ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತವು [ಅಧ್ಯಾ, ೨. ಕ್ಷೇಮಾರವಾಗಿ ತಪೋನಿಷ್ಠರಾಗಿರುವ ನರನಾರಾಯಣರನ್ನೂ ಬ್ರಹ್ಮ ಪತ್ನಿ ಯಾದ ವಾಗ್ರೇವತೆಯನ್ನೂ, ವ್ಯಾಸಮಹಾಮುನಿಯನ , ಮೊದಲು ನಮ್ಮ ಸ್ಕರಿಸಿ, ಆಮೇಲೆ ದುರಿತಜಯರೂಪವಾದ ಈ ಪುರಾಣವನ್ನು ವಚಿಸಬೇಕಾಗಿ ರುವುದು” ಎಂದು ಗ್ರಂಥಪ್ರವರ್ತಕರಾದ ಆಚಾರರ ಪರಂಪರೆಯನ್ನು ಧ್ಯಾ ಸಿಸಿ, ಶೌನಕಾದಿಗಳನ್ನು ಕುರಿತು ಹೇಳುವರು ಎಲೈ ಮುನಿಶ್ರೇಷ್ಠರೆ'ನೀವು ಕೇಳಿದ ಕೃಷ್ಣಸಂಬಂಧವಾದ ಈ ಪ್ರಶ್ನವು ಅತ್ಯಂತಾ ಫ್ಯವಾದುದು. ಈ ನಿಮ್ಮ ಪ್ರಶ್ನವು ನಿಮಗೆ ಮಾತ್ರವಲ್ಲದೆ ಸಮಸ್ಯ ಜಗತ್ತಿಗೂ ಕ್ಷೇಮಕರ ವಾದುದು. ಆ ಶ್ರೀಕೃಷ್ಣನ ನಾಮಸ್ಮರಣಮಾತ್ರದಿಂದಲೇ ಮನಸ್ಸು ಪ್ರ ಸನ್ನವಾಗುವುದು. ಎಲೈ ಮಹರ್ಷಿಗಳೆ! ಲೋಕದಲ್ಲಿ ಮನುಷ್ಯರಿಗೆ ನಿರತಿಶಯ ವಾದ ಶ್ರೇಯಸ್ಕೂ, ಆದಕ್ಕೆ ಸಾಧನವಾದ ಉತ್ತಮಧರವೂ ಯಾವುದೆಂದು ಕೇಳಿದಿರಲ್ಲವೆ? ಹೇಳುವೆನು ಕೇಳಿರಿ! ಸಂಸಾರ ನಿವೃತ್ತಿ ಪೂವ್ರಕವಾಗಿ, ಬ್ರಹ್ಮಾ ನಂದಾನುಭವಾತ್ಮಕವಾದ ಮೋಕ್ಷವೊಂದೆ ಮನುಷ್ಯನಿಗೆ ಸಿರತಿಶಯವಾದ ಶ್ರೇಯಸ್ಸಲ್ಲದೆ ಬೇರೆಯಲ್ಲ! ಫಲಾಪೇಕ್ಷೆಯೆಂಬ ವಿಘ್ನು ಗಳಿಗೊಳಗಾಗದೆ, ಮ ನಶುದ್ಧಿಯನ್ನುಂಟುಮಾಡಿ, ಭಗವಂತನಲ್ಲಿ ಭಕ್ತಿಯನ್ನು ಹುಟ್ಟಿಸುವದಕ್ಕೆ ಸಹಕಾರಿಯಾದ ಧರವಾವುದುಂಟೋ,ಅದೇ ಲೋಕದಲ್ಲಿ ಉತ್ತಮರ್ಧವನ್ನು ಸುವುದು. ಮಾಡು ಪರಿಪೂರ್ಣನಾದ ಆ ವಾಸುದೇವನವಿಷಯದಲ್ಲಿ ಹುಟ್ಟಿ ದ ಭಕ್ತಿಯು, ತಾನಾಗಿಯೇ ಮನಸ್ಸನ್ನು ಶುದ್ಧಮಾಡಿ, ವೈರಾಗ್ಯನನು ಹು ಟೈಸಿ, ಬೇರೆಯಾವ ವಿಧದಿಂದಲೂ ಲಭಿಸಲಾರದ ಭಗವತ್ಕಾತಾಪ ವಾದ ಜ್ಞಾನವನ್ನೂ ಉಂಟುಮಾಡುವುದು. ಲೋಕದಲ್ಲಿ ಮನಷ್ಯ:ು ತಮ್ಮ ತಮ್ಮ ವರ್ಣಾಶ್ರಮೋಚಿತವಾದ ಧವನ್ನು ಲೋಪವಿಲ್ಲದೆ ಎಷ್ಟೇ ಚೆನ್ನಾ ಗಿನಡೆಸುತ್ತ ಬಂದರೂ, ಅದು ಭಗವದ್ದು ಣ: ನುಸಂಧಾನದಲ್ಲಿ ರುಚಿರೂಪವಾ ವಿಷ್ಣುವಿನ ಅವತಾರವಾದುದರಿಂದ, ಅವರೂ ಇಲ್ಲಿನ ಗುರುಪರಂಪರೆಯಲ್ಲಿ ಸೇರಿರು ವರು. ಈ ಶ್ಲೋಕದಲ್ಲಿ (ದೇವೀಂ ಎಂಬ ಪದಪ್ರಯೋಗದಿಂದ (ದೇವಸ್ಯ ಚತುರ್ಮು ಖಸ್ಯ ಪತ್ನಿ ದೇವೀ) ಎಂಬ ವ್ಯಕ್ತಿಯನ್ನನುಸರಿಸಿ, ಬ್ರಹ್ಮನಾರದರ ಹೆಸರೂ ಸೂ ಚಿತವಾಗುವುದು. ಹೀಗೆಯೇ ಪರಂಪರಾಸಂಬಂಧದಿಂದ ಅನಿರುದ್ಧ ಚತುರ್ಮುಖನಾರ ದರೂ ಇಲ್ಲಿ ನಮಸ್ಕಾರರೆಂಬುದು ಅರ್ಥಸಿದ್ದವು.