ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೭ ಶ್ರೀಮದ್ಭಾಗವತ ಮಾಹಾತ್ಮವು. ಆ ದೊಡ್ಡಬಿದಿರುಮಳೆಯಿಂದ ಮಹಾಧ್ವನಿಯೊಂದು ಹೂರಟಿತು ! ಜನರೆಲ್ಲ ರೂ ಆಶ್ಚರದಿಂದ ನೋಡುತಿದ್ದ ಹಾಗೆಯೇ ಆ ಮೆಳೆಯನಡುವೆ ಏಳುಗಿಣ್ಣು ಗಳುಳ್ಳ ಒಂದು ಬಿದಿರಿನಲ್ಲಿ, ಕೆಳಗಿನ ಗಿಣ್ಣು ಥಟ್ಟನೆ ಸೀಳಿಹೋಯಿತು.ನಿಜಸ್ಥಿ ತಿಯೇನೆಂದು ಯಾರಿಗೂ ತಿಳಿಯಲಿಲ್ಲ ! ಹಾಗೆಯೇ ಮರುದಿನವೂ ಗೋ ಕರ್ಣನು ಮುಂದಿನ ಕಥೆಯನ್ನಾರಂಭಿಸಿದನು. ಸಾಯಂಕಾಲದಲ್ಲಿ ಆ ದಿನದ ಕಥೆಯನ್ನು ಮುಗಿಸುತ್ತಿರುವಾಗ ಮತ್ತೊಂದು ಗಿಣ್ಣು ಭಿನ್ನ ವಾಯಿ ತು ಮೂರನೆಯ ದಿನದಲ್ಲಿಯೂ ಹಾಗೆಯೇ ಮೂರನೆಯ ಗಿಣ್ಣು ಭೇಟಸಿತು. ಹೀಗೆ ಏಳು ದಿನಗಳೊಳಗಾಗಿ ಆ ಬಿದಿರಿನಲ್ಲಿದ್ದ ಏಳು ಗಿಣ್ಣು ಗಳೂ ಒಂದೊಂದಾಗಿ ಒಡೆಯುತ್ತ ಬಂದುವು. ಈ ಏಳುದಿನಗಳೊಳಗಾಗಿ ಗೋಕರ್ಣನು ಶ್ರೀಭಾಗವತದ ಹನ್ನೆ ರಡುಸ್ಕಂಧಗಳನ್ನೂ ಮುಗಿಸಿದನು ಈ ಕಥೆಯು ಮುಗಿಯುವಷ್ಟರಲ್ಲಿ ಆ ಬಿದಿರಿನಲ್ಲಿ ಗಾಳಿಯ ರೂಪದಿಂದ ಸೇರಿಕೊಂಡಿದ್ದ ದುಂಧುಕಾರಿಗೆ, ಪಿಶಾಚಜನ್ಮವು ಬಿಟ್ಟು ಹೋಗಿ, ಒಡ ನೆಯೇ ಅವನಿಗೆ ಒಂದು ದಿವ್ಯವಾದ ರೂಪವುಂಟಾಯಿತು. ಕೊರಲಿನಲ್ಲಿ ತುಲಸೀಮಾಲಿಕೆಯನ್ನೂ , ನಡುವಿನ ಪೀತಾಂಬರವನ್ನೂ ಧರಿಸಿ, ಮೇಘ ದಂತೆ ಶ್ಯಾಮಲವಾದ ದೇಹಕಾಂತಿಯಿಂದಲ, ಕಿರೀಟಕುಂಡಲಾದಿಗ ಳಿಂದಲೂ ಅಲಂಕೃತವಾದ ಒಂದು ದಿವ್ಯಾಕೃತಿಯು ಆ ಬಿದಿರುಮಳೆಯಿಂ ದ ಹೊರಗೆ ಬಂದು,ಗೋಕರ್ಣನಿಗೆ ನಮಸ್ಕರಿಸಿ, “ಎಲೆ ಮಹಾತ್ಮನೆ; ನಿನ್ನ ಕೃಪಾಬಲದಿಂದ ನನಗೆ ಪಿಶಾಚಜನ್ಮವು ನಿವೃತ್ತವಾಯಿತು ! ಲೋಕ ದಲ್ಲಿ ಭಾಗವತವೊಂದೇ ಪರಮಧನ್ಯವಾದುದು! ಸಮಸ್ತ ಪಾಪಗಳನ್ನೂ ನೀಗಿ ಸತಕ್ಕುದು, ಪಿಶಾಚಾ ಕರಜಗಳನ್ನೂ ವಿಮೋಚನಮಾಡುವುದು. ಅದರಲ್ಲಿಯೂ ಸಾಹಶ್ರವಣವೆಂಬ ವಿಧಿಗೆ ಸಮಾನವಾದ ಧರವು ಬೇ ರೊಂದಿಲ್ಲ! ಇದೇ ಮುಕ್ತಿಗೆ ಸರ್ವೋತ್ತಮವಾದ ಸಾಧನವು. ಇದಕ್ಕೆ ಸಮ ಸಪಾಪಗಳೂ ನಡುಗುವುವು! ಎಂತಹ ಕ್ರೂರಪಾತಕವಾದರೂ ಅಗ್ನಿಯಲ್ಲಿ ಹಾಕಿದ ಸಮಿತ್ತುಗಳಂತೆ ಇದರಿಂಜೆ ಕ್ಷಣಮಾತ್ರದಲ್ಲಿ ದಗ್ಧವಾಗುವುದು. ಈ ಕಾಲದಲ್ಲಿ, ಈ ಲೋಕದಲ್ಲಿ, ಒಂದಾವರ್ತಿಯಾದರೂ ಈ ಭಾಗವತಕಥೆಯ ನ್ನು ಕೇಳದವರ ಜನ್ಮವು ನಿರರ್ಥಕವು. ಕೇವಲನಶ್ವರವಾದ ಈ ಮನುಷ್ಯ