ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮ ವ. ನಿನಗೆ ಇಂತಹ ಕೂರಸ್ವರೂಪವುಂಟಾಗುವುದಕ್ಕೆ ಕಾರಣವೇನು ? ನೀನು ಪ್ರೇತವೆ? ಪಿಶಾಚವೆ?ಬ್ರಹ್ಮರಾಕ್ಷಸನೆ? ನಿಜವನ್ನು ಹೇಳು”ಎಂದನು. ಈ ಮಾ ತನ್ನು ಕೇಳಿದೊಡನೆ ಆ ವ್ಯಕ್ತಿಯು ಗಟ್ಟಿಯಾಗಿ ರೋದಿಸುವುದಕ್ಕೆ ತೊಡಗಿ ತು, ಬಾಯಿಂದ ಮಾತುಗಳನ್ನಾಡಲಾರದೆ ಕೆಲವು ಸನ್ನೆಗಳನ್ನು ಮಾಡಿತು. ಇದನ್ನು ನೋಡಿ ಗೋಕರ್ಣನು ಕೈಗೆ ಸ್ವಲ್ಪ ನೀರನ್ನು ತೆಗೆದುಕೊಂಡು, ಆ ದನ್ನು ಮಂತ್ರಿಸಿ, ಆಭತದಮೇಲೆ ಪ್ರೋಕ್ಷಿಸಿದನು. ಇದರ ಪ್ರಭಾವದಿಂದ ಆ ಭೂತಕ್ಕೆ ಮಾತಾಡುವ ಶಕ್ತಿಯುಂಟಾಯಿತು. ಒಡನೆಯೇ ಆ ಭೂತವು ತನ್ನ ಪೂವೃತ್ತಾಂತವನ್ನು ಹೇಳತೊಡಗಿತು. ಗೋಕರ್ಣ ! ನಾನು ನಿನ್ನಣ್ಣನಾದ ದುಂಧುಕಾರಿಯು! ನನ್ನ ದುಷ್ಕರ್ಮಯಂದ ನನಗೆ ಈ ದು ರವಸ್ಥೆಯುಂಟಾಯಿತು. ನಾನು ನಡೆಸಿದ ಪಾಪಕೃತ್ಯಗಳನ್ನು ಅಷ್ಟಿಷ್ಮೆಂ ದು ಹೇಳಲಾರೆನು, ಜನರೆಲ್ಲರಿಗೂ ಕಂಟಕಪ್ರಾಯನಾಗಿದ್ದೆವು. ಕೊನೆಗೆ ನಾ ನು ನಂಬಿದ ಸ್ತ್ರೀಯರಿಂದಲೇ ನನಗೆ ಈ ಮರಣವುಂಟಾಯಿತು. ಈ ಪ್ರೇತ ರೂಪದಿಂದ ಗಾಳಿಯನ್ನು ಕುಡಿದು ಜೀವಿಸುತ್ತಿರುವೆನು. ಎಲೈ ಕೃಪಾ ಸಮುದ್ರನೆ ! ನೀನು ಈ ಸೆರೆಯಿಂದ ನನ್ನನ್ನು ಬಿಡಿಸಿ ಉದ್ಧರಿಸಬೇಕು ” ಎಂದಿತು. ಇದನ್ನು ಕೇಳಿ ಗೋಕರ್ಣನು ( ಆಹಾ ! ಇದೇನಾರವು ? ಸಿನ ಗಾಗಿ ನಾನು ಶಾಸೋಹವಾಗಿ ಗಯಾಶ್ರಾವ್ಯವನ್ನು ನಡೆಸಿಬಂದೆನು. ಆದರಿಂದಲೂ ನಿನಗೆ ಏಮೋಚನವಾಗಲಿಲ್ಲವೆ ? ಗಯಾಶ್ರಾದ್ದರಿಂದಲೇ ಮಕ್ಕಿದಮೇಲೆ ನನಗೆ ಬೇರೆ ಯಾವ ಉಪಾಯವೂ ತೋರಲಿಲ್ಲವು. ಎಲೈ ಪ್ರೇತವೆ ! ಮುಂದೆ ಇದಕ್ಕಾಗಿ ಮಾಡಬೇಕಾದ ಕಾವ್ಯವನ್ನು ನೀನೇ. ತಿಳಿಸಬೇಕು” ಎಂದನು. ಅದ ಕ್ಯಾಪ್ರೇತವು “ಗೋಕರ್ಣಾ ! ಇಂತಹ ಗ ಯಾಶ್ರದ್ಧವು ಒಂದು ಮಾತ್ರವಲ್ಲ ಅ೦ತಹ ನೂರುಶ್ರಾದ್ಯಗಳನ್ನು ಮಾಡಿ ದರೂ ನನ್ನ ಪಾಪವು ವಿಮೋಚನಹೊಂದುವಹಾಗಿಲ್ಲ.ನನ್ನ ಜನ್ಮಾವಧಿ ನಾನು ಅಷ್ಟೊಂದು ಕ್ರೂರಕರ್ಮಗಳನ್ನು ನಡೆಸಿರುವೆನು ! ಇದಕ್ಕಾಗಿ ನೀನು ಯಾವುದಾದರೂ ಬೇರೆ ಉಪಾಯವನ್ನು ಯೋಚಿಸಬೇಕು” ಎಂದಿತು. ಈ ಮಾತನ್ನು ಕೇಳಿ ಗೋಕರ್ಣನು ವಿಸ್ಮಿತನಾಗಿ 'ಎಲೆ ಭೂತವೆ ! ಹಾಗಿದ್ದ ಮೇಲೆ, ಆ ಕಾರವು ಈಗ ನನ್ನಿಂದ ಸಾಧ್ಯವಲ್ಲ! ಆದರೂ ಚಿಂತೆಯಿಲ್ಲ! ನೀನು