ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತವೆ. ರವಾಗಿ ಚತುರ್ಮುಖಬ್ರಹ್ಮನಿಗೂವೇದಗಳನ್ನು ಪದೇತಿಸಿದನೋ,ಯಾವನು ಮಯ:) ಪರಸ್ಪರಮಿತ್ರೀಕರಣವು, (ಯತ:) ಯಾವ ಪರಬ್ರಹ್ಮನಿಂದ ನಡೆಯಿತೋ, ಎಂದರೆ, ಅಂಡಸೃಷ್ಟಿಗೆ ಮೊದಲು ಬೇಬೇರೆಯಾಗಿದ್ದ ಪೃಥಿವ್ಯಾದಿಭೂತಗಳನ್ನು ಸೃ ಮೈಕಾರ ಕುಪಯೋಗವಾಗುವಂತೆ ಒಂದಾಗಿ ಸೇರಿಸುವುದೇ ತ್ರಿವೃತ್ರಣವೆನಿಸುವು ದು. ಇದನ್ನೇ ಪಂಚೀಕರಣವೆಂದೂ ಹೇಳುವರು, ಸೃಷ್ಣವಿ ಮೊದಲಾದ ಪಂಚಭೂತಗ. ಇನ್ನೂ ಯಥಾಯೋಗ್ಯವಾಗಿ ಮಿಶ್ರಮಾಡಿಡುವುದಕ್ಕೆ ಪಂಚೀಕರಣವೆಂದು ಹೆಸರು. ಹೀಗೆ ತ್ರಿವೃತ ರಣದಿಂದ ಅಂಡಸೃಷ್ಟಿಯೆಂದೂ, ಅಂಡಸೃಷ್ಟಿಯಾದಮೇಲೆ ಚತು ರಖೋತ್ಪತ್ತಿಯೆಂದೂ “ ತದಂಡಮಭವ ಮಂ” “ರ್ತ ಜಜ್ಜೆ ಸ್ವಯಂ ಬ್ರಹ್ಮ” ಎಂಬ ಪ್ರಮಾಣಗಳಿಂದ ಸಿದ್ಧವಾಗುವುದು. ಆದುದರಿಂದ ಅಂಡೋತ್ಪತ್ತಿಗೆ ಮೊದಲೇ ನಡೆಯಬೇಕಾದ ಈ ತ್ರಿವೃತ್ಕರಣವು ಪರಮಾತ್ಮಕರ್ತೃಕವಲ್ಲದೆ ಬೇರೆಯಲ್ಲ ವೆಂಬುದು ಸಿದ್ದವು. ಆದರೆ ಹಂತಾಹಮಿಮಾಸೋ ದೇವತಾ ಅನೇನ ಜೀವೇನಾ ನಾನುಪ್ರವಿಶ್ವ ನಾಮರಸೇ ವ್ಯಾಕರವಾಣಿ, ತಾಸಾಂ ತ್ರಿವೃತ ಶ್ರೀವೃತಮೇಕೈಕಾಂ ಕರವಾಣಿ" ಎಂದು ಪರಮಾತ್ಮನು ತಾನೇ ತ್ರಿಮೂರ್ತಿಗಳಾಗಿಯೂ, ತಾನೇ ಜೀವಾತ್ಮರೂಪದಿಂದ ಸಮಸಶರೀರಗಳಲ್ಲಿಯೂ ಅನುಪ್ರವೇಶ ಮಾಡಿ ನಾಮರೂಪಭೇದಗಳನ್ನುಂಟುಮಾಡುವು ದಾಗಿಯೂ, ತಿಮ್ಮರಣಕ. ತಾನೇ ಕರ್ತನಾಗಿಯೂ ಇರುವಂತೆ ಮೇಲಿನ ಶ್ರುತಿವಾ ಕದಿಂದ ವ್ಯಕ್ತವಾಗುವುದಲ್ಲವೆ ? ಹೀಗೆ ಭಗವಂತನೂ ಸೃಷ್ಟಿಗೆ ಒಳಪಟ್ಟಿದ್ದ ಮೇಲೆ ಅವನಿಗೂ ಅತ್ಯತ್ಯಾದಿ ಷಗಳು ಸಂಬಂಧಿಸಿರಬೇಕಲ್ಲವೆ? ಎಂದರೆ : ಯತ್ರ ತ್ರಿಸ ರ್ಗೋಪಾ) ಯಾವ ಪರಮಾತ್ಮನಲ್ಲಿ ಮಾತ್ರ ಕ್ರಿಸರ್ಗಃ ) ವೃತ್ಕರಣಪೂರ್ವಕ ವಾದ ಸೃಷ್ಟಿಯು (ಮೈನಾ) ಮಿಸ್ಯೆಯಾಗುವುದೊ, ಎಂದರೆ ಆ ಸೃಷ್ಟಿದೋಷವು ಭಗವಂತನನ್ನು ಮಾತ್ರ ಸ್ಪರ್ಶಿಸದೆಂದು ಭಾವವು. ಇವನಿಗೆ ಮಾತ್ರ ಆ ದೋಷವು ಅಂಟದಿರುವುದು ಹೇಗೆ? ಎಂದರೆ “ಧಾರ ಸೈವ ನಿರ ಪ್ರಸನ್ನಕುಹಕಂ” ತನ್ನ ತೇಜಸ್ಸಿನಿಂದಲೇ ಸಮಸ್ತ ದೋಷಗಳನ್ನೂ ನಾಶ ಹೊಂದಿಸುವರು, (ತ೦) ಅಂತಹ ಮಹಾಮಹಿಮೆಯುಳ್ಳವನಾಗಿಯೂ, (ಸತ್ಯ) ನಿತ್ಯನಾಗಿ , (ಪರ೦) ಬ್ರಹ್ಮರು ದ್ರಾದಿಗಳಿಗಿಂತಲೂ ಮೇಲೆನಿಸಿಕೊಂಡವನಾಗಿಯ ಇರುವ ಶ್ರೀಮನ್ನಾರಾಯಣನನ್ನು (ಧೀಮಹಿ) ಧ್ಯಾನಿಸುವೆವು” ಎಂದನ್ವಯವು. ಇದರಿಂದ ಶುದ್ಧ ಸ್ವರೂಪದಲ್ಲಿ ಸೂಕ್ಷಚಿದಚಿದ್ವಿ ಶಿಷ್ಯನಾದ ಪರಮಾತ್ಮನು ಚೇತನೊಜೀವನಾರ್ಥವಾಗಿ ಸೃಷ್ಟಿ ಕಾರ್ಯಕ್ಕನುಕೂಲಿಸುವಂತೆ ಪಂಚಭೂತಸಂ ಯೋಗವನ್ನೂ,ವೇದೋಪದೇಶವನ್ನೂ ಮಾಡುವುದರಿಂದ ನಿಮಿತ್ತ ಕಾರಣವೆನಿಸಿಕೊಂಡು,