ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೬ ಶ್ರೀಮದ್ಭಾಗವತವು. [ಆಧ್ಯಾ, ೨. ಸಮಸ್ತಸಂಶಯಗಳೂ, ಅಜ್ಞಾನ ವಿಪರೀತಜ್ಞಾನಾದಿಗಳೆಲ್ಲವೂಬಿಟ್ಟು ಹೋ ಗುವುವು. ಮನಸ್ಸಿನಲ್ಲಿ ನೆಲೆಗೊಂಡಿರುವ ಅಹಂಕಾರಮಮಕಾರಾದಿಗಳೂ ನತಿ ಸುವುವು. ಇವೆಲ್ಲವೂ ನಿವೃತ್ತವಾದಮೇಲೆ ಬ್ರಹ್ಮ ಪ್ರಾಪ್ತಿಯೂ,ಬ್ರಹ್ಮಾನು ಭವವೂ ಪ್ರಯತ್ನ ವಿಲ್ಲದೆ ತನಗೆ ತಾನೇ ಸಿದ್ದಿಸುವುವು. ಹೀಗೆ ಮೋಕ್ಷವೇ ಪ ಷಾರವಾಗಿಯೂ, ಭಕ್ತಿಯೇ ಅದಕ್ಕೆ ಮುಖ್ಯ ಸಾಧನವಾಗಿಯೂ ಇರುವುದ ರಿಂದ, ಇದರ ತತ್ತ್ವವನ್ನು ತಿಳಿದ ಪ್ರಾಜ್ಞರು ಪರಮಾದರಪೂರ್ವಕವಾಗಿ ಮನಃಪ್ರಸಾದವನ್ನುಂಟುಮಾಡತಕ್ಕ ಆ ಹರಿಭಕ್ತಿಯೊಂದನ್ನೆ ದೃಢವಾಗಿ ಹಿಡಿಯುವರು 14 ಜಗತೃಷ್ಟಿಮೊದಲಾದ ಕಾವ್ಯಗಳಿಗೆ ಬ್ರಹ್ಮ ರುದ್ರಾದಿ ಗಳೂ ಕಾರಣಭೂತರಾಗಿರುವಾಗ,ಹರಿಭಕ್ತಿಯೊಂದೇ ಮೋಕ್ಷಸಾಧಕವೆಂದು ಹೇಳುವುದು ಹೇಗೆ?”ಎಂದರೆ, *ಸತ್ವವೆಂದೂ, ರಜಸ್ಸೆಂದೂ, ತಮಸ್ಸೆಂದೂ

  • ಈ ತ್ರಿಮೂರ್ತಿಗಳಲ್ಲಿ ವಿಷ್ಣುವೇ ಪರಮಪುರುಷನೆಂದೂ, ಅವನೇ ಬ್ರಹ್ಮ ರುದ್ರಾದಿರೂಪದಲ್ಲಿ ಸೇರಿ ಸೃಷ್ಟಿಸಂಹರಾದಿಗಳನ್ನು ನಡೆಸುವನೆಂದೂ ಗ್ರಾಹ್ಯವು, ಬ್ರಹ್ಮ ರುದ್ರರಿಬ್ಬರ, ಜೀವಕೋಟಿಯಲ್ಲಿ ಸೇರಿ ಹಿಂದೆ ಹೇಳಿದಂತೆ ವಿಷ್ಣುವಿಗೆ ಶರೀ ರಭೂತರಾದುದರಿಂದ, ಆ ಹೆಸರುಗಳೂ, ಶರೀರಿಯಾದ ವಿಷ್ಣುವಿಗೇ ಸಲ್ಲುವುವೇ ಹೊರತು, ಈ ಮೂವರಿಗೂ ಸ್ವರೂಪಸಾಮ್ಯವಿಲ್ಲ ಆದುದರಿಂದ ಪರಮಪುರುಷನಾ ದ ಶ್ರೀಮನ್ನಾರಾಯಣನು,ಶರೀರಾತ್ಮಭಾವದಿಂದ ಬ್ರಹ್ಮ ರುದ್ರರಾಗಿರುವನೆಂದೂತಾನೇ ಸಾಕ್ಷಾತ್ತಾಗಿ ತನ್ನ ಸಂಕಲ್ಪದಿಂದ ಅವತಾರಗಳನ್ನೆತ್ತಿ ತ್ರಿಮೂರ್ತಿಗಳ ನಡುವೆವಿಷ್ಟುವೆ ನಿಸಿಕೊಳ್ಳುವನೆಂದೂ ಗ್ರಾಹ್ಯವು, ಆದುದರಿಂದ ತ್ರಿಮೂರ್ತಿಗಳಲ್ಲಿ ವಿಷ್ಣು ನಾಮಕವೇ ಆ ಪರಮಪುರುಷನು. ಬ್ರಹರುದ್ರರಿಬ್ಬರೂ ಆ ಪುರುಷನಿಗೆ ಶರೀರಭೂತರಾದ ಜೀ ವಾತ್ಮರೆಂದು ಸಿದ್ದವು. ಆದರೆ ಮೇಲಿನ ಮೂಲದಲ್ಲಿ' (ಆ ಪರಮಪುರುಷನೊಬ್ಬನೇ ವಿಷ್ಣು ಬ್ರಹ್ಮ ರುದ್ರರೆಂಬ ನಾಮಭೇದದಿಂದ ಸ್ಥಿತಿ ಮೊದಲಾದ ಕಾವ್ಯಗಳನ್ನು ನಡೆಸುವನೆಂದಿರು ವುದರಿಂದ, ಆ ತ್ರಿಮೂರ್ತಿಗಳಿಗೆ ಹೆಸರಿನಲ್ಲಿ ಭೇದವೇಹೊರತು, ವಸ್ತುಭೇದವಿಲ್ಲವೆಂದು ಸೂಚಿತವಾಗುವುದಲ್ಲವೆ?ಇದಕ್ಕನುಗುಣವಾಗಿಶ್ರತಿಗಳಲ್ಲಿಯೂ ಬ್ರಹ್ಮಾ ನಾರಾಯ ಕಃ, ಶಿವಶನಾರಾಯಣ”ಎಂಬುದಾಗಿ ಸ್ವರೂಪೈಕವೇ ಹೇಳಲ್ಪಡುವುದು. ಅದರಂತೆ ಯೇ ಸ್ಮತಿವಾಕ್ಯಗಳಲ್ಲಿಯೂ “ ಸರ್ಗಸ್ಥಿತ್ಯಂತಕರಣೀಂ ಬ್ರಹ್ಮ ವಿಷ್ಣುಶಿವಾತ್ಮಿಕಾಂ! ಸಂಜ್ಞಾಂ ಸಯಾತಿ ಭಗವಾನೇಕಏವ ಜನಾರ್ದನಃ”ಎಂದು ತ್ರಿಮೂರ್ತಿಗಳಿಗೆ ಸಂಜ್ಞಾ ಭೇದವು ಮಾತ್ರವೇ ಹೇಳಲ್ಪಟ್ಟಿರುವುದು. ಇದಲ್ಲದೆ ಒಬ್ಬನೇ ಹರಾದಿಸಂಜ್ಞೆಗಳನ್ನು