ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು. ವನ್ನು ಮಾಡಿದನು. ಅರ್ಜುನನು ರಾಗಗಳನ್ನಾ ಲಾಪಿಸುವುದಕ್ಕೆ ತೊಡಗಿದ ನು. ದೇವೇಂದ್ರನು ಮೃದಂಗವನ್ನು ಹಿಡಿದನು. ಸನಕಾದಿಗಳು ನಡುನಡು ವೆ ಜಯಶಬ್ದಗಳನ್ನು ಹೇಳುತ್ತಿದ್ದರು. ವ್ಯಾಸಪುತ್ರನಾದ ಶುಕಮು, ಸೂತ್ರ ಧಾರಿಯಂತೆ ರಸಭಾವಗಳನ್ನು ತೋರಿಸುತ್ತಿದ್ದನು. ಇವರೆಲ್ಲರನಡುವೆ ಭಕ್ತಿ ಜ್ಞಾನವೈರಾಗ್ಯಗಳೆಂಬ ಆ ಮೂವರೂ ನರ್ತನವನ್ನು ಮಾಡತೊಡಗಿದರು ಈ ಕೀರ್ತನೆಯು ಮುಗಿದಮೇಲೆ ಭಕ್ತವತ್ಸಲನಾದ ಶ್ರೀಮನ್ನಾರಾಯಣನು ಎಲ್ಲರನ್ನೂ ಪ್ರಸನ್ನ ದೃಷ್ಟಿಯಿಂದ ನೋಡುತ್ತ, “ಎಲೆಭಕ್ಕಾಗ್ರಣಿಗಳೇ ! ನಿಮ್ಮ ಕಿರ್ತನಗಳಿಂದ ನಾನು ಪ್ರೀತನಾದೆನು!ಬೇಕಾದ ವರಗಳನ್ನು ಕೇಳಿರಿ ನಿಮ್ಮ ಕೋರಿಕೆಯನ್ನು ನಡೆಸಿಕೊಡುವೆನು”ಎಂದನು. ಆಗ ಅವರೆಲ್ಲರೂ ಬದ್ಧಾಂಜಲಿಗಳಾಗಿ ನಿಂತು, ಮಹಾಪ್ರಭೋ ! ಈಗ ನಾವು ನಿನ್ನಿಂದಪೇ ಕ್ಷಿಸಬೇಕಾದ ಅನುಗ್ರಹವು ಬೇರೆ ಯಾವುದೂ ಇಲ್ಲವು. ಈ ಕಲಿಕಾಲದಲ್ಲಿ ಸಪ್ತಾಹಶ್ರವಣವನ್ನು ಮಾಡತಕ್ಕವರ ಹೃದಯದಲ್ಲಿ ನೀನು ನಿತ್ಯಸಾನ್ನಿಧ್ಯ ವನ್ನು ಮಾಡಬೇಕು. ಈ ಮನೋರಥವನ್ನು ಮಾತ್ರ ಈಡೇರಿಸಿಕೊಟ್ಟರೆ ಸಾಕು” ಎಂದರು. ಆಗ ಭಗವಂತನು ತಥಾಸ್ತು” ಎಂದು ಹೇಳಿ ಅಂತ ರ್ಧಾನವನ್ನು ಹೊಂದಿದನು. ಆಮೇಲೆ ನಾರದನು ಸನಕಸನಂದನಾದಿ ಋಷಿಕುಮಾರನ್ನೂ, ಶುಕಾದಿಮುನಿಗಳನ್ನೂ ನಮಸ್ಕರಿಸಿ ಯಥೋಚಿತವಾಗಿ ಸತ್ಕರಿಸಿ ಕಳುಹಿಸಿಕೊಟ್ಟನು.” ಸೂತಪೌರಾಣಿಕನು ಶವಕಮುನಿಗೆ ಈ ಚರಿತ್ರವನ್ನು ತಿಳಿಸಿದಮೇಲೆ, ತಿರುಗಿ ಶಾವಕನು, 'ಎಲೈ ಸೂತನೆ ! ಮೊದಲು ಈ ಭಾಗವತವನ್ನು ಶುಕಮುನಿಯು ಪರಿಕ್ಷಿದ್ರಾಜನಿಗೆ ಉಪದೇಶಿಸಿದ ಕಾಲವಾವುದು ? ಆಮೇಲೆ ಗೋಕರ್ಣನು ಯಾವಾಗ ಇದನ್ನು ಅನುಸಂಧಾನಮಾಡಿದನು ? ಅದರಿಂ ದಾಚೆಗೆ ಸನಕಾದಿಗಳು ಇದನ್ನು ನಾರದನಿಗೆ ಉಪದೇಶಿಸಿದ ಕಾಲವಾವುದು? ಈ ಸಂದೇಹವನ್ನು ಪರಿಹರಿಸಬೇಕು” ಎಂದು ಕೇಳಿದನು. ಅದಕ್ಕಾ ಸೂ ತನು ಶೌನಕಾ ಕೇಳು ! ಕೃಷ್ಣನಿರಾಣವಾಗಿ ಈ ಕಲಿಯುಗದಲ್ಲಿ ಮೂವ ತ್ತು ವರುಷಗಳು ಕಳೆದಮೇಲೆ, ಭಾದ್ರಪದಮಾಸದ ನವಮೀತಿಥಿಯಲ್ಲಿ ಶು ಕನು ಈ ಕಥೆಯನ್ನು ಪರಿಕ್ಷಿದ್ರಾಜನಿಗೆ ಉಪದೇಶಿಸಿದರು. ಅದರಿಂದಾಚೆಗೆ