ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತವು (ಅಧ್ಯಾ, ೨. ವಿಲ್ಲ. ಹೀಗೆ ನಾವು ಈ ಕಲಿಬಾಧೆಯನ್ನು ತಪ್ಪಿಸಿಕೊಳ್ಳಲಾರದೆ ಕಳವಳಿಸು ತಿರುವಾಗ,ಸಮುದ್ರಪ್ರವಾಹದಲ್ಲಿ ಸಿಕ್ಕಿಬಿದ್ದವರಿಗೆ, ನಾವಿಕರ ಸಹಾಯವು ಸಿಕ್ಕಿದಂತೆ, ಭಗವಂತನೇ ನಿನ್ನನ್ನು ನಮಗೆ ತೋರಿಸಿಕೊಟ್ಟಂತಾಯಿತು. ಆ ದುದರಿಂದ ಈ ಕಲಿಯೆಂಬ ಮಹಾಸಮುದ್ರವನ್ನು ದಾಟುವುದಕ್ಕೆ ನೀನು ನಮಗೆ ನಾವಿಕನಾಗಿ, ಆ ಕೃಷ್ಣಚರಿತ್ರವನ್ನೇ ಹಡಗಿನಂತೆ ಸಾಧನವನ್ನಾ ಗಿಟ್ಟುಕೊಂಡು, ನಮ್ಮನ್ನು ದರಿಸಬೇಕು.ಭಕ್ತಿಯೋಗರಾಧ್ಯನಾಗಿಯೂ,ಸ ಮಸ್ತಧರ್ಮಗಳಿಗೂ ಪರಿಪಾಲಕನಾಗಿಯೂ, ಬ್ರಹ್ಮಕುಲಕ್ಕೆ ಹಿತನಾ ಗಿಯೂ ಇರುವ ಶ್ರೀ ಶ್ರೀಕೃಷ್ಣನು, ನಿಜಲೋಕವನ್ನು ಸೇರಿದಮೇಲೆ, ಇಲ್ಲಿನ ವರ್ಣಾಶ್ರಮಧುಗಳೆಲ್ಲಕ್ಕೂ ರಕ್ಷಕರಾರು? ಕಲಿದೋಷದಿಂದ ಈ ಕಾಲದಲ್ಲಿ ಧರ್ಮವು ಕೇವಲ ನಿಸ್ಸಾರವಾಗಿರುವುದು. ಭಗವಚ್ಚರಿತ್ರವೊಂ ದೇ ಈ ಕಲಿದೋಷವನ್ನು ನೀಗಿಸಬೇಕಲ್ಲದೆ ಬೇರೆಯಲ್ಲ ! ಆದುದರಿಂದ ನೀ ನು ನಮ್ಮಲ್ಲಿ ಪೂರ್ಣನುಗ್ರಹವನ್ನು ತೋರಿಸಿ, ಆ ಶ್ರೀಕೃಷ್ಣನ ಅವತಾರ ಚರಿತ್ರಗಳನ್ನು ತಿಳಿಸಬೇಕು” ಎಂದರು ಇದು ಪ್ರಥಮಾಧ್ಯಾಯವು. ಸತನು ಶೌನಕಾದಿಗಳಿಗೆ ಪರಮಪುರುಷರ * ಸ್ವರೂಪವನ್ನು ತಿಳಿಸಿದುದು, ಹೀಗೆ ಶೌನಕಾದಿಗಳು ಶ್ರೀಕೃಷ್ಣಚರಿತ್ರವಿಷಯವಾಗಿ ಪ್ರಶ್ನೆ ಮಾಡಿ ದುದನ್ನು ಕೇಳಿದೊಡನೆ, ಸೂತಪೌರಾಣಿಕನು ಬಹಳ ಸಂತೋಷಗೊಂಡವ ನಾಗಿ, ಅವರ ಪ್ರಾರ್ಥನೆಯನ್ನಭಿನಂದಿಸುತ್ತ, ಅವರ ಕೋರಿಕೆಯಂತೆ ಭಗ ವಚ್ಛರಿತ್ರವನ್ನು ಹೇಳತೊಡಗಿ, ಕಥಾರಂಭಕ್ಕೆ ಮೊದಲು, ಈ ಪುರಾಣಕ್ಕೆ ಪ್ರ ಥಮಪ್ರವರ್ತಕರಾದ ಶುಕಮುನಿಯನ್ನು ಧ್ಯಾನಿಸುವನು.ಯೋಗೀಶ್ವರನೆಸಿ ಸಿಕೊಂಡ ಯಾವ ಮಹಾತ್ಮನು, ಬ್ರಹ್ಮಾಸನದಲ್ಲಿ ಸಿದ್ಧಿಯನ್ನು ಪಡೆದು ಕೃತಕೃತ್ಯನಾದಮೇಲೆ, ಲೌಕಿಕಸಂಬಂಧಗಳೆಲ್ಲವನ್ನೂ ಪರಿತ್ಯಾಗ ಮಾಡಿ, ತಂದೆತಾಯಿಗಳನ್ನೂ ಬಿಟ್ಟು,ಸನ್ಯಾಸವನ್ನು ವಹಿಸಿ,ಏಕಾಕಿಯಾಗಿ ಹೊರಟನೋ, ಅಂತಹ ಮಹಾಜ್ಞಾನಿಯಾದ ಯಾವ ಪುತ್ರನ ವಿರಹವನ್ನು ಸಹಿಸಲಾರದೆ, ವ್ಯಾಸಮುನಿಯು, ತಾನೂ ಅವನನ್ನು ಹಿಂಬಾಲಿಸಿ,ಪತಾ”!