ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತವು ಬೆಳಗುವನೋ, ಯಾವನ ದಿವ್ಯ ಮಂಗಳವಿಗ್ರಹವನ್ನು ನೋಡಿ ನಿತ್ಯಸೂರಿಗೆ ಸುವೆವು” ಎಂಬುದಾಗಿ ಒಂದೊಂದುವಾಕ್ಯಕ್ಕೂ ಕೊನೆಯವಾಕ್ಯದೊಡನೆ ಅನ್ವಯ ವು: ಲೋಕದಲ್ಲಿ ಒಂದೊಂದುಕಾರಕ ನಿಮಿತ್ತ ಕಾರಣವೆಂದೂ, ಉಪಾದಾನ ಕಾರಣವೆಂದೂ ಎರಡು ಬಗೆಯ ಕಾರಣಗಳುಂಟು, ಒಂದು ಗಡಿಗೆಯನ್ನು ನಿರ್ಮಿ ಸಬೇಕಾದರೆ ಕುಂಬಾರನು ಅದಕ್ಕೆ ನಿಮಿತ್ತಕಾರಣವೆನಿಸುವನು. ಮಣ್ಣು ಉಪಾದಾನ ಕಾರಣವಾಗುವುದು. ಇದರಂತೆಯೇ ಪರಮಾತ್ಮನು ಪ್ರಕೃತಿಪರುಷವೈಲಕ್ಷಣ್ಯದಿಂದ ಆ ವುಗಳಿಗೆ ನಿಯಾಮಕನಾಗಿದ್ದು,ಸೂಲರ ಪವಾದ ಈಪ್ರಪಂಚವನ್ನು ಸೃಷ್ಟಿಸತಕ್ಕವನಾ ಗಿಯೂ, ತಾನೇ ಆ ಪ್ರಪಂಚವೆಂಬ ಕಾರರೂಪದಲ್ಲಿ ಸೇರಿರತಕ್ಕವನಾಗಿಯೂ ಇರುವುದ ರಿಂದ, ಆ ಪರಮಾತ್ಮನೇ ಈ ಪ್ರಪಂಚಕ್ಕೆ ನಿಮಿತೆಪಾದಾನಗಳೆಂಬ ಎರಡು ವಿಧದಂ ದಲೂ ಕಾರಣನಾಗಿರುವನೆಂದು ಭಾವವು. ಯತೊವಾ ಇಮಾನಿ ಭೂತಾನಿ ಜಾಯಂ ತೇ,ಯೇನ ಜಾತಾನಿ ಜೀವಂತಿ, ಯಯಂತ್ಯಭಿಸಂವಿಶಸ್ತಿ”ಇತ್ಯಾದಿ ಶ್ರುತ್ಯರ್ಥಗಳು ಇದರಿಂದ ನಿರೂಪಿಸಲ್ಪಡುವುವು. ಆದರೆ ಲೋಕದಲ್ಲಿ ಒಂದೇ ವಸ್ತುವಿಗೆ ಉಭಯವಿಧ ಕಾರಣವೂ ಅಸಂಭಾವಿತ ವಲ್ಲವೆ? ಎಂದರೆ (ಅಭಿಜ್ಞ8) ಸರಜ್ಞನು, ಸಶಕ್ತನೆಂಬ ದಕ್ಕೂ ಇದೇ ಸೂಚಕವು. ಆದುದರಿಂದ ಸರಜ್ಞನಾಗಿಯೂ, ಸರಶಕನಾಗಿಯೂ, ಇರುವ ಪರಮಾತ್ಮನಿಗೆ ಈ ಉಭಯವಿಧಕಾರಣವೂ ಒಪ್ಪುವುದೆಂದು ಭಾವವು. ಈ ಜ್ಞಾನಶಕ್ತಿಗಳೆರಡೂ, ಅವನಿ ಪ್ರಲವಾಗಿ, ಅವನೂ ಕರವಶನಾಗಿರಬಹುದು. ಹಾಗಿದ ಮೇಲೆ ಅವನಲ್ಲಿ ಅತಿಶಯವೇನು?” ಎಂದರೆ (ಸ್ವರಾéré ) ಅವನು ತನಗೆ ತಾನೇ ಸರಸ್ವತಂತ್ರನಾಗಿದ್ದು, ಕರವಶರಾದ ಬೇರೆಯವರಿಗೆ ಪ್ರೇರಕನೇಹೊರತು, ತಾನು ಕ ರೈವಶ್ಯನಲ್ಲವೆಂದು ಭಾವವು. ಹೀಗೆ ಪರಮಾತ್ಮನು ಈ ಪ್ರಪಂಚದ ಸೃಷ್ಯಾದಿಗಳಿಗೆ ಈ ಭಯವಿಧದಿಂದಲೂ ಕಾರಣವೆಂಬುದು ಬೇರೆಬೇರೆ ಶ್ರುತಿಪ್ರಮಾಣಗಳಿಂದ ಸಿದ್ದವಾಗು ವುದು, “ಸತ್ಯಂ ಖಲ್ವಿದಂ ಬ್ರಹ್ಮ, ಐತದಾತ್ಮಮಿದಂ ಸತ್ಯಂ,ಅಯಮಾತ್ಮಾ ಬ್ರಹ್ಮ, ತತ್ವಮಸಿ, 'ಇತ್ಯಾದಿ ಶ್ರುತಿವಾಕ್ಯಗಳು ಅನ್ವಯಪ್ರತಿಪಾದಕಗಳಾಗಿ ಉಪಾದಾನಕಾರ ಸತ್ವವನ್ನು ನಿರೂಪಿಸುವುವು “ತಕ್ಷತ, ಯಃ ಪೃಥಿವ್ಯಾಂ ತಿರ್ಷ್ಠ, ಪೃಥಿವ್ಯಾ ಅಂತ ರೋಯಂ , ಪೃಥಿವೀ ಸವೇದ,ಯಸ್ಯ ಪೃಥಿವೀ ಶರೀರಂ, ಯಃ ಪೃಥಿವೀಮನ್ನರೋ ಯಮ ಯತಿ ಯ ಆತ್ಮನಿ ತಿಷ್ಟನ್ನಾನೋವ್ರರೋಯಮಾತ್ಮಾ ನ ವೇದ, ಯಸ್ಯಾತ್ಯಾ ಶರೀರಂ ಯ ಆತ್ಮಾನಮನ್ನರೋಯಮಯತಿ” ಇತ್ಯಾದಿಶ್ರುತಿವಾಕ್ಯಗಳು ವ್ಯತಿರೇಕಪ್ರತಿಪಾದಕರ ಳಾಗಿ ನಿಮಿತ್ತ ಕಾರಕತ್ವವನ್ನು ತೋರಿಸುವುವು, ಆದರೆ ಸರಶಕ್ತನಾದ ಈಶ್ವರನು, ಜಗ ಶೃಷ್ಟಿಯನ್ನು ಮಾಡುವ ವಿಷಯದಲ್ಲಿ ಸಮರ್ಥನಾಗಿದ್ದರೂ ಇರಬಹುದು, ಆದ ಈ ಜಗತ್ತೈಷಿಗೆ ಏನಾದರೂ ಒಂದು ಫಲೋದ್ದೇಶವಿರಬೇಕಲ್ಲವೆ? ಬುದ್ಧಿ ಪೂರಕ