ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅವತಾರಿಕೆ, ವೆಂದು ಪ್ರಸಿದ್ಧಿಗೊಂಡ ಶ್ರೀಮಹಾಭಾರತವೆಂಬ ಇತಿಹಾಸವನ್ನು ರಚಿಸಿ, ಅದರಲ್ಲಿ ಪ್ರಾಯಕವಾಗಿ ಪೂರೈಭಾಗಾರಗಳನ್ನೇ ವಿಶೇಷವಾಗಿ ವಿವರಿಸಿದನು. ಅದರಂತೆ ಉತ್ತರಭಾಗಾ ರ್ಥವನ್ನೂ ಏಶೇಷಿಸಿ ತೋರಿಸುವುದಕ್ಕಾಗಿ ವೇ ದಾಂತೋಪಬೃಂಹಣವಾದ ಈ ಭಾಗವತವೆಂಬ ಪುರಾಣವನ್ನು ರಚಿಸಲಾ ರಂಭಿಸಿ, ಗ್ರಂಥಾದಿಯಲ್ಲಿ ಪರಮಾತ್ಮ ಧ್ಯಾನರೂಪವಾದ ಇಷ್ಟದೇವತಾ ಪ್ರಾರ್ಥನೆಯನ್ನು ಮಾಡುವನು. ಕೆಲವರು ಇದನ್ನು ಶುಕಪ್ರಣೀತವೆಂದು ಹೇಳುವರು. ಈ ಗ್ರಂಥವು ಶುಕಕೃತವೆಂದು ಹೇಳುವುದರಿಂದ ಈ ಭಾಗವತದಲ್ಲಿಯೇ ಮುಂದೆ ಅನೇ ಕವಚನಗಳಿಗೆ ವಿರೋಧವುಂಟಾಗುವುದು. ಇದನ್ನು ವ್ಯಾಸಪ್ರಣೀತವೆಂದು ಹೇಳಬೇಕೇ ಹೊರತು ಶುಕಪ್ರಣೀತವೆಂದು ಹೇಳುವುದಕ್ಕೆ ಅವಕಾಶವಿಲ್ಲ. ಮೊ ದಲು ವ್ಯಾಸಮಹಾಮಸಿಯು ನಾರದಾಜ್ಞೆಯಿಂದ ಈ ಗ್ರಂಥವನ್ನು ರಚಿಸಿ, ಅದನ್ನು ತನ್ನ ಪುತ್ರನಾದ ಶುಕಸಿಗೆ ಹೇಳಿದಮೇಲೆ, ಶುಕಮುನಿಯು ಇದನ್ನು ತನ್ನ ಭಕ್ತನಾದ ಪರೀಕ್ಷಿದ್ರಾಜನಿಗೆ ಉಪದೇತಿಸಿ, ಆ ಮೂಲಕವಾಗಿ ಲೋ ಕದಲ್ಲಿ ಪ್ರಚಾರಕ್ಕೆ ತಂದಿರುವನು. ಆದುದರಿಂದ ಪುರಾಣಾಂತರಗಳಲ್ಲಿರುವ ಶುಕಿಕವೆಂಬ ವಾಕ್ಯಕ್ಕೆ.ಶುಕಮುನಿಯಿಂದ ಪ್ರಚಾರಗೊಳಿಸಲ್ಪಟುದೆಂ ದೇ ಅರ್ಥವನ್ನು ಗ್ರಹಿಸಬೇಕು. ಇದೇ ಭಾಗವತವೆಂಬ ಹೆಸರಿನಿಂದ, ದೇವೀಭಾಗವತವೇ ಮೊದಲಾದ ಗ್ರಂಥಾಂತರಗಳಿದ್ದರೂ, ಪುರಾಣಾಂತರಗಳಲ್ಲಿ ಹೇಳಿರುವ ಲಕ್ಷಣಗಳನ್ನನುಸ ರಿಸಿ, ವ್ಯಾಸಪ್ರೋಕ್ಷವಾದ ಈ ಭಾಗವತಕ್ಕೆ ವಿಶೇಷ ಪ್ರಾಮಾಣ್ಯವೂ, ಪ್ರಾ ಶಸ್ತ್ರವೂ, ಉಪಾದೇಯತ್ವವೂ ಏರ್ಪಡುವುದು. ಸ್ಕಾಂದಪುರಾಣದ ಉತ್ತರ ಖಂಡದಲ್ಲಿ ಈ ಗ್ರಂಥಲಕ್ಷಣವು ವ್ಯಕ್ತವಾಗಿ ಹೇಳಲ್ಪಟ್ಟಿರುವುದು. (“ಗ್ರಂಥSಷ್ಟಾದಶಸಾಹಸ್ರ ದ್ವಾದಶಸ್ಕಂಧಸಮ್ಮಿತಃ | ಹಯಗ್ರೀವಬ್ರಹ್ಮವಿದ್ಯಾ ಯತ್ರ ವೃತ್ರವಧಸ್ತಥಾ ಗಾಯತ್ರಾ ಸಮಾರಂಭೋ ಯತ್ರ ಭಾಗವತಂವಿದುಃ || ೫ ಎಂದರೆ, ಗಾಯತ್ರೀ ಮಂತ್ರದಿಂದಾರಂಭಿಸಿ, ಹದಿನೆಂಟು ಸಾವಿರಗ್ರಂ ಥಗಳ ನ್ನೊಳಕೊಂಡು, ಹನ್ನೆರಡುಸ್ಕಂಧಗಳುಳ್ಳದಾಗಿ, ವೃತ್ರತಧ ವೃತ್ತಾಂ