ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೪ ಶ್ರೀಮದ್ಭಾಗವತಮಾಹಾತ್ಮವು. ದೇಹವು ಈ ಲೋಕದಲ್ಲಿರುವುದರೊಳಗಾಗಿ, ಶುಕಶಾಸ್ವರೂಪವಾದ ಈ ಭಗವತ್ಕಥೆಯನ್ನು ಕೇಳದಮೇಲೆ, ಆ ದೇಹವನ್ನು ಹೊತ್ತು ಫಲವೇನು ? ಈ ದೇಹವೆಂಬುದು ಮಲಮೂತ್ರಗಳೆಂಬ ದುರ್ಗಂಧವಸ್ತುಗಳನ್ನು ತುಂಬುವು ದಕ್ಕಾಗಿ, ಎಲುಬುಗಳೆಂಬ ಸ್ತಂಭಗಳನ್ನು ನಿಲ್ಲಿಸಿ, ನರಗಳೆಂಬ ಹಗ್ಗಗಳಿಂದ ಬಿಗಿದು, ರಕ್ತಮಾಂಸಗಳಿಂದ ಮೆತ್ತನೆಯನ್ನು ಹಾಕಿ, ಚರ್ಮದಿಂದ ಮುಚ್ಚಿ ಮಾಡಿದ ಒಂದು ಸಣ್ಣ ಮನೆಯೇ ಹೊರತು ಬೇರೆಯಲ್ಲ : ಜರಾರೋಗಗಳೇ ಮುಂತಾದ ಸಮಸ್ತದುಃಖಗಳಿಗೂ ಈಡಾಗಿ, ಎಷ್ಟೆಷ್ಟು ತುಂಬಿದರೂ ತುಂಬ ದೆ, ಕ್ಷಣಕ್ಷಣಕ್ಕೂ ಕೊಳೆಯಿಂದ ಮಾತ್ರ ತುಂಬುತ್ತಿರುವ ಈ ಶರೀರವೆಂಬು ದು, ಈಗಲೋ, ನಾಳೆಯೋ ಬಿದ್ದು ಹೋಗತಕ್ಕುದಲ್ಲದೆ ಸ್ಥಿರವಾದುದಲ್ಲ. ತತ್ವಜ್ಞಾನಿಗಳು ಈ ದೇಹವೆಂಬುದಕ್ಕೆ ಕ್ರಿಮಿಗಳೆಂದೂ, ಕಲವೆಂದೂ, ನಿಸಾರವಾದ ಬೂದಿಯೆಂದೂ ನಾಮಾಂತರವನ್ನಿಟ್ಟಿರುವರು. ಹಗಲಲ್ಲಿ ಚೆ ನ್ಯಾಗಿ ಸಂಸ್ಕರಿಸಿ ಪಕ್ಷ ಮಾಡಿದ ಅನ್ನ ವು, ರಾತ್ರಿಯಹೊತ್ತಿಗೆ ಹಳಸಿಹೋ ಗುವುದಲ್ಲವೆ? ಅಂತಹ ಅನ್ನ ರಸದಿಂದ ಪೋಷಿತವಾದ ಈ ದೇಹವು ಎಷ್ಟು ದಿನ ಗಳವರೆಗೆ ನಿಲ್ಲಬಹುದು?ಎಲೈಮಹಾತ್ಮನೆ! ಸಾಹಶ್ರವಣದಿಂದ ಶ್ರೀಕೃಷ್ಣ ನನ್ನು ಕರೆತಂದುಕಣ್ಣ ಮುಂದೆ ನಿಲ್ಲಿಸಬಹದು. ಈ ಕಾಲದಲ್ಲಿ ದೋಷನಿವೃತ್ತಿ ಗೆ ಇದೊಂದೇ ಮಾರ್ಗವು ನೀರಿನಲ್ಲಿ ಗುಳ್ಳೆಗಳಂತೆಯೂ,ಕಶ್ಯಲದಲ್ಲಿ ಕ್ರಿಮಿಗ ಳಂತೆಯೂ, ಮನುಷ್ಯರುಸಾಯವುದಕ್ಕಾಗಿಯೇ ಈಲೋಕದಲ್ಲಿ ಹುಟ್ಟುವರು, ಇಂತಹ ಸ್ಥಿತಿಯಲ್ಲಿಯೂ ಈ ಕಥಾಶ್ರವಣವನ್ನು ಮಾಡದರೆ ಫಲವೇನು? ಈ ಕಥಾಶ್ರವಣದಿಂದ ಕೇವಲಜಡವಾಗಿ ಒಣಗಿದ ಕಟ್ಟಿಗೆಯಕೂಡ ಭಿನ್ನವಾಗಿ, ಅದರ ಗ್ರಂಥಿಯು ಭೇಟಸಿತಲ್ಲವೆ? ಇನ್ನು ಇದರಿಂದ ಅತಿಸೂಕ್ಷ್ಮ ವಾದ ಮನಸ್ಸಿನ ಗ್ರಂಥಿಯು ಬಿಟ್ಟು ಹೋಗುವುದರಲ್ಲಿ ಸಂದೇಹವೇನಿದೆ ? ಸಪ್ತಾಹಶ್ರವಣವನ್ನು ಮಾಡಿದಪಕ್ಷದಲ್ಲಿ, ಮನಸ್ಸಿನ ಅಜ್ಞಾನವೆಂಬ ಗ್ರಂಥಿಯು ಭಿನ್ನ ವಾಗುವುದರೊಡನೆ, ಸಮಸ್ತಸಂದೇಹಗಳೂ ನೀಗಿಹೋ ಗುವುವು. ಕರ್ಮಗಳೆಲ್ಲವೂ ನಾಶಹೊಂದುವುವು. ಮುಕ್ತಿಯು ಕರಗತವಾಗು ವುದು” ಎಂದನು. ಇಷ್ಟರಲ್ಲಿಯೇ ಅತ್ಯಂತತೇಜೋವಿಶಿಷ್ಟವಾದ ಒಂದು ದಿವ್ಯವಿಮಾನವು, ಅನೇಕ ವಿಷ್ಟು ದೂತರೊಡನೆ ಆಕಾಶದಿಂದಿಳಿಯಿತು.