ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೦ ಶ್ರೀಮದ್ಭಾಗವತವು [ಅಧ್ಯಾ, ೧, ವಿಥಿ,ಆಪ್ಪ, ತೇಜಸ್ಸು,ಇವುಗಳಪರಸ್ಪರಸಂಮೇಳನರೂಪವಾದ ತ್ರಿವೃತ್ಕರಣ ಯತೊವಾ ಇಮಾನಿ ಭೂತಾನಿ ಜಾಯಂತೇ” “ಯತಸ್ಸರಾಣಿ ಭೂತಾನಿ ಭವಂ ತ್ಯಾದಿಯುಗಾಗಮೇ | ಯಸ್ಮಿಂಶ್ಚ ಪ್ರಳಯಂ ಯಾಂತಿ ಪುನರೇವ ಯುಗಕ್ಷೆಯೇ” ಇ ತ್ಯಾದಿಶ್ರತಿ ತಿವಾಕ್ಯಗಳಿಂದ ನಿಮಿತ್ತಕಾರಣವೂ ಸಿದ್ಧವಾಗುವುದು, ಆದರೆ ಅನಾದಿಯಾದ ಮಾಯೆಯೂ ಜಗತ್ತಿಗೆ ಕಾರಣಭೂತವಾಗುವುದಲ್ಲವೆ? ಅದನ್ನೆ: ಇಲ್ಲಿ ಧ್ಯಾನವಿಷಯವನ್ನಾಗಿ ಪೇಳಿರಬಾರದೆ ? ಎಂದರೆ, ಅದನ್ನು ನಿಷೇಧಿಸುವರು ಅಭಿ ಜ್ಞ) ಸರಜ್ಞನು. (ಅರ್ಥೆನು, ಆಕಾಶಾದಿಕಾರಗಳಲ್ಲಿ (ಅಭಿಜ್ಞ) ಸರಜ್ಞನು, ಅಥವಾ ಜಾಗರೂಕನೆಂದರ್ಥವು. ಇದರಿಂದ ಜಡವಾದ ಪ್ರಕೃತಿಯು ಧ್ಯಾನವಿಷಯವ ಲ್ಲವೆಂದು ಸಿದ್ಧವಾಗುವುದು. ಮತ್ತು ( ಸ್ವರಾಟ್) ಸ್ವಯಂಪ್ರಕಾಶನು, ಅಥವಾ ಸ್ವತ ಸಿದ್ದವಾದ ಜ್ಞಾನದಿಂದ ಪ್ರಕಾಶಿಸುವವನು. ಆದರೆ ಹಿರಣ್ಯಗರ್ಭಸ್ಸಮವರ್ತತಾಗ್ರೆ ಭೂತ ಜಾತ : ಪತಿರೇಕ ಆಸೀತ್” ಎಂಬ ಶ್ರುತಿಯಂತೆ, ಮೇಲೆ ಹೇಳಿದ ಗುಣಗಳ ಇವೂ ಚತುರ್ಮುಖಬ್ರಹ್ಮನಿಗೂ ಇರುವುದರಿಂದ, ಅವನನ್ನೇ ದಾನವಿಷಯವಾಗಿ ಈ ಳಬಾರದೆ?” ಎಂದರೆ ಆ ಶಂಕೆಯನ್ನು ನಿವಾರಿಸುವರು. (ತೇನೇ ಬ್ರಹ್ಮ ಹೃದಾ ಯ ಆದಿಕವಯೇ) ಯಾವ ವೇದವನ್ನು ಕುರಿತು ಪಂಡಿತರೂಕೂಡ ಮರುಳಾಗರೋ, ಆ ಶಬ್ದಬ್ರಹ್ಮನನ್ನು ಚತುರ್ಮುಖಬ್ರಹ್ಮನಿಗೆ ಮನಸ್ಸಿನಿಂದ ಉಪದೇಶಿಸಿದವನು. 'ಯೋ ಬ್ರಹ ಈ ವಿದಧಾತಿ ಪೂರೈಂ ಯೋವೈ ವೇದಾಂಶ್ಚ ಗ್ರಹಿಣತಿ ತಸ್ಮ” ಎಂಬ ಶ್ರುತ್ಯರ್ಥವೂ ಇಲ್ಲಿ ಸಚಿತವಾಗವುದು, ಮ ಯತ್ರ) ಯಾವ ಪರಬ್ರಹ್ಮ ನಲ್ಲಿ ಕ್ರಿಸರ್ಗ 1 ಮಾಯಾಗುಣಗಳಾದ ಸಾರಜಸ್ತಮಸ್ತುಗಳಿಂದುಂಟಾದ ಭೂತೇಂ ಯದೇವತಾರೂಪಸೃಷ್ಟಿಯು (ತೇಜೋವಾ ರಿಮ್ಮದಾಂ! ತೇಜಸ್ಸು, ನೀರು, ಭೂ ಮಿ, ಇವುಗಳ ಬದಲಾವಣೆಯಂತೆ, ಎಂದರೆ ಒಂದು ಮತ್ತೊಂದರಹಾಗೆ ತೋರುವಂತೆ (ಮೃಸಾಅಸತ್ಯವೋ, ಅಂತಹ ಪರಮಾನಂದವ್ವಯವ, ಬಿಸಿಲುಜಳದಲ್ಲಿ ಜಲಬು ದ್ವಿಯು ಹೇಗೆ ನಿಜವಲ್ಲವೋ, ಹಾಗೆಯೇ ಪರಬ್ರಹ್ಮ ವಿಷಯದಲ್ಲಿ ಗುಣಜನ್ಯವಾದ ಸೃಷ್ಟಿಯು ಕೇವಲಭಾ೦ತಿಯೇ ಹೊರತು ನಿಜವಲ್ಲವೆಂದು ಭಾವವು, ಮತ್ತು, ಭೀಮಾ ಸ್ಟೇನ ಸದಾನಿರಸ್ತ ಕುಹಕಂ! ತನ್ನ ತೇಜಸ್ಸಿನಿಂದ ಮಾಯಾಮಯವಾದ ಈ ಪ್ರಪಂಚ ವನ್ನು ಯಾವಾಗಲೂ ನಾಶಹೊಂದಿಸುತ್ತಿರುವನು. (ಸತ್ಯ೦) ಸತ್ಯಸ್ವರೂಪನು (ತ೦) ಅಂತಹ (ಪರಂ) ಪರಬ್ರಹ ನನ್ನು { ಧೀಮಹಿ ಧ್ಯಾನಿಸುವೆವು. ಇದರ ಮುಖ್ಯಾರ್ಥವೇನೆಂದರೆ, ಪರಬ್ರಹ್ಮವೊಂದೇ ಸತ್ಯವು, ಆ ಪರಬ್ರಹ್ಮವೇ ರೂಪಾಂತರದಿಂದ ಈ ಪ್ರಪಂಚರೂಪವಾಗಿ ತೋರಿ, ಆಗಾಗ ಆ ಮಾಯಾಪ್ರಪಂ