ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೦ [ಅಧ್ಯಾ, ೨. ಶ್ರೀಮದ್ಭಾಗವತವು. ಯಾದ ಮಹಾವಿಷ್ಣುವನ್ನು ಭಕ್ತಿಯಿಂದ ಉಪಾಸನಮಾಡುವವರಿಗೆ ಸತ್ಯ ವಿಧದಲ್ಲಿಯೂ ಕ್ಷೇಮವುಂಟು. ಇದನ್ನು ಬಿಟ್ಟು ರಜಸ್ತಮೋಗುಣಪ್ರಧಾನ ರಾದ ಬ್ರಹ್ಮಾದಿಗಳನ್ನು ಭಜಿಸತಕ್ಕವರಿಗೆ ಲಭಿಸತಕ್ಕ ಫಲವು, ಕಾಲಕ್ರಮ ದಿಂದ ಕ್ಷಯಿಸಿ ಹೋಗುವುದೇ ಹೊರತು, ಶಾಶ್ವತವಲ್ಲ! ಆದರೆ ಕೆಲಕೆಲವರುದೇ ವತಾಂತರಗಳನ್ನ ಭಜಿಸುವುದುಂಟಲ್ಲವೆ? ಎಲ್ಲರೂ ಸತ್ಯಮೂರ್ತಿಯಾದ ಆ ವಿಷ್ಣುವೊಬ್ಬನನ್ನೇ ಏಕೆ ಭಜಿಸಬಾರದು?ಎಂದರೆ, ಜೀವಗಳಲ್ಲಿಯೂ ಶರೀರ ಸಂಬಂಧದಿಂದ ಈ ವಿಧವಾದ ಗುಣಭೇದಗಳುಂಟು. ಮೋಕ್ಷಾಪೇಕ್ಷೆಯುಳ್ಳ ವರೆಲ್ಲರೂ ಸತ್ವ ಪ್ರಧಾನರಾಗಿರುವುದರಿಂದ, ರಜಸ್ತಮೋಗುಣಪ್ರಧಾನರಾದ ಇತರದೇವತೆಗಳನ್ನು ಬಿಟ್ಟು ಶುದ್ಧಸತ್ವಮೂರ್ತಿಯಾದಶ್ರೀಮನ್ನಾರಾಯಣ ಣನ ಅವತಾರಗಳನ್ನೇ ಭಜಿಸುವರು. ಇಂತವರು ಯಾವಾಗಲೂ ಶಾಂತಸ್ಸ ಭಾವವುಳ್ಳವರು. ಇವರಿಗೆ ದೇವತಾಂತರಗಳಲ್ಲಿಯಾಗಲಿ, ಆ ದೇವತೆಗಳನ್ನು ಉಪಾಸನೆಮಾಡುವವರಲ್ಲಿಯಾಗಲಿ ಅಸೂಯಾದಿಗಳುಂಟಾಗವು, ರಜಸ್ತ್ರ ಮಸ್ಕೃಭಾವವುಳ್ಳವರಾದರೋ,ಶಾಶ್ವತಸುಖವಾದ ಮೋಕ್ಷದಲ್ಲಿ ದೃಷ್ಟಿಯಿ ಡದೆ,ಐಶ್ವಠ್ಯವನ್ನೂ,ಆಧಿಕಾರವನ್ನೂ, ಪುತ್ರಸಂತಾನಾದಿಗಳನ್ನೂ ಅಪೇಕ್ಷಿಸಿ ತಮ್ಮಂತೆಯೇ ರಜಸ್ತಮಸ್ಸಭಾವವುಳ್ಳ ಪಿತೃದೇವತೆಗಳನ್ನೂ ಭೂತಪತಿಗ ಛನ್ನೂ, ಬ್ರಹ್ಮಾದಿಗಳನ್ನೂ ಭಜಿಸುವರು. ಆದುದರಿಂದ ಲೋಕದಲ್ಲಿ ಮನು ಷ್ಯರಿಗೆ ತಮ್ಮ ತಮ್ಮ ಗುಣಕ್ಕನುಸಾರವಾಗಿಯೇ ದೇವತಾಂತರಗಳಲ್ಲಿಯೂ ಭಕ್ತಿಯು ಹುಟ್ಟುವುದು, ಎಲೈ ಮಹರ್ಷಿಗಳೆ ? ಅಷ್ಟೇಕೆ?ಯಾವ ವೇದಗ ಳಾಗಲಿ, ಯಾವ ಯಜ್ಞಗಳಾಗಲಿ, ವೇದಾಂತವಿಹಿತಗಳಾದ ಯೋಗಗೆ ಳಾಗಲಿ, ಸ್ಮಾರ್ತಕ್ರಿಯೆಗಳಾಗಲಿ, ಆ ವಾಸುದೇವನನ್ನೇ ವಿಷಯೇಕರಿ ಸುವುವು. ಮತ್ತು ಜ್ಞಾನವಾಗಲಿ, ತಪಸ್ಸಾಗಲಿ, ವೇದೋಕ್ತಧರಗ ಳಾಗಲಿ, ಎಲ್ಲವೂ ಅಂತರಾತ್ಮನಾದ ಆ ವಾಸುದೇವನಿಗೇ ಸಲ್ಲುವುವು. ಸ್ವ ರ್ಗಾದಿಫಲಗಳೂಕೂಡ ತದೀಯಾನಂದದ ಅಂಶಭೂತವಾಗಿಯೇ ಇರು ವುದರಿಂದ, ಅವೂ ವಾಸುದೇವಪರವೆನಿಸುವುವು, ಸಮಸ್ತಶಾಸ್ತಾರಗಳೂ ವಾಸುದೇವನಲ್ಲಿಯೇ ವರ್ತಿಸುವುವು.ಸಮಸ್ತಕ್ಕೂ ವಾಸುದೇವನೇ ಮುಖ್ಯಾ ಶ್ರಯನು. ಏಕೆಂದರೆ:-ಸೃಷ್ಟಿಗೆ ಮೊದಲು ನಾಮರೂಪವಿಭಾಗಗಳಿಲ್ಲದ