ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೮ ಶ್ರೀಮದ್ಭಾಗವತಮಾಹಾತ್ಮವು. ಅದರಂತೆಯೇ ನಿಶ್ಚಯಿಸಿಬಿಟ್ಟರು. ರಾತ್ರಿಯಲ್ಲಿ ದುಂಧುಕಾರಿಯು ಮನೆಗೆ ಬಂದಮೇಲೆ ಅವನಿಗೆ ಬೇಕಾದ ಉಪಚಾರಗಳೆಲ್ಲವನ್ನೂ ನಡೆಸಿ ಸುಖವಾಗಿ ಮಲಗಿಸಿಟ್ಟರು. ಅವನು ಗಾಢನಿದ್ರೆಯಲ್ಲಿರುವ ಸಮಯದಲ್ಲಿ ಆ ಐದು ಮಂ ದಿವೇಶೈಯರೂ ಏಕಕಾಲದಲ್ಲಿ ಅವನಮೇಲೆ ಬಿದ್ದು, ಅವನ ಬಾಯಿಗೆ ಬಟ್ಟೆ ಯನ್ನು ತುರುಕಿ, ಕೈಕಾಲುಗಳನ್ನು ಹಗ್ಗಗಳಿಂದ ಬಿಗಿದು, ಅವನ ಕೈ ರಲಿಗೆ ನೇಣನ್ನು ಬೀರಿ ಎಳೆಯುವುದಕ್ಕೆ ತೊಡಗಿದರು. ಇಷ್ಟಾದರೂ ಅವನು ಸಾಯಲಿಲ್ಲ. ಈ ಪ್ರಯತ್ನವು ವಿಫಲವಾದುದರಿಂದ ಅವರೆಲ್ಲರಿಗೂ ಭಯವು ಹುಟ್ಟಿತು. ಹೇಗಾದರ ಅವನನ್ನು ಕೊಂದುಬಿಡಬೇಕೆಂದೆ: ನಿಶ್ಚ ಯಿಸಿ, ಕೆಲವರು ಉರಿಯುವ ಕೊಳ್ಳಿಯನ್ನು ತಂದು ಅವನ ಬಾ ಯಿಗೆ ತುರುಕಿದರು. ಕೊನೆಗೆ ಇವಸು ಆ ಹಿಂಸೆಯನ್ನು ತಡೆಯಲಾರದೆ ಸತ್ಯ ನ ಸಾಹಸಿಕೆಯರಾದ ಆ ಐದುಮಂದಿ ಸೂಳೆಯರೂ ಸೇರಿ, ಆ ಸಿವೇಶನದ ಕ್ಲಿಯೇ ಒಂದು ಹಳ್ಳವನ್ನು ತೋಡಿ, ಆ ರಾತ್ರಿಯೇ ಅದರಲ್ಲಿ ಆ ಹೆಣವನ್ನು ಹೂಳಿಟ್ಟರು. ಇಷ್ಟಾದರೂ ಈ ರಹಸ್ಯವು ಆ ಊರಿನಲ್ಲಿ ಬೇರೆ ಯಾರಿ ಗೂ ತಿಳಿಯಲಿಲ್ಲ. ಯಾರಾದರೂ ಬಂದು ದುಂಧುಕಾರಿಯಲ್ಲಿರುವನೆಂದು ಕೇಳಿದಾಗ, ಆ ವೇಶೈಯರು ದ್ರವ್ಯಾರ್ಜನೆಗಾಗಿ ಎಲ್ಲಿಯೋ ದೇಶಾಂತರಕ್ಕೆ ಹೋಗಿರುವನೆಂದೂ, ಕೆಲವು ದಿನಗಳಲ್ಲಿಯೆ ಹಿಂತಿರುಗಿ ಬರಬಹುದೆಂದೂ ತಿಳಿಸುತ್ತ ಬಂದರು. ನಾರಾ ! ವೇಶ್ಯಾಸಿಯರ ಕೂಸ್ವಭಾವವನ್ನೂ, ಅವರ ಸಾಹಸವನ್ನೂ ನೋಡಿದೆಯಾ ? ಮುಖ್ಯವಾಗಿ ಲೋಕದಲ್ಲಿ ಮನು ಹೈನು ಬಲ್ಕಿಶಾಲಿಯಾಗಿದ್ದರೆ ಸ್ತ್ರೀಯರನ್ನು ಮಾತ್ರ ಎಂದೆಂದಿಗೂ ನಂಬ ಬಾರದು. ಅವರನ್ನು ನಂಬಿದವನು ಅಪಾರವಾದ ದುಃಖಕ್ಕೆ ಗುರಿಯಾಗ ದಿರಲಾರನು! ಸ್ತ್ರೀಯರು ಕಾಮುಕರನ್ನು ಕಂಡರೆ ಅವರನ್ನು ಮತ್ತಷ್ಟು ಮ ರುಳುಮಾಡುವುದಕ್ಕಾಗಿ ಮೇಲೆಮೇಲೆ ಪ್ರಿಯವಾಕ್ಯಗಳನ್ನು ನುಡಿಯುತ್ತ, ಮಾತಿನಲ್ಲಿ ಅಮೃತವನ್ನೇ ಸುರಿಸುತ್ತಿರುವರು. ಅವರ ಹೃದಯವನ್ನು ಪರೀ ಕ್ಷಿಸಿದಪಕ್ಷದಲ್ಲಿ ಅದು ಒತೀ ತೀಕ್ಷವಾದ ಕತ್ತಿಯ ಮೊನೆಯಲ್ಲದೆ ಬೇರೆಯಲ್ಲ! ಹೆಂಗಸರ ಪ್ರೇಮವೆಂಬುದು ಯಾರಲ್ಲಿಯೂ ನಿಜವಾದುದಲ್ಲ! ಈ ವಿಷಯವು ಹಾಗಿರಲಿ! ಮುಂದಿನ ವೃತ್ತಾಂತವನ್ನು ಹೇಳುವೆನು ಕೇಳು! ಆಮೇಲೆ ಆ ಐದು