ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೧.] ಪ್ರಥಮಸ್ಕಂಧವು. ನೀನು ಅನೇಕಪುರಾಣಗಳನ್ನೂ, ಇತಿಹಾಸಗಳನ್ನೂ ಚೆನ್ನಾಗಿ ತಿಳಿದವನು ! ಎಷ್ಟೋ ಧರ್ಮಶಾಸ್ತ್ರಗಳನ್ನೋದಿದವನು, ಈಗಲೂ ನೀನು ಅವುಗಳನ್ನು ಆಗಾಗ ಇತರರಿಗೆ ತಿಳಿಸುತ್ತಲೂ ಇರುವೆಯಷ್ಟೆ? ಮತ್ತು ವೇದವಿತ್ತುಗಳಲ್ಲಿ ಮೇಲೆನಿಸಿಕೊಂಡ ಪೂಜ್ಯನಾದ ಬಾದರಾಯಣನೂ, (ವ್ಯಾಸನೂ ಪರ ತತ್ವವನ್ನೂ, ಪ್ರಕೃತಿಪುರುಷಸ್ವರೂಪವನ್ನೂ ತಿಳಿದ ಇನ್ನೂ ಅನೇಕಮಹ ರ್ಷಿಗಳೂ, ಯಾವಯಾವ ಪುರಾಣೇತಿಹಾಸಗಳನ್ನು ರಚಿಸಿರುವರೋ, ಯಾ ವಯಾವ ಶಾಸ್ತ್ರಗಳನ್ನು ವಿಧಿಸಿರುವರೋ, ಅವೆಲ್ಲವೂ ನಿನಗೆ ತಿಳಿದಂತೆ ಮ ತ್ತೊಬ್ಬರಿಗೆ ತಿಳಿಯವು : ಎಲೈ ಸೌಮ್ಯನೆ ! “ವ್ಯಾಸಾನುಗ್ರಹದಿಂದ ನೀನು ಅದರ ರಹಸ್ಯವೆಲ್ಲವನ್ನೂ ಚೆನ್ನಾಗಿ ತಿಳಿದವನು? ಗುರುಗಳು ನಿನ್ನಂತೆ ಭಕ್ತಿ ಯುಕ್ತನಾದ ಶಿಷ್ಯನಿಗೆ ಎಷ್ಟೋ ರಹಸ್ಯಾರ್ಥವನ್ನಾದರೂ ಮರೆಸದೆ ಹೇಳುವರು. ಎಲೈ ಆಯುಷ್ಯಂತನೆ ! ಲೋಕದಲ್ಲಿ ಮನುಷ್ಯನಿಗೆ ವಿಶೇ ಷಶ್ರೇಯಸ್ಕರವಾವುದೋ ಆ ವಿಷಯವನ್ನು ನೀನು ಅಲ್ಲಲ್ಲಿ ಪುರಾಣಾದಿಗಳಿಂ ದ ನಿಶ್ಚಯಿಸಿ ತಿಳಿದಿರುವೆಯಷ್ಟೆ.ಸಾಮಾನ್ಯವಾಗಿ ಈ ಕಲಿಯುಗದಲ್ಲಿ ಮುಂ ದೆ ಹುಟ್ಟುವ ಜನರೆಲ್ಲರೂ ಅಲ್ಪಾಯುಷ್ಯವುಳ್ಳವರು ಮತ್ತು ಜಡಸ್ವಭಾವವು ಇವರು! ಮಂದಬುದ್ದಿಯುಳ್ಳವರು ! ಯಾವಾಗಲೂ ತಾಪತ್ರಯದಲ್ಲಿ ಸಿಕ್ಕಿ ನರಳುತ್ತಿರುವರು.ಆದುದರಿಂದ ಇವರು ಎಂದಾದರೂ ಒಮ್ಮೆ ಶ್ರೇಯಸ್ಸಾ ಧನೆಗಾಗಿ ಪ್ರಯತ್ನಿಸಿದರೂ, ನಡುನಡುವೆ ಅನೇಕವಿಪ್ಪುಗಳಿಂದ ಪ್ರತಿಹತ ರಾಗಿ, ಆಶಾಭಂಗವನ್ನು ಹೊಂದುವರು. ಈ ಕಾರಣಗಳಿಂದ ಕಲಿಯುಗದಲ್ಲಿ ಕಾಶವಾಗುವುದು. ಆದುದರಿಂದ ತ್ರಿಕಾಲಜ್ಞನಾದ ವ್ಯಾಸಮುನಿಯು, ಮುಂದೆ ನಡೆಯ ಬಹುದಾದ ಸಂಗತಿಯನ್ನು, ಮೊದಲು ತಾನೇ ಅನುವಾದಮಾಡಿ ತೋರಿಸುತ್ತ, ಈ ಗ್ರಂಥರಚನೆಯನ್ನು ಮಾಡಿರುವನೆಂದು ಗ್ರಾಹ್ಯವು,

  • ಜೀವಾತ್ಮ ಪರಮಾತ್ಮತತ್ತ್ವವನ್ನು ತಿಳಿಸುವ ಶಾರೀರಕಮೀಮಾಂಸಾಶಾಸ್ತ್ರ ದಲ್ಲಿ, ಬ್ರಾಹ್ಮಣಾದಿಮೂರುವರ್ಷದವರಿಗೆಹೊರತು ಇತರಜಾತಿಯವರಿಗೆ ಅಧಿಕಾರವಿಲ್ಲ ಎಂದು ಶಾಸ್ತ್ರಸಿದ್ದವು. ಇದರಂತೆ ಸೂತಪೌರಾಣಿಕರಿಗೆ ಆ ಶಾಸ್ತ್ರವನ್ನೊದುವ ಅಧಿ ಕಾರವಿಲ್ಲದಿದ್ದರೂ, ಪುರಾಣೇತಿಹಾಸಗಳನ್ನೊದುವುದರಿಂದಲೇ ಅವರಿಗೆ ವ್ಯಾಸಾನು ಗ್ರಹದಿಂದ ತತ್ತ್ವಜ್ಞಾನವುಂಟಾಗಿ, ಬ್ರಹ್ಮ ವೇದಿಗಳಾದ ಋಷಿಗಳಿಗೆ ತ ಪ ದೇಶಕರಾದರೆಂದು ತಿಳಿಯಬೇಕು,