾದ ವಿರಕ್ತನೊಬ್ಬನೇ ಲೋಕ ದಲ್ಲಿ ಪರಮಸುಖಿಯು ! ಇನ್ನು ಮೇಲಾದರೂ ಈ ಅಜ್ಞಾನವನ್ನು ಬಿಟ್ಟುಬಿ ಡು! ಈ ಮೋಹಸಂಬಧದಿಂದ ನರಕಪ್ರಾಪ್ತಿಯಲ್ಲದೆ ಬೇರೆಯಲ್ಲ! ಈ ದೇಹ ವೆಂಬುದು ಹೇಗಿದ್ದರೂ ಯಾವಾಗಲೋ ಒಮ್ಮೆ ಬಿದ್ದು ಹೋಗುವುದು. ಆದು