ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩ ಶ್ರೀಮದ್ಭಾಗವತಮಾಹಾತ್ಮವು. ಕಿಯನ್ನು ಕೈಗೂಡಿಸುವುದು” ಎಂದರು. ಹೀಗೆ ಸನಕಾದಿಗಳು ನಾರದನಿಗೆ ಭಾಗವತದ ಮಹಿಮೆಯನ್ನೂ , ಅದಕ್ಕೆ ನಿದರ್ಶಕವಾದ ಇತಿಹಾಸವನ್ನೂ ಹೇಳಿ ದಮೇಲೆ,ಸಪ್ತಾಹಶ್ರವಣವನ್ನು ನಡೆಸತಕ್ಕ ಕ್ರಮಗಳನ್ನೂ ,ಅದಕ್ಕೆ ಬೇಕಾದ ಸಹಾಯದ್ರವ್ಯಸಾಮಗ್ರಿಗಳನ್ನೂ , ಈ ಧರ್ಮವನ್ನು ನಡೆಸತಕ್ಕ ಕಾಲದಲ್ಲಿ ಆ ನುಸರಿಸಬೇಕಾದ ವ್ರತೋಪವಾಸಾದಿನಿಯಮಗಳನ್ನೂ ಕ್ರಮವಾಗಿ ವಿವರಿ ಸಿದರು. ಭಾಗವತಪಾರಾಯಣವನ್ನು ಮುಗಿಸಿದಮೇಲೆ ಶಾಂತ್ಯರ್ಥವಾಗಿ ನಡೆಸಬೇಕಾದಬ್ರಾಹ್ಮಣಭೋಜನ ದಾನಾದಿಧರ್ಮಗಳನ್ನೂ ವಿವರಿಸಿದರು. ಅದರಿಂದಾಚೆಗೆ ತಾವೂಸಪ್ತಾಹಕ್ರಮದಿಂದಲೇ ನಾರದನಿಗೂ, ಅಲ್ಲಿದ್ದ ಇತ ರಜನರಿಗೂ ಭಾಗವತಕಥೆಯನ್ನು ಆಮೂಲಾಗ್ರವಾಗಿ ವಿಸ್ತರಿಸಿ ಹೇಳಿದ ರು. ಏಳುದಿನಗಳವರೆಗೆ ಎಲ್ಲರೂ ನಿಯಮವನ್ನು ಹಿಡಿದು ಭಾಗವತಕಥೆಯನ್ನು ಕೇಳಿಮುಗಿಸಿದಮೇಲೆ, ಶಾಸೋಕ್ತವಾಗಿ ಭಗವಂತನನ್ನು ಸ್ತೋತ್ರಮಾಡು ತಿದ್ದರು. ಭಕ್ತಿಜ್ಞಾನವೈರಾಗ್ಯಗಳಿಗೆ ಹೊಸಯೌವನವುಂಟಾಯಿತು. ನಾ ರದನ ತಾನು ಬಹುಕಾಲದಿಂದ ಪ್ರಯತ್ನಿಸುತ್ತಿದ್ದ ಕಾಠ್ಯವು ಕೈಗೂಡಿದು ದರಿಂದ ಕೃತಾರ್ಥನಾದನು. ಆತನ ಸರ್ವಾಂಗಗಳೂ ಸಂತೋಷದಿಂದ ಪುಳ ಕಿತವಾದುವು. ಹೀಗೆ ಪರಮಾನಂದಭರಿತನಾದ ನಾರದನು, ಸನಕಾಡಿಗಳ ಮುಂದೆ ಕೈಮುಗಿದು ನಿಂತು, ಸಂತೋಷದಿಂದ ಕುಗ್ಗಿದ ಕಂಠಸ್ವರವುಳ್ಳವ ನಾಗಿ ವಿಜ್ಞಾಪಿಸುವನು (ಎಲೈ ಮಹಾತ್ಮರೆ! ಪರಮದಯಾಳುಗಳಾದ ನಿ ಮ್ಮ ಅನುಗ್ರಹದಿಂದ ನಾನು ಧನ್ಯನಾದೆನು!ನಿಮ್ಮ ಕೃಪಾಬಲದಿಂದ ಈಗ ನಾನು ಆ ಶ್ರೀಮನ್ನಾರಾಯಣನನ್ನೇ ನನ್ನಲ್ಲಿ ಕರೆದಿಟ್ಟು ಕೊಂಡಂತಾಯಿತು. ವೈಕುಂಠವಾಸಿಯಾದ ಮಹಾವಿಷ್ಣುವು, ಈ ಕಥಾಶ್ರವಣಮಾತ್ರದಿಂದ ತಾ ನಾಗಿಯೇ ಬಂದು ಕಣ್ಣುಮುಂದೆಸಿಲ್ಲುವಾಗ,ಇದಕ್ಕಿಂತಲೂ ಬೇರೆ ಧರ್ಮ ವಾವುದುಂಟು?” ಎಂದು ಬದ್ಧಾಂಜಲಿಯಾಗಿ ಸ್ತುತಿಸುತ್ತಿದ್ದನು. ಇಷ್ಟರ ಬ್ಲಿಯೇ ಮಹಾಜ್ಞಾನಿಯಾಗಿಯೂ, ವ್ಯಾಸಪುತ್ರನಾಗಿಯೂ ಇದ್ದ ಶುಕಮ ಹಾಮುನಿಯು ಗಂಭೀರಧ್ವನಿಯಿಂದ ಭಾಗವತಶ್ಲೋಕಗಳನ್ನು ಪಠಿಸುತ್ತ ಮೆಲ್ಲಗೆ ಬಂದು ಸಭಾಮಧ್ಯದಲ್ಲಿ ನಿಂತನು. ದಿವ್ಯ ತೇಜಸ್ಸಿನಿಂದ ಬೆಳಗುವ ಹ ದಿನಾರುವಯಸ್ಸಿನ ಕುಮಾರನಾದ ಈ ಶುಕಮುನಿಯನ್ನು ಕಂಡೊಡನೆ