ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೨.] ಪ್ರಥಮಸ್ಕಂಧವು, ಸೂಕ್ಷಚಿದಚಿತ್ತುಗಳನ್ನೇ ತನ್ನ ಶರೀರವನ್ನಾಗಿ ಹೊಂದಿ, ತಾನೊಬ್ಬನೇ ತೋರುತಿದ್ದ ಪರಮಾತ್ಮನು, ತನಗೆ ಶರೀರಭೂತವಾಗಿಯೂ, ಸತ್ತಾಗುಣ ಭೇದಗಳುಳ್ಳುದಾಗಿಯೂ, ಮಹದಾಹಿಪೃಥಿವೀಪಲ್ಯಂತವಾಗಿ ಕಾರಕಾರಣ ರೂಪದಿಂದ ಪರಿಣಮಿಸತಕ್ಕುದಾಗಿಯೂ ಇರುವ ಆ ಪ್ರಕೃತಿಯಿಂದಲೇ ಜ ಗತ್ತನ್ನು ಸೃಷ್ಟಿಸಿ,ಆ ಸ್ಕೂಲವಸ್ತುಗಳೊಂದೊಂದರಲ್ಲಿಯೂ ತಾನೂ ಅಡಗಿ ರುವನು. ಹಾಗಿದ್ದರೂ ತಾನು ಮಾತ್ರ ಆ ಗುಣಗಳ ಸಂಬಂಧವಿಲ್ಲದಿರುವನು. ಹೀಗೆ ಆ ಪರಮಾತ್ಮನು, ಪ್ರಕೃತಿರೂಪವಾದ ಸಮಸ್ತವಸ್ತುಗಳಲ್ಲಿಯೂ ವ್ಯಾಪಿಸಿರುವುದಲ್ಲದೆ,ಅದೇ ಪ್ರಕೃತಿಸಂಬಂಧವಾದಶರೀರದಲ್ಲಿ ಸೇರಿಕೊಂಡಿರು ವ ಜೀವನನ್ನೂ ತನಗೆ ಶರೀರವನ್ನಾಗಿ ಮಾಡಿಕೊಂಡು, ಒಂದೊಂದುಜೀವ ದಲ್ಲಿಯೂ ಅನುಪ್ರವೇಶಮಾಡಿರುವನು. ಹೀಗೆ ಸರಾತ್ಮಕನಾದ ಆ ಭಗವಂ ತನು, ಮಾಯಾ (ಪ್ರಕೃತಿ) ಗುಣಕಾರಗಳಾದ ಒಂದೊಂದು ವಸ್ತುವಿನಲ್ಲಿ ಯೂ, ದೇವಾದಿಶರೀರಗಳಲ್ಲಿಯೂ, ಆ ಶರೀರಾಂತರ್ಗತವಾದ ಒಂದೊಂದು ಜೀವದಲ್ಲಿಯೂ ಸೇರಿರುವುದರಿಂದ, ಆಯಾಶರೀರಗಳ, ಮತ್ತು ಅವುಗಳಲ್ಲಿರು ವ ಜೀವಾತ್ಮನ ಧರಗಳೆಲ್ಲಕ್ಕೂ ತಾನೇ ಆಶ್ರಯನಾದಂತೆ ತೋರುವನೇ ಹೊರತು, ವಾಸ್ತವಕ್ಕೆ ಈ ಪ್ರಕೃತಿಗುಣಗಳೊಂದೂ ಆವನಲ್ಲಿ ಸಂಬಂಧಿಸ ಲಾರವು. ಹೀಗೆ ಆ ಪರಮಾತ್ಮನು ಸಾಂತಾಮಿಯಾದುದರಿಂದ ಚಿದಚಿ ರೂಪವಾದ ಈ ಪ್ರಪಂಚದಲ್ಲಿ ಆತನಿಲ್ಲದ ವಸ್ತುವೊಂದಾದರೂ ಇರುವು ದಕ್ಕವಕಾಶವಿಲ್ಲ! ಆದುದರಿಂದಲೇ ವೇದಾದಿಗಳೆಲ್ಲವೂ ಆ ವಾಸುದೇವನೊಬ್ಬ ನಲ್ಲಿಯೇ ವರ್ತಿಸುವುವು. ಮುಖ್ಯವಾಗಿ ನಾವು ಯಾವುದನ್ನು ದೈತಿಸಿಯಾವ =====- ---- ಈ ಸ್ಥಳದಲ್ಲಿ ತಿಳಿಯಬೇಕಾದ ಮುಖ್ಯಾಂಶವೇನೆಂದರೆ:-ಚಿತ್ತು, ಆಚಿತ್ತು, ಈಶ್ವರನೆಂದು ಮೂರುತಗಳು, ಚಿತ್ತೆಂದರೆ ಚೇತನಸಮುದಾಯವು, ಅಚಿತ್ತೆಂ ವರೆ ಅಚೇತನಗಳಾದ ಘಟಪಟಾದಿವಸ್ತುಗಳಾಗಿಯೂ, ಪ್ರಾಣಿಗಳ ದೇಹರೂಪವಾಗಿ ಯೂ ಪರಿಣಮಿಸತಕ್ಕೆ ಪ್ರಕೃತಿ, ಇವು ಮೂರೂ ಸ್ವತಸ್ಸಿದ್ದವಾಗಿ ನಿತ್ಯವೆನಿಸಿಕೊಂಡಿರು ವುವು. ಶರೀರದಲ್ಲಿ ಜೀವಾತ್ಮನು ಸೇರಿಕೊಂಡಿರುವಂತೆ,ಈಶ್ವರನು ಈ ಎರಡುತತ್ವಗಳ ಲ್ಲಿಯೂ ಅಂತರಾಮಿಯಾಗಿದ್ದು ಅವುಗಳಿಗೆ ತಾನೇ ಧಾರಕನಾಗಿಯೂ, ಪೋಷಕನಾ ಗಿಯೂ, ನಿಯಾಮಕನಾಗಿಯೂ ಇರುವನು. ಚಿದಚಿತ್ತಗಳೆರಡೂ ಈಶ್ವರನಿಗೆ ಶರೀರ