ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Eು . ಶ್ರೀಮದ್ಭಾಗವತವು [ಅಧ್ಯಾ. ೧. ಮೊದಲು ಒಂದಾನೊಂದು ಕಾಲದಲ್ಲಿ ಶೌನಕಾದಿಮಹಾಮುನಿಗಳು ಅನೇಕದೇವತೆಗಳಿಗೆನಿತ್ಯನಿವಾಸವಾದ*ನೈಮಿಶಾರಣ್ಯದಲ್ಲಿ+ಪರಮಪದಪ್ರಾ ಪ್ತಿಗಾಗಿ ಸಹಸ್ರವರುಷಗಳವರೆಗೆ ನಡೆಸಬೇಕಾದ ಸತ್ರಯಾಗವನ್ನು ನಡೆಸು ತಿದ್ದರು. ಈ ನಡುವೆ ಒಂದಾನೊಂದುದಿನದಲ್ಲಿ, ಈ ಮಹರ್ಷಿಗಳೆಲ್ಲರೂ ಉ ಷಃಕಾಲದಲ್ಲಿಯೇ ಎದ್ದು ಸ್ನಾನಮಾಡಿ, ರ್ಫ್ಯವನ್ನು ಕೊಟ್ಟು, ಅಗ್ನಿ ಕಾರಗ ಇನ್ನೂ ತೀರಿಸಿಕೊಂಡು, ಸೂತಪೌರಾಣಿಕನೆಬಳಿಗೆ ಬಂದು, ಅವನನ್ನು ಯ ಥೋಚಿತವಾಗಿ ಸತ್ಕರಿಸಿ, ಸುಖಾಸೀನನಾಗಿದ್ದ ಆತನನ್ನು ಅತ್ಯಾದರ ಹಲದ ಪ್ರಶ್ನೆ ಮಾಡುವರು 2 ( ಎಲೈ ದೋಷರಹಿತನಾದ ಸೂತನೆ !

  • ಪೂರದಲ್ಲಿ ಮಹರ್ಷಿಗಳು ತಮಗೆ ತಪೋಯೋಗ್ಯವಾದ ಪುಣ್ಯ ಸ್ಥಳವಾವು ದೆಂದು ಬ್ರಹ್ಮನನ್ನು ಪ್ರಾರ್ಥಿಸಲು, ಬ್ರಹ್ಮನು ಮನೋಮಯವಾದ ಒಂದು ಚಕ್ರ ವನ್ನು ನಿರ್ಮಿಸಿ, ಅದನ್ನು ಭೂಲೋಕದಕಡೆಗೆ ಪ್ರಯೋಗಿಸಿ, ಅದರ ನೇಮಿಯು (ಬಳೆಯು)ಯಾವ ಸ್ಥಳದಲ್ಲಿ ಮುರಿದು ಚಕ್ರ ನಿಂತುಬಿಡುವುದೋ, ಅದೇ ಉತ್ತಮ ಕ್ಷೇತ್ರವೆಂದು ತಿಳಿಸಿದನು. ಅದರಂತೆ ಋಷಿಗಳು ಆ ಚಕ್ರವನ್ನು ಹಿಂಬಾಲಿಸಿದಾಗ..ಆ ಚಕ್ರವು ಈ ಸ್ಥಳದಲ್ಲಿ ನಿಂತುಹೋಯಿತು (ನೇಮಿಶ್ಮೀರತ ಇತಿ ನೇಮಿಶಮೇವ ನೈ ಮಿಶಂ) ಎಂಬ ವ್ಯುತ್ಪತ್ತಿಯನ್ನನುಸರಿಸಿ ಬ್ರಹ್ಮನ ರಥಚಕ್ರದ ನೇಮಿಯು ಮುರಿದು ಬಿದ್ದ ಈ ಸ್ಥಳಕ್ಕೆ ನೈಮಿಶಕ್ಷೇತ್ರವೆಂದು ಹೆಸರಾಯಿತು,

+ ಇಲ್ಲಿ “ಸ್ವರ್ಗಾಯ ಲೋಕಾಯ” ಎಂದು ಮೂಲವು. ಸ್ವರ್ಗೇ ಲೋಕೇ ಅಮೃತತ್ವಂ ಭಜನೇ” ಇತ್ಯಾದಿಶ್ರುತಿಗಳನ್ನನುಸರಿಸಿ, ಇಲ್ಲಿ ಸ್ವರ್ಗವೆಂಬುದಕ್ಕೆ ಪರಮ ಪದವೆಂದೇ ಅರ್ಥವನ್ನು ಗ್ರಹಿಸಬೇಕು. ಹಾಗಿಲ್ಲದೆ ಇಂದ್ರಲೋಕವೆಂದು ಹೇಳಿದಪಕ್ಷದ ಲ್ಲ, ಕೇವಲಮೋಕ್ಷಾಪೇಕ್ಷೆಯಲ್ಲಿರುವ ಶೌನಕಾದಿಮಹರ್ಷಿಗಳ ಸ್ವಭಾವಕ್ಕೂ, ಉದ್ದೇ ಶಕ ವಿರುದ್ಧವಾಗಿ, ಅಲ್ಪಸುಖವುಳ್ಳ ಸ್ವರ್ಗಪ್ರಾಪ್ತಿಗಾಗಿ ಅವರು ಅಷ್ಟೊಂದು ದೊಡ್ಡ ಯಾಗವನ್ನು ಕ್ರಮಿಸಿದಂತಾಗುವುದು, + ವ್ಯಾಸರು ಈ ಗ್ರಂಥವನ್ನು ರಚಿಸಿದ ಬಹುಕಾಲದಮೇಲೆ, ಸೂತನು ಶೌನ ಕಾದಿಗಳಿಗೆ ಇದನ್ನು ಹೇಳುವನಾದುದರಿಂದ ಸೂತಶಾನಕರ ಪ್ರಶೋತ್ತರರೂಪವಾದ ಈ ಮೊದಲಿನ ಕೆಲವು ಭಾಗಗಳುಮಾತ್ರ ವ್ಯಾಸಪೊಕ್ಕವಲ್ಲವೆಂದು ಕೆಲವರ ಅಭಿಪ್ರಾ ಯವುಂಟು. ಇದು ತಪ್ಪ! ಮೊದಲಿನಿಂದ ಕೊನೆಯವರೆಗೂ ಈ ಗ್ರಂಥವು ಇದೇ ವಿಧವಾ ದ ಪ್ರಶೋತ್ತರರೂಪದಲ್ಲಿರುವುದರಿಂದ, ಮುಂದಮುಂದೆಯೂ ಇದೇಆಕ್ಷೇಪಣೆಗೆ ಅವ