ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು. ಎಲ್ಲರೂ ಥಟ್ಟನೆ ಪ್ರತ್ಯುತ್ಯಾನಮಾಡಿ ಅವನಿಗೆ ಪೀಠವನ್ನು ಕೊಟ್ಟು ಕುಳ್ಳಿರಿ ಸಿದರು. ನಾರದನೂ ಮುಂದೆ ಬಂದು ಯಥಾವಿಧಿಯಾಗಿ ಅವನನ್ನು ಪೂಜೆ ಸಿದನು. ಹೀಗೆ ಸುಖಾಸೀನನಾದ ಕುಕನು ಮುಂದಿದ್ದವರೆಲ್ಲರನ್ನೂ ನೋಡಿ ('ಎಲೈ ರಸಜ್ಞರೆ.! ವಿಷ್ಣುಭಕ್ತರಾದ ನೀವೆಲ್ಲರೂ, ವೇದಗಳೆಂಬ ಕಲ್ಪವೃ ಕ್ಷಗಳಿಂದ ಗಿಳಿಕಚ್ಚಿಬಿದ್ದ ಹಣ್ಣಿನಂತೆ, ಶುಕಮುಖದಿಂದ ಹೊರಟು, ರಸ ಪೂರ್ಣವಾಗಿರುವ ಈ ಭಾಗವತವೆಂಬ ಪುರಾಣವನ್ನು ಮರಣಕಾಲದವರೆಗೂ ಬಿಡದೆ ಅನುಸಂಧಾನಮಾಡುತ್ತ, ಅದರ ರಸವನ್ನು ಪಾನಮಾಡಿರಿ! ಈಗ್ರಂ ಧದಲ್ಲಿ ನಿರ್ದುಷ್ಟವಾದ ಈಶ್ವರಾರಾಧನರೂಪಧರ್ಮವು ಉಪದೇಶಿಸಲ್ಪಡು ವುದು. ಕರ್ಮಕಾಂಡದಲ್ಲಿ ಸ್ತುತಿಸಲ್ಪಟ್ಟ ಅಗ್ನಿ೦ದ್ರಾದಿದೇವತೆಗಳಂತಲ್ಲದೆ, ನಿತ್ಯವಾಗಿಯೂ ಅಪರಿಮಿತಫಲದಾಯಕವಾಗಿಯೂ ಇರುವ ವಿಷಯವೇ ಇ ದರಿಂದ ಬೋಧಿಸಲ್ಪಡುವುದು! ಇತರ ಧರ್ಮಗಳಿಂದೇನೂ ಫಲವಿಲ್ಲವು. ಈ ಭಾಗವತವನ್ನು ಕೇಳತಕ್ಕವರ ಹೃದಯದಲ್ಲಿ ಶ್ರೀಮನ್ನಾರಾಯಣನು ನಿತ್ಯ ವಾಸವನ್ನು ಮಾಡುವನು. ಸಮಸ್ತಪುರಾಣಗಳಿಗೂ ತಿಲಕಪ್ರಾಯವಾಗಿ, ವಿಷ್ಣು ಭಕ್ತರಿಗೆ ಧನರೂಪವಾಗಿ, ಉತ್ತಮಜ್ಞಾನಬೋಧಕವಾದ ಈ ಗ್ರಂ ಥಪಠನದಿಂದ ಚೇತನಸಿಗೆ ಮುಕ್ತಿಯು ಕರಗತವಾಗುವುದು. ಸ್ವರ್ಗದಲ್ಲಿ ಯಾಗಲಿ, ಸತ್ಯಲೋಕದಲ್ಲಿಯಾಗಲಿ, ಕೈಲಾಸದಲ್ಲಿ ಯಾಗಲಿ, ವೈಕುಂಠದಲ್ಲಿ ಯಾಗಲಿ, ಈ ಕಥಾಮೃತವೆಂಬ ರಸವು ಲಭಿಸಲಾರದು. ಆದುದರಿಂದ ಎಂ ದೆಂದಿಗೂ ನೀವು ಇದನ್ನೇ ಅನುಸಂಧಾನಮಾಡುತ್ತಿರಬೇಕು” ಎಂದನು. ಶುಕಮುನಿಯ ಈ ಮಾತನ್ನು ಹೇಳುತ್ತಿರುವಾಗಲೇ ಶ್ರೀಮನ್ನಾರಾಯಣ ನು ಪ್ರಹ್ಲಾದ, ಬಲಿ, ಉದ್ಧವ ಅರ್ಜುನನೇ ಮೊದಲಾದ ತನ್ನ ಭಕ್ತರಿಂದ ಪರಿವೃತನಾಗಿ ಸಭಾಮಧ್ಯದಲ್ಲಿ ಬಂದು ನಿಂತನು. ನಾರದನು ಯಥೋಚಿತ ವಾಗಿ ಆ ಭಗವಂತನನ್ನು ಪೂಜಿಸಿ, ದಿವ್ಯಾಸನವನ್ನು ಕೊಟ್ಟು ಕುಳ್ಳಿರಿಸಿದ ನು. ಒಡನೆಯೇ ಎಲ್ಲರೂ ಸೇರಿ ಹರಿಕೀರ್ತನವನ್ನಾರಂಭಿಸಿದರು. ಈ ಕೀ ರ್ತನವನ್ನು ಕೇಳುವುದಕ್ಕಾಗಿ ಬ್ರಹ್ಮ ರುದ್ರರಿಬ್ಬರೂ ತಮ್ಮ ಪತ್ನಿಯರೊಡನೆ ಬಂದು ಸೇರಿದರು. ಪ್ರಹ್ಲಾದನು ಕೈತಾಳವನ್ನು ಹಾಕುವುದಕ್ಕೆ ತೊಡಗಿದನು. ಉದ್ಧವನು ಕಂಚಿನ ತಾಳವನ್ನು ನುಡಿಸುತ್ತಿದ್ದನು. ನಾರದನು ವೀಣಾಗಾನ