ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

& 8 ಅಧ್ಯಾ, ೨. ಪ್ರಥಮಸ್ಕಂಧವು. ರ್ಥಗಳ ಸೇವನವೂ ಸಹಕಾರಿಗಳಾಗಿರುವುವು. ಆದುದರಿಂದ ಮನುಷ್ಯರು ತಮ್ಮ ತಮ್ಮ ವರ್ಣಾಶ್ರಮಧಮ್ಮಗಳ ಬಲದಿಂದ ಪ್ರತಿಬಂಧಕಸಾಮಗ್ರಿಗ ಳೆಲ್ಲವನ್ನೂ ನೀಗಿಸಿಕೊಂಡು, ಶ್ರದ್ಧಾಳುಗಳಾಗಿದ್ದರೆ, ಅಂತವರಿಗೆಮೇಲೆಹೇಳಿದ ಸಹವಾಸಾದಿಗಳಿಂದ ವಾಸುದೇವಕಥಾಶ್ರವಣಾದಿಗಳಲ್ಲಿ ರುಚಿಯ ಹುಟ್ಟುವುದು. ಆ ಶ್ರೀಕೃಷ್ಣನು, ನಿಜಕಥಾಶ್ರವಣಕೀರ್ತನೆಗಳಿಂದಲೆ ಚೇ ತನರನ್ನು ಪವಿತ್ರವನ್ನಾಗಿ ಮಾಡುವನು ತನ್ನ ಕಥೆಯನ್ನು ಕೇಳತಕ್ಕವರ ಮನಸ್ಸಿನಲ್ಲಿ ಅಂತಲ್ಯಾಮಿಯಾಗಿ ನೆಲೆಗೊಂಡು, ಅವರ ಹೃದಯದಲ್ಲಿ ಭಕ್ತಿ ಗೆ ವಿರೋಧಿಗಳಾದ ಪಾಪಗಳೆಲ್ಲವನ್ನೂ ತಾನಾಗಿಯೇ ಹೀಗಿಸುವುದರಿಂದ ಸರಸುಹೃತ್ಯನಿಸಿಕೊಂಡಿರುವನು. ಹೀಗೆ ನಿತ್ಯವೂ ಭಾಗವತಸವಾರೈಕೆ ವಾದ ಭಗವದ್ಯಾಣಶ್ರವಣಯಂದ, ಮನಸ್ಸು ನಕಲ್ಮಷಗಳೆಲ್ಲವೂ ಪ್ರಾಯಕವಾ ಗಿ ಸೀಗಿ, ದೃಢವಾದ ಭಕ್ತಿಯ ಸುಟ್ಟುವುದು ! ಅದರಿಂದಾಚೆಗೆ ಮನಸ್ಸ ನ್ನು ಕೆಡಿಸತಕ್ಕೆ ರಜಸ್ತಮೋಗುಣಜನ್ಯಗಳಾದ ಕಾಮಲೆ ಭಾರಿಗಳೆಂದೂ ಅದರ ಸಮೀಪಕ್ಕೆ ಹೊದಲಾರವು. ಆ ಮನಸ್ಸು ಸತ್ವಗಣವೊಂದರಲ್ಲಿಯೇ ನೆಲೆಸಿ ಪ್ರಸನ್ನ ವಾಗುವುದು. ಹೀಗೆ ಪ್ರಸನ್ನ ಮನಸ್ಸುಳ್ಳವನಾಗಿ, ಸಂಗಗಳ ನ್ನು ತೊರೆದು, ಏರಕ್ತನಾದವನಿಗೆ, ಆಭಕ್ತಿಪಕಾರಮಂದ ಭಗವಂತನ ಗುಣ ಸ್ವರೂಪಾಯಿಗಳನ್ನು ಯಥಾಸ್ಥಿತವಾಗಿ ಸಾಕ್ಷಾತ್ಕರಿಸತಕ್ಕೆ ಜ್ಞಾನವೂ ಹು ಮೈುವುದು ಭಕ್ತಿಯ ಫಲವೇಜ್ಞಾನವು. ಪರಮಾತ್ಮನೇಕ್ಷಾತ್ಕಾರರೂಪವಾದ ಈ ಜ್ಞಾನವು ಹುಟ್ಟಿ ಬಕ್ಷಣವೇ ಭಗವತ್ಪಾಪ್ತಿಗೆ ಪ್ರತಿಬಂಧಕಗಳಾದ ಹಿಂ ದುಮುಂದಿನ ಪಾಪಕರ್ಮಗಳೂ ನಾಶಹೊಂದುವುವು. ತನ್ಮೂಲಕಗಳಾದ

  • ಇಲ್ಲಿ ಮನಸ್ಸಿನ ಕಲ್ಮಷಗಳೆಲ್ಲವೂ ಪ್ರಾಯಕವಾಗಿ ನಶಿಸುವುವೆಂಬುದರಿಂದ, ಆಗಲೂ ಪಾಪಗಳೆಲ್ಲವೂ ನಿಶೇಷವಾಗಿ ಕಳೆಯಲಿಲ್ಲವೆಂದು ಸೂಚಿತವಾಗುವುದು. ಇದ ರಿಂದ, ತತ್ಕಾಲದಲ್ಲಿ ಭಕ್ತಿಗೆ ಪ್ರತಿಬಂಧಕಗಳೆಲ್ಲವೂ ನೀಗಿದ್ದರೂ, ಭಗವತ್ಪಾಪ್ತಿಗೆ ಪ್ರತಿಬಂಧಕಗಳಾಗಿರುವ ಉತ್ತರಪೂರಾಘಗಳೆಂಬಿವುಮಾತ್ರ, ಆ ಭಕ್ತಿಯು ಪರಿಪಕ್ಷ ವಾದಹೊರತು ಬಿಟ್ಟು ಹೋಗತಕ್ಕವುಗಳಲ್ಲವೆಂದು ಸಿದ್ಧವಾಗುವುದು,