ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೧] ಪ್ರಥಮಸ್ಕಂಧವು. ನಿರತಿಶಯಾನಂದಕಲ್ಯಾಣಗುಣಗಣವಿಶಿಷ್ಯನಾದ ಪರಮಾತ್ಮನನ್ನು ಧ್ಯಾ ನಿಸುವೆವು. ಶೂll ಧರ : ಪ್ರೊಜ್ಜಿತ ಕೈತವೋsತ್ರ ಪರಮೋ ನಿರತರಾಣಾಂ ಸತಾಂ ವೇದ್ಯಂ ವಾಸ್ತವಮತ ವಸ್ತು ಶಿವದಂ ತಾಪತ್ರಯೋನೂಲನಂ ! ಶ್ರೀಮದ್ಭಾಗವತೇ ಮಹಮುಸಿಕೃತೇ ಕಿಂವಾ ಪರೈರೀಶ್ವರ | ಸೃದ್ರೋ ಹೃದ್ಯವರುಧ್ಯತೇತ್ರ ಕೃತಿಭಿಶುಶೂಷುಭಿಕ್ಕ ತಕ್ಷಣಾತ್|| ಈ ಗ್ರಂಥದಲ್ಲಿ ನಿಷ್ಕಪಟವಾಗಿಯೂ ಸರೋತಮಫಲಪ್ರದವಾಗಿ ಯೂ, ಸಿರ್ಮತ್ಸರರಾದ ಸತ್ಪುರುಷರಿಗೆ ಸೇವ್ಯವಾಗಿಯೂ ಇರುವ ಭಕ್ತಿರೂ ಪವಾದ ಛದ್ಮವು ಪ್ರತಿಪಾದಿಸಲ್ಪಡುವುದು ಮತ್ತು ಇದರಲ್ಲಿ ಆಧ್ಯಾತ್ಮಿಕಾದಿ ತಾಪತ್ರಯಗಳನ್ನು ನೀಗಿಸಿ, ಸರೊತ್ತಮವಾದ ಶ್ರೇಯಸ್ಸನ್ನು ಕೈಗೂ ಡಿಸತಕ್ಕುದಾಗಿ, ಅಪ್ರಾಕೃತಸಹಜಗುಣವಿಶಿಷ್ಟವಾಗಿರುವ ಪರಾತ್ಪರ ವಸ್ತುವಿನ ಸ್ವರೂಪವು ವೇದ್ಯವಾಗುವುದು. ಮಹರ್ಷಿಪೊಕ್ಕವಾಗಿ, ಈ ವಲಭಕ್ತಿ ಪ್ರದಾನವಾದ ಈ ಭಾಗವತವೆಂಬ ಗ್ರಂಥವಿರುವಾಗ, ಬೇರೆ ಯಾ ವ ಶಾಸ್ತ್ರಗಳಿಂದೇನು ? ಲೋಕದಲ್ಲಿ ಯಾವ ಥನ್ಯರು ಈ ಸಮ್ಮಂಥವನ್ನು ಕೇಳಬೇಕೆಂದಪೇಕ್ಷಿಸುವರೋ, ಅಂತವರ ಹೃದಯದಲ್ಲಿ ಆಕ್ಷಣವೇ ಸರೋ ಶೃರನು ತಾನೇ ಬಂದು ಸಿಕ್ಕಿಬಿಳುವನು. ಶೈ | ನಿಗಮಕಲ್ಪತರೊರಳಿತಂ ಫಲಂ | ಶುಕಮುಖಾದಮೃತದ್ರವಸಂಯುತಂ | ಪಿಬತ! ಭಾಗವತ೦ ರಸಮಾಲಯಂ | ಮುಹುರಹೋ! ರಸಿಕಾ ಭುವಿ ಭಾವುಕಾ: 11 ಎಲೈ ರಸಜ್ಞರಾದ ಸಜ್ಜನರೆ ! ವೇದಗಳೆಂಬ ಕಲ್ಪವೃಕ್ಷದಿಂದ ಗಿಳಿಕ ಚಿಬಿದ್ದ ಹಣ್ಣಿನಂತೆ, ಸತ್ಯವೇದಸಾರಭೂತವಾಗಿ, ಶುಕಮುನಿಯ ಮುಖ ದಿಂದ ಹೊರಟಿರುವ ಈ ಭಾಗವತವು, ಅಮೃತಸಮಾನವ ದ ರಸವನ್ನು ಸ್ರವಿಸುವಂತಿರುವುದು. ಆದುದರಿಂದ ನೀವೆಲ್ಲರೂ ಇದರ ರಸವನ್ನು ನಿಮ್ಮ ಮರಣಾವಥಿಯಾಗಿ ಬಾರಿಬಾರಿಗೂ ಆಸ್ವಾದಿಸುತ್ತಿರಬೇಕು!”