ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು. ೨೭ ನು. ಇವನಿಗೆ ಸುಖದುಃಖಗಳಾಗಲಿ, ಶತ್ರುಮಿತ್ರರಾಗಲಿ, ಜಂಧುಬಳಗವಾಗ ಲಿ, ಈ ಯಾವ ವಿಧವಾದ ಸಂಬಂಧವೂ ಇಲ್ಲದುದರಿಂದ,ಇವನು ನಿಶ್ಚಂತನಾ ಗಿದ್ದನು. ದುಂಧುಕಾರಿಯಾದರೆ ಮನೆಯಲ್ಲಿಯೇ ಕುಳಿತು, ಐದುಮಂದಿ ಸೂಳೆಯರನ್ನು ಕಟ್ಟಿಕೊಂಡು, ಅವರನ್ನು ಪೋಷಿಸುವುದಕ್ಕೂ ಕೈಲಾಗದೆ ಕಳವಳಿಸುತ್ತ, ಆಕೃತ್ಯಗಳನ್ನು ನಡೆಸುವುದಕ್ಕೆ ತೊಡಗಿದನು. ಈ ವೇಶೈಯ ರಾದರೋ ಅವನನ್ನು ಮೇಲೆಮೇಲೆ ಒಡವೆಗಳಿಗಾಗಿ ನಿರ್ಬಂಧಿಸುತಿದ್ದರು. ಕೇವಲಕಾಮಾಂಧನಾದ ಆ ದುಂಧುಕಾರಿಯು, ಅವರ ಮಾತಿಗೆ ಮರು ಳಾಗಿ, ಜೀವದಮೇಲೆಯೂ ಆಸೆಯಿಡದೆ, ಮನೆಯಿಂದ ಹೊರಟು, ದಾರಿಗ ಕೃನಾಗಿ ಪ್ರಯಾಣಿಕರ ತಲೆಯನೊಡೆದು,ಸಿಕ್ಕಿದ ಹಣವನ್ನೂ , ಒಡವೆಗಳ ನ್ಯೂ , ವಸ್ತ್ರಗಳನ್ನೂ ಕದ್ದು ತಂದು ಕೊಡುತ್ತಿದ್ದನು. ಹೀಗೆ ಕಳ್ಳತನದಿಂದ ಲೇ ಬಹಳದ್ರವ್ಯವನ್ನು ತಂದು ಸೇರಿಸಿಬಿಟ್ಟನು. ಇನ್ನೊಂದು ದ್ರವ್ಯ ರಾಶಿಯನ್ನು ನೋಡಿದಮೇಲೆ ಆ ವೇಶೈಯರಿಗೆ ಒಂದು ದುರಾಲೋಚನೆಯು ಹುಟ್ಟಿತು. ಅವರೆಲ್ಲರೂ ಒಂದಾನೊಂದುರಾತ್ರಿ ಏಕಾಂತದಲ್ಲಿ ಒಂದಾಗಿ ಕಲೆತು, ತಮ್ಮೊಳಗೆ ಒಬ್ಬರಿಗೊಬ್ಬರು ಮಂತ್ರಾಲೋಚನೆಯನ್ನು ನಡೆಸಿಕೊಂ ಡರು. 'ಆಹಾ ! ಈ ನೀಚನೇನೋ ಪ್ರತಿದಿನವೂ 23ಾಲ್ಯದಿಂದಲೇ ಹಣವ ನ್ನು ತಂದು ಸೇರಿಸುತ್ತಿರುವನು! ಹೀಗಿರುವಾಗ ಇವನು ಎಂದಾದರೂ ಒಮ್ಮೆ ರಾಜಭಟರ ಕೈಗೆ ಸಿಕ್ಕಿ ಬೀಳುವುದರಲ್ಲಿ ಸಂದೇಹವಿಲ್ಲ. ರಾಜಭಟರ ಕೈಗೆ ಸಿಕ್ಕಿದಮೇಲೆ ಇವನಿಗೆ ಮರಣದಂಡನೆಯಲ್ಲದೆ ಬೇರೆಯಿಲ್ಲ ! ಇವನು ಇದು ವರೆಗೆ ತಂದು ಸೇರಿಸಿರುವ ದ್ರವ್ಯವನ್ನೂ ಅವರೇ ಕೈಸೇರಿಸಿಕೊಂಡುಬಿಡು ವುದರಲ್ಲಿ ಸಂದೇಹವಿಲ್ಲ. ಆಗ ನಮಗೆ ಈ ಹಣವೂ ಕೈತಪ್ಪಿ ಹೋಗುವುದು. ನಾವು ನಿರ್ಗತಿಕರಾಗಿ ಅಲೆಯಬೇಕಾಗುವುದುಆದುದರಿಂದ ಈ ಅನರಗ ಳೆಲ್ಲವೂ ಉಂಟಾಗುವುದಕ್ಕೆ ಮೊದಲು, ನಾವೇ ಇವನನ್ನೆ ಕೆ ಕೊಂದುಬಿಡ ಬಾರದು? ಏನಾದರೂ ಉಪಾಯದಿಂದ ನಾವೆಲ್ಲರೂ ಸೇರಿ ಇವನನ್ನು ಕೊಂ ದುಬಿಟ್ಟರೆ, ನಮ್ಮಲ್ಲಿರುವ ಹಣವನ್ನು ಸಂಗ್ರಹಿಸಿಕೊಂಡು ನಾವು ಬೇರೆಲ್ಲಿ ಯಾದರೂ ಕಣ್ಮರೆಯಾಗಿ ಹೊರಟುಹೋಗಬಹುದು. ಆಗ ಹಣವಾದರ ನಮಗೆ ದಕ್ಕಬಹುದಲ್ಲವೆ ? ” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡು,