ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೯ ಅಧ್ಯಾ. ೨] ಪ್ರಥಮಸ್ಕಂಧವು. ರಮಪುರುಷನೊಬ್ಬನೇ ಶರೀರಾತ್ಮಭಾವದಿಂದ ಆ ಮೂರುಗುಣಗಳಿಂದಕೂಡಿ ಈ ಜಗತ್ತಿನ ಸ್ಥಿತಿ ಮೊದಲಾದ ಕಾವ್ಯಗಳನ್ನು ನಡೆಸುವುದಕ್ಕಾಗಿ,ವಿಷ್ಟು ಹ್ಮರುದ್ರರೆಂಬ ನಾಮರೂಪಭೇದಗಳನ್ನು ಹೊಂದುವನು. ಇವರಲ್ಲಿ ಸತ್ವ ಮೂರ್ತಿಯಾದವಿಷ್ಣುವಿನಿಂದಲೇ ಮನುಷ್ಯರಿಗೆ ಮೋಕ್ಷಪ್ರಾಪ್ತಿಯವರೆಗೆ) ಸತ್ವವಿಧಗಳಾದ ಶ್ರೇಯಸ್ಸುಗಳೂ ಕೈಗೂಡುವುವು. ಮೇಲೆ ಹೇಳಿದ ರೂ ಸಮವಾಗಿ ಪ್ರಕೃತಿಯ ಗುಣಗಳಾಗಿರುವಾಗ, ಅವುಗಳಲ್ಲಿ ಸತ್ಯವೊಂ ದೇ ಮೋಕ್ಷಹೇತುವೆಂಬುದಕ್ಕೆ ಆಧಾರವೇನು? ಎಂದರೆ, ಪೃಥಿವೀವಿಕಾರವಾ ದ ಒಂದುಕಟ್ಟಿಗೆಯಲ್ಲಿ, ಮೊದಲು ಹೊಗೆಯು ಕಾಣಿಸಿಕೊಂಡು, ಆಮೇಲೆ ಅಗ್ನಿ ಯು ಹುಟ್ಟುವುದಲ್ಲವೆ? ಇವೆರಡೂ ಒಂದೇ ಕಟ್ಟಿಗೆಯಿಂದ ಹೊರಟಿದ್ದ ರೂ, ಹೊಗೆಯು ಪ್ರಕಾಶರಹಿತವಾಗಿ ನಿಷ್ಟ್ರಯೋಜನವಾಗುವುದು. ಆದ ರಿಂದಾಚೆಗೆ ಹುಟ್ಟುವ ಅಗ್ರಿ ಯಾದರೋ ವೇದಪ್ರತಿಪಾದ್ಯವಾಗಿ, ತೇಜೋ ವಿಶಿಷ್ಟವಾಗಿರುವುದು. ಸ್ವರ್ಗಪ್ರಾಪ್ತಿಗೂ ಆದೇ ಕಾರಣವೆನಿಸಿಕೊಂಡಿ ರುವುದು. ಇದರಂತೆಯೇ ಲೋಕದಲ್ಲಿ ಸುಷುಪ್ತನಾದ ಮನುಷ್ಯನಿಗೆ ಮೊ ದಲು ತಮಸ್ಸು ಕವಿದಿರುವುದು. ಅದರಿಂದಾಚೆಗೆ ರಜಸ್ಸು ಹುಟ್ಟುವುದು.ತದ ನಂತರದಲ್ಲಿ ಮನಸ್ಸನ್ನು ಪ್ರಸಾದಗೊಳಿಸತಕ್ಕ ಸತ್ವವು ಹುಟ್ಟುವುದು.ಇವೆಲ್ಲ ವೂ ಪ್ರಕೃತಿಜನ್ಯಗಳೇ ಆಗಿದ್ದರೂ, ಸತ್ವವೊಂದೇ ಬ್ರಹ್ಮಸಾಕ್ಷಾತ್ಕಾರಕ್ಕೆ ಸಾಧನವೆನಿಸಿರುವುದು. ಹೀಗೆ ಸತ್ವವೇ ಪರಬ್ರಹ್ಮಸಾಕ್ಷಾತ್ಕಾರಕ್ಕೆ ಸಾಧನ ವಾಗಿಯೂ ಅಂತಹ ಸತ್ವಕ್ಕೆ ಪ್ರವರ್ತಕನಾದ ಶ್ರೀಮನ್ನಾರಾಯಣನೇ ಶ್ರೇ ಯಂಪ್ರದನಾಗಿಯೂ ಇರುವುದರಿಂದ, ಪೂರ್ವಕಾಲದ ಮಹರ್ಷಿಗಳೆಲ್ಲರೂ, ಸಪ್ರವರ್ತಕನಾಗಿ, ಶುದ್ಧನಾಗಿರುವ ಆ ಭಗವಂತನನ್ನೇ ಮುಖ್ಯವಾಗಿ ಉಪಾಸನೆಮಾಡುತ್ತ ಬಂದರು. ಈಗಲೂ ಅದರಂತೆಯೇ ಸತ್ವಮೂರ್ತಿ ವಾವುದೋ ಅದೇ (ಉತ್ತರತರಂ) ಮೇಲೆನಿಸಿಕೊಳ್ಳುವುದು ಎಂಬರ್ಥವನ್ನು ಗ್ರಹಿಸ ಬೇಕು. ಹಾಗೆಯೇ (ಅಮೃತದ ಸೇತುಃ)ಎಂಬಲ್ಲಿಯಕೂಡ ವಿಷ್ಣುವು ಬೇರೋಂ ದು ತತ್ವಕ್ಕೆ ಪ್ರಾಪಕನೆಂದು ಗ್ರಹಿಸಕೂಡದು, ವಿಷ್ಣುವು ತನಗೆ ತಾನೇ ಪ್ರಾಪಕನೆಂ ಬುದೇ ಅದರರ್ಥವು. ಹೀಗೆ ನಾರಾಯಣನೇ ಪರಮಪುರುಷನೆಂಬುದಕ್ಕೆ ಅನೇಕಶ್ರುತಿ ಸ್ಮತಿವಾಕ್ಯಗಳುಂಟು (ವೀರರಾಘನೀಯವು).