ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು, ಇತ್ತಲಾಗಿ ಗೋಕರ್ಣನು ತಿರುಗಿ ಶ್ರಾವಣ ಮಾಸದಲ್ಲಿ ಸಪ್ತಾಹವಿಧಿ ಯಿಂದ ಕಥೆಯನ್ನಾರಂಭಿಸಿದನು. ಅದನ್ನು ಪೂರಯಿಸಿದಕ್ಷಣವೇ ಮೊದಲಿ ಗಿಂತಲೂ ಅತಿಶಯವಾದ ಮತ್ತೊಂದಾಶ್ಚಠ್ಯವು ನಡೆಯಿತು ! ಸಾಕ್ಷಾನ್ಮಹಾ ವಿಷ್ಣುವೇ ತನ್ನ ಭಕ್ತರೊಡನೆ ವಿಮಾನಾರೂಢನಾಗಿ ಕೆಳಗಿಳಿದು ಬಂದು,ಸ ಭಾಮಧ್ಯದಲ್ಲಿ ನಿಂತನು. ಈ ದಿವ್ಯಸ್ವರೂಪವನ್ನು ಕಂಡೊಡನೆ ಅಲ್ಲಿದ್ದವ ರೆಲ್ಲರೂ ಸಂಭ್ರಮದಿಂದ ಮೇಲೆದ್ದು ನಿಂತು, ಆತ್ಮಾನಂದಪರವಶರಾಗಿ ಸೊ ಮಾಡತೊಡಗಿದರು. ನಾನಾಕಡೆಗಳಿಂದಲೂ, ಜಯಶಬ್ಬಗಳೂ, ನಮಶ್ರ ಬಗಳೂ ಹೊರಡುತ್ತಿದ್ದುವು. ಇವರ ಮಹೋತ್ಸಾಹವನ್ನು ನೋಡಿ ಭಗವಂ ತನು ತಾನಾಗಿಯೇ ತನ್ನ ಪಾಂಚಜನ್ಯದಿಂದ ಶಂಖಧ್ವನಿಯನ್ನು ಮಾಡು ತ, ಗೋಕರ್ಣನಬಳಿಗೆ ಬಂದು, ತನ್ನ ನಾಲ್ಕುತೋಳುಗಳಿಂದಲೂ ಆ ವನನ್ನು ಬಿಗಿದಪ್ಪಿ, ತನ್ನೊಡನೆ ಸಮಾನಭಾವವನ್ನು ತೋರಿಸಿದನು. ಅಲ್ಲಿ ಕ ಥಾಶ್ರವಣಮಾಡುತಿದ್ದವರೆಲ್ಲರಿಗೂ ತನ್ನ ಸಂಕಲ್ಪದಿಂದ ಸಾರಥ್ಯವನ್ನೂ ಕೊಟ್ಟನು. ಆ ಗ್ರಾಮದಲ್ಲಿದ್ದ ಸಮಸ್ತಪ್ರಾಣಿಗಳನ್ನೂ ಕರೆತಂದು ವಿಮಾನದಲ್ಲೇರಿಸಿ, ಪರಮಯೋಗಿಗಳಿಗೂ ದುಭವಾದ ವಿಷ್ಣುಲೋ ಕಕ್ಕೆ ಕಳುಹಿಸಿಬಿಟ್ಟನು. ಪರಮಭಕ್ತನಾದ ಆ ಗೋಕರ್ಣನನ್ನು ಮಾತ್ರ ತನ್ನೊಡನೆಯೇ ಕರೆದುಕೊಂಡು ಸಂತೋಷದಿಂw ತನ್ನ ಗೊಲೋಕಕ್ಕೆ ಬಂದು ಸೇರಿದನು. ಪೂರ್ವದಲ್ಲಿ ರಾಮನಿಂದ ಆಯೋಧ್ಯಾವಾಸಿಗಳೆಲ್ಲರಿಗೂ ಯೋಗಿಸುರಭವಾದ ಉತ್ತಮಲೋಕವು ಲಭಿಸಿದಂತೆ, ಈಗಲೂ ಶ್ರೀಕೃಷ್ಣ ಕೃಪೆಯಿಂದ ಅಲ್ಲಿನ ನಿವಾಸಿಗಳೆಲ್ಲರಿಗೂ, ಸೂರಚಂದ್ರರಿಗೂ, ಸಿದ್ಧರಿಗೂ, ಪ್ರವೇಶಿಸಲಸಾಧ್ಯವಾದ ಉತ್ತಮಲೋಕವು ಲಭಿಸಿತು. ನಾರದಾ! ಇದೀಗ ಶ್ರೀಭಾಗವತಕಥಾಮಹಿಮೆಗೆ ನಿದರ್ಶನವಾದ ಇತಿಹಾಸವು ಚಿತ್ರಕೂಟ ದಲ್ಲಿರುವ ಶಾಂಡಿಲ್ಯಮಹಾಮುನಿಯಕೂಡ ಅತಿಪವಿತ್ರವಾದ ಈ ಇತಿ ಹಾಸವನ್ನು ಆಗಾಗ ಅನುಸಂಧಾನ ಮಾಡುತ್ತಿರುವನು, ಈ ಇತಿಹಾಸವನ್ನು ಒಂದಾವರ್ತಿ ಕೇಳಿದಮಾತ್ರಕ್ಕೆ, ಪಾಪಗಳೆಲ್ಲವೂ ನೀಗುವುವು. ಶ್ರಾದ್ಧ ಕಾಲದಲ್ಲಿ ಇದನ್ನು ಪಠಿಸುವುದರಿಂದ ಪಿತೃದೇವತೆಗಳು ತೃಪ್ತಿ ಹೊಂದುವರು. ಪ್ರತಿದಿನವೂ ಪಾರಾಯಣಮಾಡುವುದರಿಂದ ಪುನರ್ಜನ್ಮವನ್ನು ನೀಗಿಸಿ ಮು